ಬೆಂಗಳೂರು : ಹೆಚ್ಚಿತ್ತಿರುವ ಬೆಲೆ ಏರಿಕೆ ನಡುವೆ ರಾಜ್ಯ ಸರ್ಕಾರ ರೈತರಿಗೆ ನೆರವಾಗಲು ಮುಂದಾಗಿದ್ದು, ರೈತರು ಡಿಸೇಲ್ ಖರೀದಿಸಲು ಶೀಘ್ರ ಹಣ ಕಳಿಸುವುದಾಗಿ ತಿಳಿಸಿದೆ.
ಹೌದು, ಕೃಷಿಕರಿಗೆ ಹೊರೆಯಾಗ್ತಿರುವ ಇಂಧನ ವೆಚ್ಚವನ್ನ ತಗ್ಗಿಸಲು ಸರ್ಕಾರ ಈ ಹಿಂದಿನ ಬಜೆಟ್ನಲ್ಲಿ ಘೋಷಿಸಿದ ರೈತ ಶಕ್ತಿ ಯೋಜನೆಯನ್ನ ಶೀಘ್ರವೇ ಜಾರಿಗೊಳಿಸುವುದಾಗಿ ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ್, “ರೈತರಿಗೆ ನೆರವಾಗುವ ಈ ಯೋಜನೆಯನ್ನ ಇದೇ ಸೆಪ್ಟೆಂಬರ್ ತಿಂಗಳಿನಿಂದ ಆರಂಭಿಸಲು ನಿರ್ಧರಿಸಲಾಗಿದೆ ” ಎಂದರು.
ಅಂದ್ಹಾಗೆ, ಸರ್ಕಾರ ಇತ್ತೀಚಿಗೆ ಪ್ರತಿ ಎಕರೆಗೆ 250 ರೂಪಾಯಿಯಂತೆ ಗರಿಷ್ಠ 5 ಎಕರೆಯವರೆಗೆ ಡಿ.ಬಿ.ಟಿ (DBT) ಮೂಲಕ ಡೀಸೆಲ್ ಸಹಾಯಧನ ನೀಡುವ ರೈತಶಕ್ತಿ ಅನ್ನೋ ಕಾರ್ಯಕ್ರಮವನ್ನ ಜಾರಿಗೊಳಿಸಿದೆ. ಈ ಯೋಜನೆಯ ಮೂಲಕ ಸಹಾಯಧನ ಲಭ್ಯವಾಗಲಿದ್ದು, ರೈತರು ಕೃಷಿ ಇಲಾಖೆ ಮೂಲಕ ಸೌಲಭ್ಯ ಪಡೆಯಬಹುದು. ಇನ್ನು ಈ ಸೌಲಭ್ಯ ಪಡೆಯಲು ರೈತರು ಫೂಟ್ಸ್ ಪೋರ್ಟಲ್ʼನಲ್ಲಿ ಹೆಸರು ನೋಂದಾಯಿಸಿಕೊಳ್ಳೋದು ಕಡ್ಡಾಯವಾಗಿದೆ.