ಬೆಂಗಳೂರು : ರಾಜ್ಯ ಸರ್ಕಾರವು ಖಾಸಗಿ ನೌಕರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಸಹಕಾರಿ ಕ್ಷೇತ್ರದ ಸದಸ್ಯರಿಗೆ ನಗದುರಹಿತ ಆರೋಗ್ಯ ಚಿಕಿತ್ಸಾ ಸೌಲಭ್ಯ ಕಲ್ಪಿಸುವ ಯಶಸ್ವಿನಿ ಯೋಜನೆ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಗಿದೆ.
BIGG NEWS : `SC-ST’ ಮೀಸಲು ಹೆಚ್ಚಳ : 25,000 ನೇಮಕಕ್ಕೆ ತಡೆ ಹಿಡಿದ ರಾಜ್ಯ ಸರ್ಕಾರ!
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರನ್ನು ಯಶಸ್ವಿನಿ ಯೋಜನೆಯಿಂದ ಹೊರಗಿಡಲಾಗಿತ್ತು. ಈಗ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಮಾಸಿಕ 30 ಸಾವಿರ ರೂ. ಅಥವಾ ವಾರ್ಷಿಕ 3.60 ಲಕ್ಷ ರೂ. ವೇತನ ಪಡೆಯುವ ಖಾಸಗಿ ಕಂಪನಿಗಳ ನೌಕರರು ಸಹಕಾರಿ ಸದಸ್ಯರಾಗಿದ್ದರೆ ಯೋಜನೆಗೆ ಸೇರಬಹುದಾಗಿದೆ.
BIGG NEWS : 5,8 ನೇ ತರಗತಿಗೆ `ಪಬ್ಲಿಕ್ ಪರೀಕ್ಷೆ’ : ಶಿಕ್ಷಣ ಸಚಿವರಿಂದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್
ಮಾರ್ಗಸೂಚಿಯನ್ವಯ ಮಾಸಿಕ ರೂ.30,000/- ವರೆಗಿನ ಅಥವಾ ವಾರ್ಷಿಕ ರೂ.3,60,000/- ವರೆಗಿನ ವೇತನ ಪಡೆಯುವ ಖಾಸಗಿ ನೌಕರರು ಯಶಸ್ವಿನಿ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು. ಅಲ್ಲದೇ ಯಶಸ್ವಿನಿ ಕಾರ್ಡ್ ಮಾಡಿಸುವ ಸಹಕಾರ ಸಂಘದ ಸಿಬ್ಬಂದಿಗಳಿಗೆ ಪ್ರೋತ್ಸಾಹಧನ ರೂ.20/- ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಹಕಾರ ಇಲಾಖೆಯ ಸಹಕಾರ ಸಿಂಧು ವೆಬ್ಸೈಟ್ https://sahakarasindhu.karnataka.gov.in ಕಚೇರಿ ಸಂಪರ್ಕಿಸಬಹುದು.