Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Rah-Veer scheme : ರಸ್ತೆ ಅಪಘಾತ ಸಂತ್ರಸ್ತರ ನೆರವಿಗೆ ಬಂದರೆ ₹25,000 ಬಹುಮಾನ: ‘ರಹಾ-ವೀರ್’ ಯೋಜನೆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

​ಇರಾನ್ ಮೇಲೆ ಅಮೆರಿಕದ ಪ್ರತೀಕಾರದ ದಾಳಿ: ವಿವಿಧೆಡೆ ಭಾರಿ ಸ್ಫೋಟಗಳ ಸದ್ದು, ಯುದ್ಧದ ಭೀತಿ!

ಭಾರತೀಯ ರಾಜಕೀಯದಲ್ಲಿ ಹೊಸ ಇತಿಹಾಸ ಬರೆದ ಪ್ರಧಾನಿ ಮೋದಿ : ನೆಹರು ರೆಕಾರ್ಡ್ ಮುರಿದು ಬರೋಬ್ಬರಿ 4,399 ದಿನ ಸತತ ಆಡಳಿತ ನಡೆಸಿದ ನಮೋ.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗಣತಿ ಬಗ್ಗೆ ಸುಳ್ಳಿನ ಕಂತೆ ಮೇಲೆ ಕಂತೆ ಹೇಳುವ ಸರಕಾರ: ಛಲವಾದಿ ನಾರಾಯಣಸ್ವಾಮಿ ಖಂಡನೆ
KARNATAKA

ಗಣತಿ ಬಗ್ಗೆ ಸುಳ್ಳಿನ ಕಂತೆ ಮೇಲೆ ಕಂತೆ ಹೇಳುವ ಸರಕಾರ: ಛಲವಾದಿ ನಾರಾಯಣಸ್ವಾಮಿ ಖಂಡನೆ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಕೋರ್ಟಿನ ಆವರಣದಲ್ಲೇ ಶೂ ಎಸೆಯುವ ಕೃತ್ಯ ಖಂಡನೀಯ ಎಂದು ತಿಳಿಸಿದ್ದಾರೆ. ಇದು ಬಾಬಾ ಸಾಹೇಬ ಡಾ. ಅಂಬೇಡ್ಕರರು ಬರೆದ ಸಂವಿಧಾನಕ್ಕೆ ಅಪಚಾರ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇದು ಪ್ರಜಾಪ್ರಭುತ್ವಕ್ಕೆ ಅಪಚಾರ ಮಾಡುವಂಥ ಘಟನೆ. ಇದು ನ್ಯಾಯಾಂಗ ವ್ಯವಸ್ಥೆಗೆ ಆಗಿರುವ ಅಪಚಾರ ಎಂದು ಆಕ್ಷೇಪಿಸಿದರು.

ಒಬ್ಬ ವಕೀಲರು ಇಂಥ ಪುಂಡಾಟಿಕೆ ಮಾಡಿದ್ದು, ಪ್ರಧಾನಿಯವರೂ ಸೇರಿ ಎಲ್ಲರೂ ಅದನ್ನು ವಿರೋಧಿಸಿದ್ದಾರೆ. ಇದು ದೇಶವೇ ತಲೆತಗ್ಗಿಸುವ ಕೃತ್ಯ. ನಾನೂ ಇದನ್ನು ಖಂಡಿಸುತ್ತೇನೆ ಎಂದು ತಿಳಿಸಿದರು. ಇದರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಇದು ಕ್ಷಮಾಪಣೆಗೆ ಅರ್ಹ ಕೃತ್ಯವಲ್ಲ; ಆ ವ್ಯಕ್ತಿಗೆ ಕಠಿಣ ಶಿಕ್ಷೆ ಕೊಡಬೇಕೆಂದು ಒತ್ತಾಯಿಸಿದರು.

