ಮಂಗಳೂರು : ಬೆಂಗಳೂರು – ಮಂಗಳೂರು ನಡುವೆ ವಾರದಲ್ಲಿ ಮೂರು ದಿನ ಸಂಚರಿಸುತ್ತಿದ್ದ ನಂ.16585/86 ಬೆಂಗಳೂರು – ಮಂಗಳೂರು ಏಕ್ಸ್ಪ್ರೆಸ್(ವಯಾ ಮೈಸೂರು) ರಾತ್ರಿ ರೈಲನ್ನು ವಾರದಲ್ಲಿ 6 ದಿನವೂ ಓಡಿಸಲು ಕೇಂದ್ರ ರೈಲ್ವೆ ಮಂಡಳಿ ಅನುಮತಿ ನೀಡಿದೆ.
ನೈಋತ್ಯ ರೈಲ್ವೆಯಿದ ಜುಲೈ27ರಂದು ರೈಲ್ವೆ ಬೋರ್ಡ್ಗೆ ಕುರಿತಂತೆ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಪತ್ರ ಬರೆಯಲಾಗಿತ್ತು ಇದೇ ವೇಳೆ ವಾರದಲ್ಲಿ ಮೂರು ಬಾರಿ ಸಂಚರಿಸುತ್ತಿದ್ದ ನಂ 066547/ 48 ಕೆಎಸ್ಆರ್ ಬೆಂಗಳೂರು – ಮಂಗಳೂರು ವಿಶೇಷ ಎಕ್ಸ್ಪ್ರೆಕ್ಸ್ ರೈಲನ್ನು ಈ ರೈಲಿನೊಂದಿಗೆ ವಿಲೀನಗೊಳಿಸಲಾಗಿದೆ. ಬಾರಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಿರಂತರವಾಗಿ ಭೂ ಕುಸಿತ ಉಂಟಾದ ಹಿನ್ನೆಯಲ್ಲಿ ಪ್ರಯಾಣಿಕರ ಬೇಡಿಕೆ ಮೇರೆಗೆ ಈ ವಿಶೇಷ ರೈಲನ್ನು ಆರಂಭಿಸಲಾಗಿತ್ತು.
ಟರ್ಮಿನಲ್ ಬದಲಾವಣೆ
ನಂ.16585/86 ಕೆಎಸ್ಆರ್ ಬೆಂಗಳೂರು – ಮಂಗಳೂರು ಏಕ್ಸ್ಪ್ರೆಸ್ ರೈಲಿನ ಟರ್ಮಿನಲ್ ಸದ್ಯ ಇರುವ ಕೆಎಸ್ಆರ್ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ಸಿಟಿ ಜಂಕ್ಷನ್ ) ನಿಂದ ಎಸ್ಎಂವಿಬಿ (ಸರ್.ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣ ಬೈಯಪ್ಪನ ಹಳ್ಳಿ)ಗೆ ವಿಸ್ತರಿಸಲಾಗಿದೆ. ಟರ್ಮಿನಲ್ ಬದಲಾವಣೆಯಾದರೂ ಬೆಂಗಳೂರು ಸಿಟಿ, ಕಂಟೋನ್ಮೆಂಟ್, ಸಿಟಿ ಮತ್ತು ಕೆಂಗೇರಿ ಸೇರಿದಂತೆ ಈ ಹಿಂದಿನ ಮಾರ್ಗದಲ್ಲಿಯೇ ಸಂಚರಿಸಲಿದೆ
ವಿಸ್ತರಣೆ ಬೇಡಿಕೆ :
ಈ ರೈಲನ್ನು ಕಾರವಾರ ಅಥವಾ ವಾಸ್ಕೋ-ಡ-ಗಾಮ ನಿಲ್ದಾಣಕ್ಕೆ ವಿಸ್ತರಿಸುವ ಕುರಿತಾಗಿಯೂ ಬೇಡಿಕೆ ಕೇಳಿ ಬರುತ್ತಿದೆ. ಈಗಾಗಲೇ ಸಂಸದ ಪ್ರತಾಪಸಿಂಹ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆಪತ್ರವ ಬರೆದು ವಾಸ್ಕೋ-ಡ-ಗಾಮ ನಿಲ್ದಾಣಕ್ಕೆ ವಿಸ್ತರಿಸುವಂತೆ ಮನವಿ ಮಾಡಿದ್ದಾಋಎ. ಆಮೂಲಕ ಗೋವಾ ಮೈಸೂರು ನಡುವೆ ಪ್ರವಾಸಿಗರಿಗೆ ಸಂಚಾರ ಸುಲಭ ಸಾಧ್ಯವಾಗಲಿದೆ ಎನ್ನುವುದು ಸಂಸದ ಮಾತಾಗಿದೆ