ಬೆಂಗಳೂರು: ರಾಜ್ಯದ ರಾಜ್ಯಪಾಲರಾದಂತ ಥಾವರ್ ಚಂದ್ ಗೆಹ್ಲೋಟ್ ( Karnataka Governor Thawarchand Gehlot ) ಅವರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ಪರೀಕ್ಷೆಯಿಂದ ದೃಢಪಟ್ಟಿದೆ. ಹೀಗಾಗಿ ಮನೆಯಲ್ಲಿಯೋ ಹೋಂ ಐಸೋಲೋಷನ್ ಆಗಿ ಚಿಕಿತ್ಸೆ ಪಡೆಯುತ್ತಿರೋದಾಗಿ ತಿಳಿದು ಬಂದಿದೆ.
ನಾವು ಜನರ ನಾಡಿ ಮಿಡಿತ ನೋಡಿ ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ – ಸಿದ್ಧರಾಮಯ್ಯ
ಈ ಕುರಿತಂತೆ ರಾಜ್ಯಪಾಲರ ಕಚೇರಿಯಿಂದ ( Governor Office ) ಅಧಿಕೃತವಾಗಿ ಮಾಹಿತಿ ಬಿಡುಗಡೆ ಮಾಡಿದ್ದು, ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಇಂದು ಕೋವಿಡ್ -19 ಸೋಂಕು ( Covid19 Case ) ತಗುಲಿರುವುದು ದೃಢಪಟ್ಟಿದೆ. ರಾಜ್ಯಪಾಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಮತ್ತು ಚಿಂತಿಸಲು ಏನೂ ಇಲ್ಲ ಎಂದು ಹೇಳಿದೆ.
Shri Thawarchand Gehlot, Hon'ble Governor of Karnataka, has been tested positive for Covid-19 today.
The health condition of Hon ble Governor remains stable and there is nothing to worry. pic.twitter.com/UOsML7jpF1
— Thaawarchand Gehlot Office (@TcGehlotOffice) October 1, 2022
ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಟ್ಟಿಟ್ ಮಾಡಿದ್ದು, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಕೊರೋನಾ ಸೋಂಕಿನಿಂದ ಶೀಘ್ರವಾಗಿ ಗುಣಮುಖರಾಗಿ ಎಂದಿನಂತೆ ತಮ್ಮ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
ಮಾನ್ಯ ರಾಜ್ಯಪಾಲರಾದ ಶ್ರೀ @TCGEHLOT ಅವರು ಕೊರೋನಾ ಸೋಂಕಿನಿಂದ ಶೀಘ್ರವಾಗಿ ಗುಣಮುಖರಾಗಿ ಎಂದಿನಂತೆ ತಮ್ಮ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿ ಎಂದು ಹಾರೈಸುತ್ತೇನೆ.
Shri Thawarchand Gehlot, Hon'ble Governor of Karnataka, has been tested positive for Covid-19 today.
I wish him a quick & speedy recovery https://t.co/0F0URKygsT— Basavaraj S Bommai (@BSBommai) October 1, 2022