ಹುಬ್ಬಳ್ಳಿ: ಹತ್ಯೆಯಾದಂತ ಅಂಜಲಿ ಹಿರೇಮಠ್ ಅವರ ನಿವಾಸಕ್ಕೆ ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಭೇಟಿ ನೀಡಿದರು. ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದಂತ ಅವರು ವೈಯಕ್ತಿಕವಾಗಿ ಕುಟುಂಬಸ್ಥರಿಗೆ 50,000 ರೂ ನೀಡಿದ್ದಾರೆ.

ಇಂದು ಹುಬ್ಬಳ್ಳಿಯ ವೀರಾಪುರ ಕಾಲೋನಿಯಲ್ಲಿರುವಂತ ಹತ್ಯೆಗೊಳಗಾದಂತ ಅಂಜಲಿ ಹಿರೇಮಠ್ ಅವರ ನಿವಾಸಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ ನೀಡಿದರು. ಮಗಳ ಹತ್ಯೆಯಿಂದ ದುಃಖದಲ್ಲಿದ್ದಂತ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

ಇನ್ನೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಅಂಜಲಿ ಹಿರೇಮಠ್ ಅವರ ಕುಟುಂಬಕ್ಕೆ ವೈಯಕ್ತಿಕವಾಗಿ ರೂ.50,000 ಚೆಕ್ ವಿತರಿಸಿ, ಆರ್ಥಿಕವಾಗಿ ನೆರವಾಗಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ 490 ಕೊಲೆ 600 ರೈತರ ಆತ್ಮಹತ್ಯೆಗಳಾಗಿವೆ : ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯಾದ್ಯಂತ ಬರೋಬ್ಬರಿ 490 ಕೊಲೆಗಳು ನಡೆದಿವೆ. ಜೊತೆಗೆ, 600ಕ್ಕೂ ಅಧಿಕ ರೈತರ ಆತ್ಮಹತ್ಯೆಗಳಾಗಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದರು.

ಹುಬ್ಬಳ್ಳಿಯಲ್ಲಿ ಕೆಲವು ದಿನಗಳ ಹಿಂದೆ ಭೀಕರವಾಗಿ ಕೊಲೆಯಾದ ಅಂಜಲಿ ಮನೆಗೆ ಭೇಟಿ ನೀಡಿದ‌ ಬಳಿಕ‌ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯ ಸರ್ಕಾರಕ್ಕೆ ಗಂಭೀರತೆ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ 490 ಕೊಲೆ ಹಾಗೂ 600 ರೈತರ ಆತ್ಮಹತ್ಯೆಗಳಾಗಿವೆ. ಇದನ್ನ ಪ್ರಶ್ನೆ ಮಾಡಿದರೆ, ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಷ್ಟು ಪ್ರಕರಣಗಳಾಗಿವೆ ಅಂತಾ ಹುಡುಕಲು ಅಧಿಕಾರಿಗಳನ್ನು ನೇಮಿಸುತ್ತಾರೆ ಎಂದರು.

ರಾಜ್ಯದಲ್ಲಿ ಅನೇಕ‌ ಬಡ‌ಜನರು ತಮ್ಮ‌ ಮಕ್ಕಳನ್ನ ಕಾಲೇಜಿಗೆ ಶಾಲೆಗೆ ಕಳುಹಿಸಲು ಭಯಪಡುತ್ತಿದ್ದಾರೆ. ಗಂಭೀರ ಘಟನೆ ನಡೆದಾಗ ಯಾರೋ ಒಬ್ಬ ಅಧಿಕಾರಿ‌ಯನ್ನು ಸಸ್ಪೆಂಡ್ ಮಾಡಿ‌ ಕೈತೊಳೆದುಕೊಳ್ಳಬಾರದು. ಇಂತಹ ಘಟನೆಗಳಿಂದ ಜನರು ಭಯಗೊಂಡದ್ದಾರೆ. ಜನರೇ ಬಂದು‌ ಹೋರಾಟ ಮಾಡುವ ಪರಿಸ್ಥಿತಿಯನ್ನ‌ ಸರ್ಕಾರ ತಂದುಕೊಳ್ಳಬಾರದು.

ಇವರೆಲ್ಲರೂ ಅಧಿಕಾರಿಗಳ ವರ್ಗಾವಣೆಗೆ ಸಿಕ್ಕಾಪಟ್ಟೆ ಹಣ ತೆಗೆದುಕೊಳ್ತಾರೆ. ಗಾಂಜಾ‌ ಅಫೀಮು‌ ಚಟುವಟಿಕೆಗಳಿಗೆ‌ ಕಡಿವಾಣ ಹಾಕಲು ಆಗ್ತಿಲ್ಲ. ಕಾನೂನು‌ ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಈ‌ ಸರ್ಕಾರದಲ್ಲಿ‌‌ ಹತ್ಯೆ ಹಾಗೂ ಆತ್ಮಹತ್ಯೆ ಪ್ರಕರಣಗಳೇ ಹೆಚ್ಚಾಗುತ್ತಿದ್ದು,‌ ಅಭಿವೃದ್ದಿಯು ಸಮಾಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

BREAKING: ಜಮ್ಮು-ಕಾಶ್ಮೀರದ ‘ಪೂಂಚ್’ನಲ್ಲಿ ‘NC Rally’ ವೇಳೆ ಚಾಕು ಇರಿತ, ಮೂವರಿಗೆ ಗಾಯ

ದೇವರಾಜೇಗೌಡ ತಲೆ ಕೆಟ್ಟವನು ಆತನನ್ನು ಆಸ್ಪತ್ರೆಗೆ ಸೇರಿಸಬೇಕು : ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು

Share.
Exit mobile version