ಸಿನಿಮಾ ಡೆಸ್ಕ್ : ಸ್ಯಾಂಡಲ್ವುಡ್ಗೆ ಕಮ್ಬ್ಯಾಕ್ ಆಗಲಿದ್ದೇನೆ , ನಾನು ನಿರ್ಮಾಪಕಿಯಾಗಿ ವಾಪಸ್ಸು ಬರುವುದಾಗಿ ಹೇಳಿದ್ದ ಮೋಹಕ ತಾರೆ ರಮ್ಯಾ ( Actor Ramya) ಇದೀಗ ಮತ್ತೊಂದು ಬಿಗ್ ಸರ್ಪೈಸ್ ನೀಡಲಿದ್ದಾರೆ.
ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನ ಕಾಂತಾರ ಸಿನಿಮಾ ನಿನ್ನೆ ಬೆಂಗಳೂರಿನ ಒಬರಾಯನ್ ಮಾಲ್ ನಲ್ಲಿ ಪ್ರೀಮಿಯರ್ ಶೋ ಇತ್ತು. ಈ ಸಿನಿಮಾ ನೋಡಿ ಶೆಟ್ರಿಗೆ ರಮ್ಯಾ ಜೈಕಾರ ಹಾಕಿದ್ದಾರೆ. ಸಿನಿಮಾ ನೋಡಿ ಹೊರಬಂದ ನಂತರ ಸುದ್ದಿಗಾರರ ಜೊತೆ ಕೆಲಹೊತ್ತು ಮಾತನಾಡಿದ್ದಾರೆ.
ಈ ಸಂದರ್ಭದಲ್ಲಿ ಸುದ್ದಿಗಾರರು ನೀವು ಕನ್ನಡದ ಸಿನಿಮಾಗಳಿಗೆ ತುಂಬಾ ಪ್ರೋತ್ಸಾಹ ನೀಡುತ್ತೀರಿ, ರಿಷಬ್ ಹಾಗೂ ರಕ್ಷಿತ್ ಶೆಟ್ಟಿ ಸಿನಿಮಾಗೆ ಬಹಳ ಪ್ರೋತ್ಸಾಹ ನೀಡುತ್ತೀರಿ.. ಅದೇ ರೀತಿ KRG ಹಾಗೂ ಹೊಂಬಾಳೆ ಜೊತೆ ಒಳ್ಳೆ ಸಂಬಂಧ ಇಟ್ಟುಕೊಂಡಿದ್ದೀರಿ, ಮುಂದೆ ನೀವು ಕೂಡ ಸಿನಿಮಾ ಪ್ರೊಡಕ್ಷನ್ ಮಾಡಲಿದ್ದೀರಿ,, ಈ ತಂಡದಲ್ಲಿ ನಿಮ್ಮ ಪಾತ್ರ ಏನಾದರೂ ಉಂಟಾ..? ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಮ್ಯಾ ‘ ಅಕ್ಟೋಬರ್ 5 ರಂದು ನಾನು ಬಹುದೊಡ್ಡಅನೌನ್ಸ್ ಮೆಂಟ್ ಮಾಡುತ್ತೇನೆ, ಅದಕ್ಕಾಗಿ ನೀವು ಕಾಯಿರಿ ಎಂದಿದ್ದಾರೆ. ಈ ಮೂಲಕ ಮೋಹಕ ತಾರೆ ರಮ್ಯಾ ಇದೀಗ ಮತ್ತೊಂದು ಬಿಗ್ ಸರ್ಪೈಸ್ ನೀಡಲಿದ್ದಾರೆ.
ರಮ್ಯಾ ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡಿರುವ ಒಬ್ಬ ನಟಿ. ಹುಟ್ಟು ಹೆಸರು ದಿವ್ಯ ಸ್ಪಂದನ. ರಮ್ಯಾರವರು ‘ಅಭಿ’ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ನಟಿಸುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಇವರು ‘ತನನಂ ತನನಂ’ ಮತ್ತು ‘ಸಂಜು ವೆಡ್ಸ್ ಗೀತಾ’ ಚಿತ್ರಗಳಿಗೆ ಎರಡು ಬಾರಿ ಬೆಸ್ಟ್ ಫಿಲಂಫೇರ್ ಪ್ರಶಸ್ತಿ ಯನ್ನು ತಮ್ಮದಾಗಿಸಿಕೊಂಡಿದ್ದಾರೆ. ರಮ್ಯ ಅವರು ಕರ್ನಾಟಕ ರಾಜ್ಯದ ಪ್ರದೇಶ ಕಾಂಗ್ರೆಸ್ ನ ಸಕ್ರಿಯ ಸದಸ್ಯರಾಗಿದ್ದು, ಮಂಡ್ಯ ಕ್ಷೇತ್ರದಿಂದ ಲೋಕಸಭೆ ಸದಸ್ಯರಾಗಿಯೂ ಆಯ್ಕೆಯಾಗಿದ್ದರು..
BIG NEWS: ಮಿಥುನ್ ರೈ ಎಲ್ಲಿ, ಸೆಲ್ಫಿ ತೆಗೆದುಕೊಳ್ಳಲು ಬರ್ಲಿ: ಶೋಭಾ ಕರಂದ್ಲಾಜೆ ತಿರುಗೇಟು