ಬೆಂಗಳೂರು : ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಕಾರ್ಮಿಕರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಕನಿಷ್ಟ ವೇತನವನ್ನು ರಾಜ್ಯ ಸರ್ಕಾರವು ಪರಿಷ್ಕರಿಸಿದೆ.
BIGG NEWS : ಮದ್ಯ ಪ್ರಿಯರೇ ಗಮನಿಸಿ : ಈ ಜಿಲ್ಲೆಯಲ್ಲಿ ಆಗಸ್ಟ್ 7 ರಿಂದ 10 ರವರೆಗೆ ಮದ್ಯ ಮಾರಾಟ ನಿಷೇಧ
ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ಪರಿಷ್ಕೃತ ಕನಿಷ್ಠ ವೇತನವನ್ನು ಅಧಿಸೂಚನೆ ಹೊರಡಿಸಿದ್ದು,ಕನಿಷ್ಟ ವೇತನ ಶೇ. 10 ರಷ್ಟು ಹೆಚ್ಚಳ ಮಾಡಲಾಗಿದೆ. ಇದರಲ್ಲಿ ಬಿಬಿಎಂಪಿಯೂ ಸೇರಿದೆ. ಬಿಬಿಎಂಪಿ ಮತ್ತು ಇತರ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ರಸಾಯನಶಾಸ್ತ್ರಜ್ಞರು ಮತ್ತು ನೈರ್ಮಲ್ಯ ಮೇಲ್ವಿಚಾರಕರಿಗೆ ಕನಿಷ್ಠ ವೇತನ 17,955.52 ರೂ. ಕ್ಲರ್ಕ್ ಗಳು, ಕಂಪ್ಯೂಟರ್ /ಡೇಟಾ ಎಂಟ್ರಿ ಆಪರೇಟರ್ ಗಳು, ಲ್ಯಾಬ್ ಟೆಕ್ನಿಷಿಯನ್ ಗಳು ಮತ್ತು ಸಹಾಯಕ ಗ್ರಂಥಪಾಲಕರಿಗೆ 16,564.02 ರೂ. ವೇತನ ಸಿಗಲಿದೆ ಎನ್ನಲಾಗಿದೆ.
ಚಾಲಕರು ಮತ್ತು ನಿರ್ವಾಹಕರು 15,777.52 ರೂ. ಚಾಲಕರು 15,112.02 ರೂ. ಕ್ಲೀನರ್ ಗಳು 13,974.62 ರೂ. ಮೆಕ್ಯಾನಿಕ್ಸ್, ಪ್ಲಂಬರ್ಸ್, ವಾಟರ್ ಮೆನ್, ವಾಲ್ವ್ ಮೆನ್ 14,657.72 ರೂ. ಅಟೆಂಡರ್ಗಳು, ಗಾರ್ಡನರ್ಗಳು, ವಾಚ್ಮೆನ್ಗಳು 13,974.62 ರೂ. ಬೀದಿ ಕಸ ಗುಡಿಸುವವರು, ತ್ಯಾಜ್ಯ ಕಾರ್ಮಿಕರು 17,306.52 ರೂ. ಹೆಚ್ಚಳ ಮಾಡಲಾಗಿದ್ದು, ಹೊಸ ವೇತನವನ್ನು ಜುಲೈ 28 ರಿಂದ ಜಾರಿಗೆ ತರಲಾಗಿದೆ.