ಕೆಎನ್ಎನ್ಡಿಜಿಟಲ್ ಡೆಸ್ಕ್ : ಎರಡು ದಿನಗಳ ನಂತ್ರ ಹೊಸ ವರ್ಷ ಬರಲಿದೆ. ಅನೇಕರು ಇದನ್ನ ಸ್ನೇಹಿತರು, ಕುಟುಂಬ, ಬಂಧುಗಳು ಇತ್ಯಾದಿಗಳೊಂದಿಗೆ ಆಚರಿಸುತ್ತಾರೆ. ಪ್ರತಿಯೊಬ್ಬರೂ ಆಚರಿಸುವ ರೀತಿ ವಿಭಿನ್ನವಾಗಿರುತ್ತದೆ. ಇಂಟರ್ನೆಟ್ ಆಗಮನದ ನಂತ್ರ ವಿಧಾನವು ಮತ್ತಷ್ಟು ಬದಲಾಯಿತು.
ಹೊಸ ವರ್ಷದ ದಿನದಂದು ನಿಮ್ಮ ಮೊಬೈಲ್ ಫೋನ್ನಲ್ಲಿ ಪ್ರತಿಯೊಬ್ಬರ ಸಂದೇಶಗಳು ಒಂದೊಂದಾಗಿ ಹೇಗೆ ಬರಲು ಪ್ರಾರಂಭಿಸುತ್ತವೆ ಎಂಬುದನ್ನ ನೀವು ನೋಡುತ್ತೀರಿ. ಇವಕ್ಕೆಲ್ಲ ಕೂತು ಉತ್ತರಿಸಲು ಒಂದು ಗಂಟೆಗೂ ಹೆಚ್ಚು ಸಮಯ ಹಿಡಿಯುತ್ತದೆ. ಹೀಗಾಗಿ ಈ ವರ್ಷ ನಿಮ್ಮ ಸಮಯವನ್ನ ವ್ಯರ್ಥ ಮಾಡಬೇಡಿ. ವಾಟ್ಸಾಪ್’ನಲ್ಲಿ ಈ ಹೊಸ ವೈಶಿಷ್ಟ್ಯವನ್ನ ಬಳಸಿಕೊಂಡು ನೀವು ಒಂದೇ ಕ್ಲಿಕ್ನಲ್ಲಿ 250ಕ್ಕೂ ಹೆಚ್ಚು ಜನರಿಗೆ ಸಂದೇಶ ಕಳಿಸಬಹುದು. ವಾಟ್ಸಾಪ್ ಅದ್ಭುತ ವೈಶಿಷ್ಟ್ಯದಿಂದ ನೀವು ಚಿಟಿಕೆಯಲ್ಲಿ ಅನೇಕ ಜನರಿಗೆ ಸಂದೇಶಗಳನ್ನ ಕಳುಹಿಸಬಹುದು.
ಈ ವೈಶಿಷ್ಟ್ಯದ ಅಡಿಯಲ್ಲಿ ನೀವು ಪಠ್ಯ ಸಂದೇಶಗಳನ್ನ ಮಾತ್ರವಲ್ಲದೇ ಫೋಟೋಗಳನ್ನ ಸಹ ಕಳುಹಿಸಬಹುದು. ವಾಟ್ಸಾಪ್ ಬ್ರಾಡ್ಕಾಸ್ಟ್ ಸಂದೇಶ ವೈಶಿಷ್ಟ್ಯವು ಈ ವರ್ಷ ನಿಮಗೆ ಬಹಳಷ್ಟು ಸಹಾಯ ಮಾಡುತ್ತದೆ. ಇದರೊಂದಿಗೆ ಏಕಕಾಲದಲ್ಲಿ ಹಲವಾರು ಜನರಿಗೆ ಸಂದೇಶಗಳನ್ನ ಕಳುಹಿಸಲು ಸಾಧ್ಯವಾಗುತ್ತದೆ. ಗ್ರೂಪ್ ಮೂಲಕ ಮೆಸೇಜ್ ಬಂದಿರುವುದು ಎದುರಿನ ವ್ಯಕ್ತಿಗೂ ಗೊತ್ತಗೋದಿಲ್ಲ ಅನ್ನೋದು ವಿಶೇಷ.
ಬ್ರಾಡ್ಕಾಸ್ಟಿಂಗ್ ಮೆಸೇಜ್ ಕಳಿಸುವುದು ಹೇಗೆ.?
ಮೊದಲು ನಿಮ್ಮ ಮೊಬೈಲ್ನಲ್ಲಿ ವಾಟ್ಸಾಪ್ ತೆರೆಯಿರಿ. ಇದರ ನಂತರ, ಮೇಲೆ ಗೋಚರಿಸುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನೀವು New Broadcast ಆಯ್ಕೆಯನ್ನು ಆರಿಸಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ. ಈಗ ನೀವು ಹೊಸ ವರ್ಷದ ಸಂದೇಶ ಅಥವಾ ಇನ್ನಾವುದೇ ಸಂದೇಶವನ್ನು ಕಳುಹಿಸಲು ಬಯಸುವ ಜನರನ್ನು ಆಯ್ಕೆ ಮಾಡಬೇಕು.