ಬೆಂಗಳೂರು : ದಸರಾ ಹಬ್ಬದ ಹೊತ್ತಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ರಾಜ್ಯ ಸರ್ಕಾರ ವೇತನ ಪರಿಷ್ಕರಣೆ ಸಂಬಂಧಪಟ್ಟ ಸಮಿತಿ ರಚಿಸಲು ಸಿದ್ಧತೆ ಮಾಡಿಕೊಂಡಿದೆ.
BIGG NEWS : ರೈತರೇ ಗಮನಿಸಿ : ಪಿ.ಎಂ.ಕಿಸಾನ್ ಸಮ್ಮಾನ್ ನಿಧಿ ಹಣ ಪಡೆಯಲು ಇ-ಕೆವೈಸಿ ಕಡ್ಡಾಯ
ರಾಜ್ಯ ಸರ್ಕಾರವು ವೇತನ ಪರಿಷ್ಕರಣೆಗೆ ಸಮಿತಿ ರಚಿಸಲು ಮುಂದಾಗಿದ್ದು, ದಸರಾ ನಂತರ ಸಮಿತಿ ರಚನೆಯಾಗುವ ಸಾಧ್ಯತೆ ಇದ್ದು, ಡಿಸೆಂಬರ್ ಅಂತ್ಯಕ್ಕೆ ವರದಿ ಮಂಡನೆಯಾಗಲಿದೆ. ಹೊಸವರ್ಷದಲ್ಲಿ ಪರಿಷ್ಕೃತ ವೇತನ ಜಾರಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಹೊಸ ವೇತನ ಪರಿಷ್ಕರಣೆಯಾದರೆ ಸುಮಾರು 6 ಲಕ್ಷ ಸರ್ಕಾರಿ ನೌಕರರು, 3 ಲಕ್ಷ ನಿಗಮ ಮಂಡಳಿ, ಪ್ರಾಧಿಕಾರಿಗಳ ಸಿಬ್ಬಂದಿ ಹಾಗೂ 4.50 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ. ಮೂಲಕ ವೇತನದಲ್ಲಿ ಡಿಎ ಶೇ. 25 ರಿಂದ 30 ರಷ್ಟ ವಿಲೀನವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.