ಜಾತಿ ಜಾತಿಗಳನ್ನು ಒಡೆಯಲು ಗಣತಿ ಬಳಕೆ

ಜಾತಿ ಜನಗಣತಿ ನಡೆಯಬೇಕಾದ ರೀತಿ ನಡೆಯುತ್ತಿಲ್ಲ; ಸಾಫ್ಟ್‍ವೇರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ; 60 ಪ್ರಶ್ನೆಗೆ ಉತ್ತರಿಸಲು ಒಬ್ಬೊಬ್ಬರಿಗೆ ಒಂದೊಂದು ಗಂಟೆ ಬೇಕಾಗುತ್ತದೆ. ಸರಕಾರ ತಪ್ಪು ಅಂಕಿ ಅಂಶ ಕೊಡುತ್ತಿದೆ. ನಿನ್ನೆಯೇ ಶೇ 65 ಗಣತಿ ಮುಗಿದಿದೆ ಎಂದಿದ್ದಾರೆ. ಬೆಂಗಳೂರಿನಲ್ಲಿ ಯಾರ ಮನೆಯಲ್ಲೂ ಪ್ರಾರಂಭವೇ ಆಗಿಲ್ಲ ಎಂದು ಗಮನ ಸೆಳೆದರು.

ಇವತ್ತು ಅಪಾರ್ಟ್‍ಮೆಂಟ್‍ಗಳಲ್ಲಿ ಪ್ರಾರಂಭ ಮಾಡುತ್ತಾರಂತೆ. ಸುಳ್ಳಿನ ಕಂತೆ ಮೇಲೆ ಕಂತೆ ಹೇಳುವ ಕೆಲಸ ಸರಕಾರದ್ದು ಎಂದು ಟೀಕಿಸಿದರು. ಬಿಜೆಪಿ ಇದನ್ನು ವಿರೋಧಿಸುತ್ತದೆ ಎಂದಿದ್ದರು. ನಮ್ಮ ವಿರೋಧ ಇಲ್ಲ; ಕೋರ್ಟ್ ಆದೇಶ ಪ್ರಕಾರ ಏನಾಗಬೇಕೋ ಅದನ್ನು ಮಾಡಿ ಎಂದು ಒತ್ತಾಯಿಸಿದರು.

ಜಾತಿ ಜಾತಿಗಳನ್ನು ಒಡೆಯಲು ಗಣತಿಯನ್ನು ಬಳಸುತ್ತಿದ್ದಾರೆ. ಸತ್ಯಾಸತ್ಯತೆ ಹೊರಬರಬೇಕು. ಯಾರಿಗೆ ಸೌಲಭ್ಯ ಸಿಕ್ಕಿಲ್ಲವೋ ಅವರಿಗೆ ಕೊಡಬೇಕೆಂಬುದು ನಿಮ್ಮ ಉದ್ದೇಶವಲ್ಲ ಎಂಬುದು ನೀವೇ ಹೇಳಿದ್ದೀರಿ. ಮುಖ್ಯಮಂತ್ರಿಗಳು ದ್ವಂದ್ವ ಹೇಳಿಕೆ ಕೊಡುತ್ತಾರೆ. ವೀರಶೈವರು, ಲಿಂಗಾಯತರಿಗೆ ಇಲ್ಲದ ಕಾಳಜಿ ಮುಖ್ಯಮಂತ್ರಿಗಳಿಗೆ ಯಾಕೆ ಎಂದು ಕೇಳಿದರು. ಅದು ಪ್ರತ್ಯೇಕ ಧರ್ಮ ಎನ್ನಲು ಇವರೇನು ಧರ್ಮಗುರುಗಳೇ ಎಂದು ಪ್ರಶ್ನಿಸಿದರು. ಈ ರೀತಿ ದ್ವಂದ್ವಕ್ಕೆ ತೆರೆ ಎಳೆಯಲು ಒತ್ತಾಯಿಸಿದರು.

