ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ರಾಜ್ಯದ ದ್ರಾಕ್ಷಿ ಬೆಳೆಗಾರರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ದ್ರಾಕ್ಷಿಗೆ ಜಾಗತಿಕ ಸೂಚಿ (ಜಿಐ) ಟ್ಯಾಗ್ ನೀಡುವ ಕುರಿತಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಅನುಮೋದನೆ ಸಿಗಲಿದೆಯಂತೆ.
ಈ ಬಗ್ಗೆ ದ್ರಾಕ್ಷಿ ಮತ್ತು ದ್ರಾಕ್ಷಾ ರಸ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಸೋಮು ಟಿ. ಮಾತನಾಡಿದ್ದು, ವಿಜಯಪುರ, ಬಾಗಲಕೋಟೆ ಸೇರಿ ಉತ್ತರ ಕರ್ನಾಟಕದ ಭಾಗದ ಜಿಲ್ಲೆಗಳಲ್ಲಿ ಬೆಳೆಯುವ ದ್ರಾಕ್ಷಿಗೆ ಹೆಚ್ಚಿನ ಬೇಡಿಕೆಯಿದೆ. ಇಲ್ಲಿನ ಉತ್ತಮ ಗುಣ ಮಟ್ಟದ ಒಣ ದ್ರಾಕ್ಷಿಗೆ ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿ ಬಹು ಬೇಡಿಕೆ ಇದೆ ಎಂದಿದ್ದಾರೆ. ಈ ಹಿನ್ನೆಲೆ ದ್ರಾಕ್ಷಿಗೆ ಜಾಗತಿಕ ಸೂಚಿ (ಜಿಐ) ಟ್ಯಾಗ್ ನೀಡುವ ಕುರಿತಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಅನುಮೋದನೆ ಸಿಗಲಿದೆ ಎಂದರು.
ಉತ್ತರ ಕರ್ನಾಟಕದ ಕೃಷ್ಣಾ ನದಿ ಕಣಿವೆ ಭಾಗದಲ್ಲಿ ಬರುವ ಬಿಜಾಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಹೆಚ್ಚಾಗಿ ದ್ರಾಕ್ಷಿ ಬೆಳೆಯಲಾಗುತ್ತಿದ್ದು ಈ ಪ್ರದೇಶವನ್ನು ಕೃಷ್ಣಾ ಕಣಿವೆ ಎಂದು ಗುರುತಿಸಲಾಗಿದೆ. ಅವಿಭಜಿತ ಬಿಜಾಪುರ ಜಿಲ್ಲೆಯಲ್ಲಿ ಸುಮಾರು 200 ವರ್ಷಗಳಿಂದ ದ್ರಾಕ್ಷಿ ಬೆಳೆಯಲಾಗುತ್ತಿದ್ದು, ಇಲ್ಲಿನ ಬಿಸಿಲು ದಿನಗಳು ಮತ್ತು ತಂಪಾದ ರಾತ್ರಿಗಳು ತುಂಬಿದ ವಾತಾವರಣ ದ್ರಾಕ್ಷಿ ಬೆಳೆಗೆ ಅತ್ಯುತ್ತಮ ವಾತಾವರಣವಾಗಿದ್ದು, ಇಲ್ಲಿನ ದ್ರಾಕ್ಷಿ ಹೊರದೇಶಗಳಲ್ಲೂ ರಫ್ತು ಗುಣಮಟ್ಟವನ್ನು ಕಾಯ್ದುಕೊಂಡಿದೆ. ಬೆಂಗಳೂರು ಸುತ್ತ ಮುತ್ತ ನಂದಿ ಬೆಟ್ಟದ ಕಣಿವೆಯಲ್ಲಿ ಬರುವ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳು ದ್ರಾಕ್ಷಿ ಬೆಳೆಗೆ ಹೆಸರುವಾಸಿಯಾಗಿದ್ದು ಈ ಪ್ರದೇಶವನ್ನು ನಂದಿ ಕಣಿವೆ ಎಂದು ಗುರುತಿಸಲಾಗಿದೆ. ಇಲ್ಲಿ ಹೆಚ್ಚಾಗಿ ಬೆಳೆಯುವ ’ಬೆಂಗಳೂರು ಬ್ಲ್ಯೂ’ ಎಂಬ ತಳಿ ಜಾಗತೀಕವಾಗಿ ಮನ್ನಣೆ ಪಡೆದಿದೆ.
BREAKING NEWS: ಅವಿವಾಹಿತ ಮಹಿಳೆ 24 ವಾರಗಳವರೆಗೆ ಗರ್ಭಪಾತಕ್ಕೆ ಒಳಗಾಗಬಹುದು: ಸುಪ್ರೀಂ ಕೋರ್ಟ್