ವರದಿ : ವಸಂತ ಬಿ ಈಶ್ವರಗೆರೆ
ಬೆಂಗಳೂರು: ಇಂದಿನಿಂದ ಜಾರಿಗೆ ಬರುವಂತೆ ಕೆಎಂಎಫ್ ನಿಂದ ನಂದಿನಿ ಉತ್ಪನ್ನಗಳಾದಂತ ಮೊಸರು, ಮಜ್ಜಿಗೆ ಹಾಗೂ ಲಸ್ಸಿ ದರವನ್ನು ಹೆಚ್ಚಿಸಿ ಆದೇಶಿಸಲಾಗಿತ್ತು. ಇದೀಗ ಈ ದರಗಳನ್ನು ಕೊಂಚ ಕಡಿಮೆ ಮಾಡಿದೆ. ಈ ಮೂಲಕ ರಾಜ್ಯದ ಜನತೆಗೆ ಗುಡ್ ನ್ಯೂಸ್ ನೀಡಿದೆ.
ಈ ಬಗ್ಗೆ ಕರ್ನಾಟಕ ಹಾಲು ಮಹಾ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರದ ವಿತ್ತ ಸಚಿವಾಲಯ ದಿನಾಂಕ 18-07-2022ರಿಂದ ಜಾರಿಗೆ ಬರುವಂತೆ ಮೊಸರು, ಮಜ್ಜಿಗೆ ಮತ್ತು ಸಿಹಿ ಲಸ್ಸಿ ಉತ್ಪನ್ನಗಳ ಮೇಲೆ ಜಿ ಎಸ್ ಟಿ ವಿಧಿಸಿದ ಕಾರಣ, ಜಿಎಸ್ಟಿ ದರದಂತೆ ನಿನ್ನೆ ಪರಿಷ್ಕೃತ ದರವನ್ನು ಹೊರಡಿಸಲಾಗಿತ್ತು.
‘ಸ್ವ-ಉದ್ಯೋಗಾಕಾಂಕ್ಷಿ’ಗಳಿಗೆ ಗುಡ್ ನ್ಯೂಸ್: ‘ಉಚಿತ ದ್ವಿಚಕ್ರ ವಾಹನ ರಿಪೇರಿ ತರಬೇತಿ’ಗೆ ಅರ್ಜಿ ಆಹ್ವಾನ
ನಿನ್ನೆ ನಂದಿನಿ ಮೊಸರು, ಮಜ್ಜಿಗೆ ಮತ್ತು ಲಸ್ಸಿ ಪೊಟ್ಟಣಗಳ ಮಾರಾಟ ದರವನ್ನು ಹಿಂಪಡೆದು, ಗ್ರಾಹಕರ ಹಿತ ದೃಷ್ಟಿಯಿಂದ ದಿನಾಂಕ 19-07-2022ರಿಂದ ಜಾರಿಗೆ ಬರುವಂತೆ ನಂದಿನಿ ಮೊಸರು, ಮಜ್ಜಿಗೆ ಮತ್ತು ಲಸ್ಸಿ ಪೊಟ್ಟಣಗಳ ಮಾರಾಟ ದರಗಳನ್ನು ಈ ಕೆಳಗಿನಂತೆ ಮರುಪರಿಷ್ಕರಿಸಲಾಗಿದೆ.
ಹೀಗಿದೆ ಪರಿಷ್ಕೃತ ನಂದಿನ ಉತ್ಪನ್ನಗಳ ದರ ಪಟ್ಟಿ