ಬೆಂಗಳೂರು: ರಾಜ್ಯದಲ್ಲಿ ವೈದ್ಯಕೀಯ ವ್ಯಾಸಂಗದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ ಎನ್ನುವಂತೆ ಹೊಸದಾಗಿ 11 ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಬಡ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸು ನನಸು ಮಾಡಬೇಕೆಂಬ ಉದ್ದೇಶದಿಂದ ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು ಆರಂಭಿಸಲು ಸರ್ಕಾರ ನಿರ್ಧರಿಸಿದೆ. 11 ಹೊಸ ಕಾಲೇಜುಗಳ ಸ್ಥಾಪನೆಗಾಗಿ ಆರ್ಥಿಕ ಇಲಾಖೆಗೆ ಅನುಮತಿ ಕೇಳಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್ ತಿಳಿಸಿದ್ದಾರೆ.
ಬಡ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸು ನನಸು ಮಾಡಬೇಕೆಂಬ ಉದ್ದೇಶದಿಂದ ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು ಆರಂಭಿಸಲು ಸರ್ಕಾರ ನಿರ್ಧರಿಸಿದೆ. 11 ಹೊಸ ಕಾಲೇಜುಗಳ ಸ್ಥಾಪನೆಗಾಗಿ ಆರ್ಥಿಕ ಇಲಾಖೆಗೆ ಅನುಮತಿ ಕೇಳಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್ ತಿಳಿಸಿದ್ದಾರೆ.#MedicalCollege… pic.twitter.com/51Nd7I8QcJ
— DIPR Karnataka (@KarnatakaVarthe) October 14, 2024
ಎಮ್.ಬಿ.ಬಿ.ಎಸ್ ವಿದ್ಯಾರ್ಥಿಗಳ ತರಗತಿಗಳು ಸಮರ್ಪಕ ಹಾಗೂ ಉನ್ನತ ಮಟ್ಟದಲ್ಲಿ ವಿಶ್ವವಿದ್ಯಾಲಯ ನಡೆಸುತ್ತಿರುವ ಬಗ್ಗೆ ಜಾಗರೂಕತೆ ಜೊತೆಗೆ ಕಾಳಜಿಯೂ ಇರಲಿ ಎಂದು ಸಚಿವರು ತಿಳಿಸಿದರು.
ಪದವಿ ಪಡೆದ ನಂತರವೂ ನಿರಂತರ ಕಲಿಕೆ ಮುಂದುವರಿಯಬೇಕು. ಜ್ಞಾನವನ್ನು ಸಂಪಾದಿಸುವುದು, ಆಧುನೀಕತೆ ಜೊತೆಗೆ ಪ್ರಸಕ್ತ ಸನ್ನಿವೇಶಗಳನ್ನು ಎದುರಿಸುವುದು ಅರಿತಿರಬೇಕು ಎಂದು ಡಾ.ಪಾಟೀಲ್ ತಿಳಿಸಿದರು.
ಔಷಧಗಳು ಇನ್ಮುಂದೆ ನಿಮ್ಮ ಜೀವನದ ಭಾಗವಾಗಲಿದೆ. ನಿಮ್ಮಿಂದ ಸಲಹೆ, ಸೂಚನೆ ಪಡೆಯುವವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.
ಉತ್ತಮ ವೈದ್ಯರಾಗಲು ಶ್ರದ್ಧೆ, ಅಧ್ಯಯನ, ತಾಳ್ಮೆ, ಸಹಾನುಭೂತಿ ಅಗತ್ಯವಾಗಿ ಇರಬೇಕು. ಗುಣಮಟ್ಟ ನಿಮ್ಮ ಮುಖ್ಯ ಗುರಿಯಾಗಿರಬೇಕು ಎಂದು ಸಚಿವರು ಸಲಹೆ ನೀಡಿದರು.
ನೀವು ಪಿಇಎಸ್ ವಿದ್ಯಾಸಂಸ್ಥೆಯ ಭಾಗವಾಗಿರುವುದು ನಿಮ್ಮ ಅದೃಷ್ಟವಾಗಿದೆ. ಈ ಸಂಸ್ಥೆ ಐದು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ದೇಶಾದ್ಯಂತ ಕೀರ್ತಿ ಗಳಿಸಿದೆ. ಗ್ರಾಮೀಣ ಭಾಗದಲ್ಲಿ ಅಗತ್ಯ ಇರುವವರಿಗೆ ಸೇವೆ ನೀಡುವುದು ಗಮನಾರ್ಹವಾಗಿದೆ ಎಂದು ತಿಳಿಸಿದರು.
ಇಲ್ಲಿನ ಸಂಯೋಜಿತ ಕ್ಯಾಂಪಸ್ ನಿಮಗೆ ಮಾರ್ಗದರ್ಶನ ನೀಡುತ್ತದೆ. ಹೆಚ್ಚುವರಿ ಕೋರ್ಸ್ ಗಳನ್ನು ಕಲಿಯಲು ಇಲ್ಲಿ ಸಾಧ್ಯವಿದೆ. ಒಟ್ಟಾರೆ ನಿಮ್ಮ ವಿದ್ಯಾರ್ಥಿ ಜೀವನ ಯಶಸ್ವಿಯಾಗಲಿ. ಭವ್ಯ ಭವಿಷ್ಯ ನಿಮ್ಮದಾಗಲಿ ಎಂದು ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.
ಐದು ವರ್ಷಗಳ ಎಂಬಿಬಿಎಸ್, ಮೂರು ವರ್ಷಗಳ ಎಂಡಿ, ವರ್ಷಗಳ ಡಿಎಂ ಇತ್ಯಾದಿ ಮಾಡುವುದಕ್ಕೆ ಅತ್ಯಂತ ಆಸಕ್ತಿ, ದೃಢ ಮನಸ್ಸು ಬೇಕು. ಇವುಗಳನ್ನು ಮೀರಿ ಸಾಧಿಸಬೇಕು ಎಂದು ಸಚಿವರು ತಿಳಿಸಿದರು.
BREAKING ; ದೆಹಲಿ ಸಿಎಂ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ‘ಪ್ರಧಾನಿ ಮೋದಿ’ ಭೇಟಿಯಾದ ‘ಅತಿಶಿ’
ಗೃಹಲಕ್ಷ್ಮಿ’ ಫಲಾನುಭವಿಗಳ ಖಾತೆಗೆ 1 ತಿಂಗಳ ಹಣ ಜಮೆಯ ವಿಚಾರ : ಸ್ಪಷ್ಟನೆ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್