ಕೊಪ್ಪಳ : ಕೇಂದ್ರ ಸರ್ಕಾರದ ಪಿಎಮ್-ಕುಸುಮ್ ( (PM-KUSUM: Pradhan Mantri Kisan Urja Suraksha evam Uttan Mahaabhiyan) Component – B ಯೋಜನೆಯಡಿ ಜಾಲಮುಕ್ತ ಸೌರ ಚಾಲಿತ ಕೃಷಿ ಪಂಪ್ಸೆಟ್ಗಳಿಗಾಗಿ ರೈತರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
BIGG NEWS : ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಹೈಕಮಾಂಡ್ ಬಿಗ್ ಶಾಕ್ : ಸದ್ಯಕ್ಕಿಲ್ಲ ಸಚಿವ ಸಂಪುಟ ವಿಸ್ತರಣೆ!
ಪಿಎಮ್-ಕುಸುಮ್ ಯೋಜನೆಯಡಿ ಮೊದಲ ಹಂತದಲ್ಲಿ ಸುಮಾರು 4400 ಜಾಲಮುಕ್ತ ಸೌರ ಶಕ್ತಿ ಚಾಲಿತ ಪಂಪ್ಸೆಟ್ಗಳನ್ನು ಅಳವಡಿಸುವ ಯೋಜನೆಯನ್ನು ಕೆ.ಆರ್.ಇ.ಡಿ.ಎಲ್. ಮೂಲಕ ರಾಜ್ಯ ವ್ಯಾಪ್ತಿಯ ವಿದ್ಯುತ್ ಸರಬರಾಜು ಕಂಪನಿಗಳ ಸಹಯೋಗದೊಂದಿಗೆ ಕೈಗೊಳ್ಳಲು ಘನ ಕರ್ನಾಟಕ ಸರ್ಕಾರವು ನಿರ್ಧರಿಸಿದೆ.
BIG NEWS : ಕೋವಿಡ್ -19 ಮೂಲವನ್ನು ತನಿಖೆ ಮಾಡಲು ವಿನಂತಿಸಿದ ಡೇಟಾ ಹಂಚಿಕೊಳ್ಳುವಂತೆ ಚೀನಾಗೆ WHO ಕರೆ
ಆನ್ ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಲು ಒದಗಿಸಬೇಕಾದ ವಿವರಗಳನ್ನು ಕೆ.ಆರ್.ಇ.ಡಿ.ಎಲ್. ಅಧಿಕೃತ ಜಾಲತಾಣ: www.kredl.karnataka.gov.in ನಲ್ಲಿ ನೀಡಲಾಗಿದೆ. ಪರಿಶಿಷ್ಠ ಜಾತಿ/ಪರಿಶಿಷ್ಟ ಪಂಗಡ ರೈತ ಬಾಂಧವರಿಗೆ ಶೇ.80 ರಷ್ಟು ಸಬ್ಸಿಡಿ ಹಾಗೂ ಇತರೆ ವರ್ಗಗಳ ರೈತ ಬಾಂಧವರಿಗೆ ಶೇ.60 ರಷ್ಟು ಸಬ್ಸಿಡಿ ಲಭ್ಯವಿದ್ದು, ಆತ್ಮೀಯ ರೈತ ಬಾಂಧವರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಲಾಗಿದೆ.
BIGG NEWS : ರೈತರಿಗೆ ಬಿಗ್ ಶಾಕ್ : ರಸಗೊಬ್ಬರ ಬೆಲೆಯಲ್ಲಿ ಭಾರೀ ಏರಿಕೆ|Fertilizer price hike
ಹೆಚ್ಚಿನ ಮಾಹಿತಿಗಾಗಿ ಕೆ.ಆರ್.ಇ.ಡಿ.ಎಲ್. ಪ್ರಾದೇಶಿಕ ಕಛೇರಿ, ಕಲಬುರಗಿ, ದೂ.ಸಂ: 9986025252, 9742310108 ಗೆ ಸಂಪರ್ಕಿಸಬಹುದು ಎಂದು ಕಲಬುರಗಿಯ ಕೆ.ಆರ್.ಇ.ಡಿ.ಎಲ್ ಪ್ರಾದೇಶಿಕ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.