ನವದೆಹಲಿ : 70 ವರ್ಷಕ್ಕಿಂತ ಮೇಲ್ಪಟ್ಟ 5 ಕೋಟಿ ಹಿರಿಯ ನಾಗರಿಕರಿಗೆ ಸರ್ಕಾರವು ದೊಡ್ಡ ಉಡುಗೊರೆಯನ್ನ ನೀಡಬಹುದು. ಹಿರಿಯ ನಾಗರಿಕರಿಗೆ ಅವರ ಮನೆಗಳಲ್ಲಿ ಮೂಲಭೂತ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ಸರ್ಕಾರ ಶೀಘ್ರದಲ್ಲೇ ಸಿದ್ಧತೆ ನಡೆಸುತ್ತಿದೆ. ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ಹಣಕಾಸು ಸೇವೆಗಳ ಇಲಾಖೆ (DFS) ಬ್ಯಾಂಕರ್ಗಳಿಗಾಗಿ ಹೊಸ ನಿಯಮಗಳನ್ನು ಪ್ರಕಟಿಸಲಿದೆ, ಇದರಲ್ಲಿ ಕೆಲವು ಬ್ಯಾಂಕ್ ಶಾಖೆಗಳು ಹಿರಿಯ ನಾಗರಿಕರಿಗೆ ತಮ್ಮ ಮನೆಯಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಬೇಕಾಗುತ್ತದೆ.
ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಗಳು ಹಿರಿಯ ನಾಗರಿಕರಿಗೆ ಮಾತ್ರವಲ್ಲದೆ ಅಂಗವಿಕಲರಿಗೂ ಲಭ್ಯವಿರುತ್ತವೆ. ಈ ಸೇವೆಗೆ ಅತ್ಯಂತ ಕಡಿಮೆ ಬಳಕೆದಾರ ಶುಲ್ಕವನ್ನು ನಿಗದಿಪಡಿಸಲಾಗುತ್ತದೆ. ಅಲ್ಲದೆ, ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೌಲಭ್ಯಕ್ಕಾಗಿ ಸಾರ್ವತ್ರಿಕ ಫೋನ್ ಸಂಖ್ಯೆಯನ್ನು ಪ್ರಾರಂಭಿಸಲಾಗುವುದು. ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಗಳಿಗಾಗಿ, ಬ್ಯಾಂಕಿಂಗ್ ವಲಯದ ನಿಯಂತ್ರಕ ಆರ್ಬಿಐ ಎರಡು ಬಾರಿ ಆದೇಶಗಳನ್ನ ಹೊರಡಿಸಿದೆ. ಇದರಲ್ಲಿ ಮೊದಲ ಗಡುವನ್ನ ಡಿಸೆಂಬರ್ 31, 2017ರಂದು ಬ್ಯಾಂಕುಗಳಿಗೆ ನೀಡಲಾಯಿತು ಮತ್ತು ಎರಡನೇ ಗಡುವನ್ನ 30 ಏಪ್ರಿಲ್ 2020 ರಂದು ನೀಡಲಾಯಿತು. ಆದರೆ ಇಡೀ ದೇಶದಲ್ಲಿ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ಇನ್ನೂ ಪ್ರಾರಂಭವಾಗಿಲ್ಲ. ಆದರೆ ಅಧಿಸೂಚನೆಯನ್ನು ಹೊರಡಿಸುವ ಮೂಲಕ ನಿಗದಿತ ಕಾಲಮಿತಿಯೊಳಗೆ ಈ ಸೇವೆಯನ್ನ ಪ್ರಾರಂಭಿಸಲು ಸರ್ಕಾರ ಬಯಸುತ್ತದೆ.
ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಗಳ ಅಡಿಯಲ್ಲಿ, ಖಾತೆ ತೆರೆಯುವುದು, ಸ್ಥಿರ ಠೇವಣಿಗಳು, ಪಿಂಚಣಿ ಸೇವೆಗಳು, ವಿಮೆ, ಹೂಡಿಕೆ ಮತ್ತು ಸಾಲಗಳಂತಹ ಸೌಲಭ್ಯಗಳನ್ನು ನೀಡಲಾಗುವುದು. ಈ ಸೇವೆಗಾಗಿ ಗುರುತಿಸಲಾಗುವ ಬ್ಯಾಂಕುಗಳ ಶಾಖೆಗಳಿಗೆ ಈ ಸೇವೆಯನ್ನು ಒದಗಿಸುವುದು ಅಗತ್ಯವಾಗಿರುತ್ತದೆ. ನಂತ್ರ ಇತರ ಶಾಖೆಗಳನ್ನ ಸಹ ಈ ಸೇವೆಯೊಂದಿಗೆ ಸಂಪರ್ಕಿಸಲಾಗುವುದು.
ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA) ಹಣಕಾಸು ಸೇವೆಗಳ ಇಲಾಖೆಯ ಸಹಯೋಗದೊಂದಿಗೆ ನ್ಯೂ ಬ್ಯಾಂಕರ್ಸ್ ಗೈಡ್’ನ ಕರಡನ್ನು ಸಿದ್ಧಪಡಿಸಿದೆ. ಅಧಿಸೂಚನೆ ಹೊರಡಿಸುವ ಮೊದಲು ಅದನ್ನ ಸಿಸಿಪಿಡಿ (ವಿಕಲಚೇತನರ ಮುಖ್ಯ ಆಯುಕ್ತರು) ಮುಂದೆ ಇರಿಸಲಾಗುವುದು. ಜೂನ್’ನಲ್ಲಿಯೇ ಹಣಕಾಸು ಸೇವೆಗಳ ಇಲಾಖೆ ಆರ್ಬಿಐ, ಪಿಎಫ್ಆರ್ಡಿಎ, ಓರಿಯಂಟಲ್ ಇನ್ಶೂರೆನ್ಸ್, ಎಲ್ಐಸಿ ಮತ್ತು ಐಬಿಎ ಪ್ರತಿನಿಧಿಗಳೊಂದಿಗೆ ಈ ಬಗ್ಗೆ ಚರ್ಚಿಸಿತ್ತು. ಈ ಸಭೆಯಲ್ಲಿ, 2017 ರ ಬ್ಯಾಂಕರ್ಸ್ ಗೈಡ್ ನವೀಕರಿಸಲು ಐಬಿಎಗೆ ಕೇಳಲಾಯಿತು.
ಮನೆ ಬಾಗಿಲಿಗೆ ಸೇವೆಗಳ ವಿತರಣೆಯಲ್ಲಿ, ಬ್ಯಾಂಕಿಂಗ್ ಸೇವೆಗಳು ಮಾತ್ರವಲ್ಲದೆ, ವಿಮೆ ಮತ್ತು ಕರೆನ್ಸಿ ಸೇವೆಗಳನ್ನ ಸಹ ಅದರ ವ್ಯಾಪ್ತಿಗೆ ತರಲಾಗುವುದು. ಅಂತಹ ಸೇವೆಗಳನ್ನ ಒದಗಿಸುವ ಶಾಖೆಗಳ ಬಗ್ಗೆ ವೆಬ್ಸೈಟ್ನಲ್ಲಿ ಸಂಪೂರ್ಣ ಮಾಹಿತಿಯನ್ನ ನವೀಕರಿಸಲು ಬ್ಯಾಂಕುಗಳನ್ನ ಕೇಳಲಾಗಿದೆ.