ನವದೆಹಲಿ : ಜನಧನ್ ಗ್ರಾಹಕರಿಗೆ ಸರ್ಕಾರ ಹಲವು ಸೌಲಭ್ಯಗಳನ್ನ ನೀಡ್ತಿದ್ದು, ಶೂನ್ಯ ಖಾತೆ ತೆರೆಯುವ ಸೌಲಭ್ಯ ನೀಡುತ್ತಿರುವ ಮೋದಿ ಸರಕಾರ ಸಾಲ ಸೌಲಭ್ಯವನ್ನೂ ನೀಡುತ್ತಿದೆ. ಈ ಗ್ರಾಹಕರಿಗಾಗಿ ಸರ್ಕಾರ ಮತ್ತೊಂದು ನಿರ್ಧಾರ ಕೈಗೊಳ್ಳಲಿದೆ. ಪ್ರಸ್ತುತ, ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಹಣಕಾಸು ಸೇವೆಗಳ ಇಲಾಖೆ, ಸೆಬಿ ಮತ್ತು ಆರ್ಬಿಐ ನಡುವೆ ಚರ್ಚೆಗಳು ನಡೆಯುತ್ತಿವೆ. ಹೊಸ ಯೋಜನೆ ಮೂಲಕ ಸಾಮಾನ್ಯ ಜನರನ್ನ ಹೂಡಿಕೆಯೊಂದಿಗೆ ಸಂಪರ್ಕಿಸುವುದು ಸರ್ಕಾರದ ಯೋಜನೆಯಾಗಿದೆ. ಸರ್ಕಾರ ಕೈಗೊಂಡಿರುವ ಈ ನಿರ್ಧಾರದಿಂದ ಹೂಡಿಕೆದಾರರಿಗೆ ಭಾರಿ ಲಾಭವಾಗಲಿದೆ. ಇದರೊಂದಿಗೆ ಹೂಡಿಕೆಗೆ ಪ್ರೋತ್ಸಾಹವೂ ಇದೆ.
ಅದ್ರಂತೆ, ಮುಂಬರುವ ಅವಧಿಯಲ್ಲಿ ಹೂಡಿಕೆ ಮಾಡಲು ಜನ್ ಧನ್ ಗ್ರಾಹಕರನ್ನ ಸರ್ಕಾರ ಪ್ರೋತ್ಸಾಹಿಸಲಿದೆ. ಇಲ್ಲಿಯವರೆಗೆ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಮೊದಲ ಹಂತದಲ್ಲಿ ಸರ್ಕಾರ 47 ಕೋಟಿಗೂ ಹೆಚ್ಚು ಬ್ಯಾಂಕ್ ಖಾತೆಗಳನ್ನುತೆರೆದಿದೆ. ಈ ಖಾತೆಗಳಲ್ಲಿ ಸುಮಾರು 1.75 ಲಕ್ಷ ಕೋಟಿ ರೂಪಾಯಿ ಜಮೆಯಾಗಿದೆ. ಈ ಹಣವನ್ನ ಹಣಕಾಸು ಆಸ್ತಿಗಳಿಗೆ ಲಿಂಕ್ ಮಾಡಲು ಸರ್ಕಾರ ಆಶಿಸುತ್ತಿದೆ.
ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಎರಡನೇ ಹಂತದಲ್ಲಿ ಸರ್ಕಾರವು ಬ್ಯಾಂಕ್ ಗ್ರಾಹಕರನ್ನ ಹಣಕಾಸಿನ ಆಸ್ತಿಯೊಂದಿಗೆ ಸಂಪರ್ಕಿಸಲು ಗಮನಹರಿಸುತ್ತದೆ. ಈ ಯೋಜನೆಯು ಬ್ಯಾಂಕ್ನಿಂದ ಬ್ಯಾಂಕ್ಗೆ ಭಿನ್ನವಾಗಿರುತ್ತದೆ. ಪ್ರಸ್ತುತ, ಈ ಯೋಜನೆಗಾಗಿ ಸೆಬಿ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ನಡುವೆ ಚರ್ಚೆಗಳು ನಡೆಯುತ್ತಿವೆ. ಶೀಘ್ರದಲ್ಲಿಯೇ ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ. ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಎರಡನೇ ಹಂತವನ್ನು ಪ್ರಾರಂಭಿಸಲಿದೆ. ಇದರಿಂದ ದೇಶಾದ್ಯಂತ ಕೋಟ್ಯಂತರ ಗ್ರಾಹಕರು ಪ್ರಯೋಜನ ಪಡೆಯಲಿದ್ದಾರೆ. ಸದ್ಯದಲ್ಲೇ ಘೋಷಣೆಯಾಗುವ ಸಾಧ್ಯತೆ ಇದೆ.
ಸಾಮಾನ್ಯ ಜನರಲ್ಲಿ ಬ್ಯಾಂಕಿಂಗ್ ಸೌಲಭ್ಯಗಳನ್ನ ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರ ಈ ಸರ್ಕಾರಿ ಯೋಜನೆಯನ್ನ ಪ್ರಾರಂಭಿಸಿದೆ. ಈ ಯೋಜನೆಯಡಿಯಲ್ಲಿ ನೀವು ಶೂನ್ಯ ಬ್ಯಾಲೆನ್ಸ್ ಖಾತೆಯನ್ನ ತೆರೆಯಬಹುದು. ಇದಲ್ಲದೇ ನೀವು ಈ ಖಾತೆಯನ್ನ ಯಾವುದೇ ಬ್ಯಾಂಕಿನಲ್ಲಿ ತೆರೆಯಬಹುದು. ಈ ಖಾತೆಯನ್ನ ತೆರೆಯಲು ನೀವು ನಿಮ್ಮ ಹತ್ತಿರದ ಬ್ಯಾಂಕ್ಗೆ ಭೇಟಿ ನೀಡಬೇಕು ಮತ್ತು ಫಾರ್ಮ್’ನ್ನ ಸಲ್ಲಿಸಬೇಕು. ಭಾರತದಲ್ಲಿ ವಾಸಿಸುವ ಯಾವುದೇ ನಾಗರಿಕರು ಈ ಖಾತೆಯನ್ನ ತೆರೆಯಬಹುದು. ಖಾತೆ ತೆರೆಯುವವರ ವಯಸ್ಸು 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನದಾಗಿರಬೇಕು.
ಶಿವಮೊಗ್ಗ: ನಾಳೆ, ನಾಡಿದ್ದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
Video: ‘ರೈಲ್ವೆ ಟಿಕೆಟ್ ಸೆಂಟರ್’ನಲ್ಲಿ ‘ಟಿಕೆಟ್ ಖರೀದಿ’ಸೋ ಮುನ್ನಾ ಈ ಸುದ್ದಿ ಓದಿ : ನೀವು ಶಾಕ್ ಆಗೋದು ಗ್ಯಾರಂಟಿ.!
“6-12ನೇ ತರಗತಿ ಬಾಲಕಿಯರಿಗೆ ‘ಉಚಿತ ಸ್ಯಾನಿಟರಿ ಪ್ಯಾಡ್’ ನೀಡಿ” ; ಕೇಂದ್ರ ಮತ್ತು ರಾಜ್ಯಗಳಿಗೆ ‘ಸುಪ್ರೀಂ’ ಸೂಚನೆ