ಜನರ ದಾರಿ ತಪ್ಪಿಸುವ ಕೆಲಸ

ಪರಿಶಿಷ್ಟ ಜಾತಿ ವರ್ಗದವರು ಬೌದ್ಧರಾದರೆ ಅವರಿಗೆ ಮೀಸಲಾತಿ ಕೊಡುವುದಾಗಿ ಇವತ್ತು ಹೇಳಿದ್ದಾರೆ. ಇದು ತಪ್ಪು ಕಲ್ಪನೆ. ಇದು ಜನರನ್ನು ದಾರಿ ತಪ್ಪಿಸುವಂತಿದೆ. ನರೇಂದ್ರ ಮೋದಿ ಜೀ ಅವರ ಸರಕಾರ ಇದನ್ನು ಮಾಡಿದೆ. ಇದು ಇಡೀ ದೇಶಕ್ಕೆ ಸಂಬಂಧಿಸಿದ ವಿಚಾರ ಎಂದು ವಿವರಿಸಿದರು.

ನಾವೇ ಪರಿಶಿಷ್ಟ ಜಾತಿ, ವರ್ಗದವರಿಗೆ ಅನುಕೂಲ ಮಾಡಿದ್ದೇವೆ; ನಾವೇ ಕೊಡುತ್ತಿದ್ದೇವೆ ಎಂಬಂತೆ ಬಿಂಬಿಸಿ ನಿನ್ನೆ ಒಂದು ಆದೇಶ ಹೊರಡಿಸಿದ್ದಾರೆ. ಜನರನ್ನು ತಪ್ಪು ದಾರಿಗೆ ಎಳೆಯಲು ತಾವೇ ಕೊಟ್ಟಿದ್ದಾಗಿ ಹೇಳಿಕೊಳ್ಳಲು ಮಾಡಿದ ಈ ಕ್ರಮ ಖಂಡನೀಯ. ಇದು ಕೇಂದ್ರ ಸರಕಾರದ ನೀತಿಯಲ್ಲಿ ಬರುತ್ತದೆ ಎಂದು ತಿಳಿಸಿದರು. ಪರಿಶಿಷ್ಟ ಜಾತಿಯಿಂದ ಬೌದ್ಧ ಧರ್ಮ ಸೇರಿದವರಿಗೆ ಮೋದಿಯವರ ಸರಕಾರ ಮೀಸಲಾತಿ ಕೊಡುತ್ತಿದೆ. ಇದು ಹೊಸದೇನೂ ಅಲ್ಲ ಎಂದು ಅರ್ಥ ಮಾಡಿಕೊಳ್ಳಿ ಎಂದು ವಿನಂತಿಸಿದರು.

‘ಜಲ ಸಂಚಯ ಜನ ಭಾಗಿದಾರಿ’ ಅಭಿಯಾನದಡಿ ಜಲ ಸಂರಕ್ಷಣೆ: 7 ಜಿಲ್ಲೆಗಳಿಗೆ ರಾಷ್ಟ್ರೀಯ ಪ್ರಶಸ್ತಿ- ಸಚಿವ ಪ್ರಿಯಾಂಕ್ ಖರ್ಗೆ ಹರ್ಷ

30ಕ್ಕೂ ಹೆಚ್ಚು ವರ್ಷಗಳಿಂದ ಹಕ್ಕುಪತ್ರ, ಮೂಲ ಸೌಕರ್ಯಗಳಿಲ್ಲ: ಮದ್ದೂರು ಶಾಸಕ ಉದಯ್ ಮುಂದೆ ಜನರ ಅಳಲು

Share. Facebook Twitter LinkedIn WhatsApp Email

Related Posts

ಇನ್ಮುಂದೆ UPIನಲ್ಲೇ ಸಿಗುತ್ತೆ ಸಾಲ: ನಿಮ್ಮ ಮೊಬೈಲ್‌ ನಲ್ಲೇ ಆಕ್ಟಿವೇಟ್ ಆಗಲಿದೆ ‘ಮಿನಿ ಕ್ರೆಡಿಟ್ ಕಾರ್ಡ್’!

2 Mins Read

ಗಮನಿಸಿ : `ಆಧಾರ್ ಕಾರ್ಡ್‌’ನಲ್ಲಿ ನಿಮ್ಮ ಹಳೆಯ ಫೋಟೋ ಬದಲಾಯಿಸುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

2 Mins Read

ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ : ಬಸ್ ಪ್ರಯಾಣಕ್ಕಾಗಿ ಶೀಘ್ರವೇ ಉಚಿತ `ಶಕ್ತಿ ಸ್ಮಾರ್ಟ್ ಕಾರ್ಡ್’ ವಿತರಣೆ

2 Mins Read
Recent News

Rah-Veer scheme : ರಸ್ತೆ ಅಪಘಾತ ಸಂತ್ರಸ್ತರ ನೆರವಿಗೆ ಬಂದರೆ ₹25,000 ಬಹುಮಾನ: ‘ರಹಾ-ವೀರ್’ ಯೋಜನೆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

​ಇರಾನ್ ಮೇಲೆ ಅಮೆರಿಕದ ಪ್ರತೀಕಾರದ ದಾಳಿ: ವಿವಿಧೆಡೆ ಭಾರಿ ಸ್ಫೋಟಗಳ ಸದ್ದು, ಯುದ್ಧದ ಭೀತಿ!

ಭಾರತೀಯ ರಾಜಕೀಯದಲ್ಲಿ ಹೊಸ ಇತಿಹಾಸ ಬರೆದ ಪ್ರಧಾನಿ ಮೋದಿ : ನೆಹರು ರೆಕಾರ್ಡ್ ಮುರಿದು ಬರೋಬ್ಬರಿ 4,399 ದಿನ ಸತತ ಆಡಳಿತ ನಡೆಸಿದ ನಮೋ.!

ಇನ್ಮುಂದೆ UPIನಲ್ಲೇ ಸಿಗುತ್ತೆ ಸಾಲ: ನಿಮ್ಮ ಮೊಬೈಲ್‌ ನಲ್ಲೇ ಆಕ್ಟಿವೇಟ್ ಆಗಲಿದೆ ‘ಮಿನಿ ಕ್ರೆಡಿಟ್ ಕಾರ್ಡ್’!

State News
KARNATAKA

ಇನ್ಮುಂದೆ UPIನಲ್ಲೇ ಸಿಗುತ್ತೆ ಸಾಲ: ನಿಮ್ಮ ಮೊಬೈಲ್‌ ನಲ್ಲೇ ಆಕ್ಟಿವೇಟ್ ಆಗಲಿದೆ ‘ಮಿನಿ ಕ್ರೆಡಿಟ್ ಕಾರ್ಡ್’!

By kannadanewsnow57 KARNATAKA 2 Mins Read

ಬೆಂಗಳೂರು: ಭಾರತದಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಈಗ ಯುಪಿಐ (UPI) ಕೇವಲ ಹಣ ವರ್ಗಾವಣೆ ಮಾಡುವ…

ಗಮನಿಸಿ : `ಆಧಾರ್ ಕಾರ್ಡ್‌’ನಲ್ಲಿ ನಿಮ್ಮ ಹಳೆಯ ಫೋಟೋ ಬದಲಾಯಿಸುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ : ಬಸ್ ಪ್ರಯಾಣಕ್ಕಾಗಿ ಶೀಘ್ರವೇ ಉಚಿತ `ಶಕ್ತಿ ಸ್ಮಾರ್ಟ್ ಕಾರ್ಡ್’ ವಿತರಣೆ

Rent Agreement: ಬಾಡಿಗೆ ಒಪ್ಪಂದ ಕೇವಲ 11 ತಿಂಗಳಿಗೆ ಮಾತ್ರ ಏಕೆ? 12 ತಿಂಗಳು ಏಕಿಲ್ಲ? ಇಲ್ಲಿದೆ ಅಸಲಿ ರಹಸ್ಯ.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.