ಬೆಂಗಳೂರು: ಕೋವಿಡ್-19 ( Covid19 ) ಸಂದರ್ಭದಲ್ಲಿ ವಿವಿಧ ಪರೀಕ್ಷಾ ಫಲಿತಾಂಶಗಳು ಶೈಕ್ಷಣಿಕ ವರ್ಷದಂತೆ ಪ್ರಕಟವಾಗಿರಲಿಲ್ಲ. ಹೀಗಾಗಿ ಅನುಕಂಪದ ಆಧಾರದ ನಿರೀಕ್ಷೆಯಲ್ಲಿದ್ದವರು ಪರೀಕ್ಷೆ ಫಲಿತಾಂಶ ( Exam Results ) ತಡವಾಗಿ ಪ್ರಕಟವಾಗಿದ್ದರಿಂದ ನೌಕರಿ ಸಿಗದೇ ಸಮಸ್ಯೆಗೆ ಸಿಲುಕುವಂತೆ ಆಗಿತ್ತು. ಆದ್ರೇ ಇದೀಗ ಸರ್ಕಾರ ಈ ವೇಳೆಯ ಪರೀಕ್ಷಾ ಫಲಿತಾಂಶವನ್ನು 2020-21ನೇ ಸಾಲಿನ ಅನುಕಂಪದ ಆಧಾರದ ಮೇಲಿನ ನೇಮಕಾತಿಗಳಿಗೆ ವಿದ್ಯಾರ್ಹತೆಯಾಗಿ ಪರಿಗಣಿಸಿ ಆದೇಶಿಸಿದೆ.
ರಾಜ್ಯದ ಶಾಲೆಗಳ ಅಡುಗೆ ಸಿಬ್ಬಂದಿಗಳಿಗೆ ಗುಡ್ ನ್ಯೂಸ್: 14 ದಿನಗಳ ಹೆಚ್ಚುವರಿ ಗೌರವಧನ ಬಿಡುಗಡೆ
ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಹೊರಡಿಸಿರುವಂತ ಸುತ್ತೋಲೆ ಕನ್ನಡ ನ್ಯೂಸ್ ನೌಗೆ ಲಭ್ಯವಾಗಿದೆ. ಸರ್ಕಾರ ಹೊರಡಿಸಿರುವಂತ ಸುತ್ತೋಲೆಯಲ್ಲಿ ಸರ್ಕಾರಿ ನೌಕರರು ( Government Servant ) ಸೇವೆಯಲ್ಲಿರುವಾಗಲೇ ಮೃತಪಟ್ಟಿದ್ದು, ಆತನ ಅವಲಂಬಿತರಲ್ಲಿ ಒಬ್ಬರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ( Compassionate employment ) ನೀಡಲಾಗುತ್ತದೆ ಎಂದಿದೆ.
‘ಜೆಡಿಎಸ್’ ನೂರು ಸೀಟು ದಾಟಲ್ಲ, ಇನ್ನೆಲ್ಲಿ ಮುಸ್ಲಿಮರನ್ನು ಸಿಎಂ ಮಾಡ್ತಾರೆ : ಹೆಚ್ಡಿಕೆಗೆ ಜಮೀರ್ ತಿರುಗೇಟು
ಸರ್ಕಾರ ನೀಡುವಂತ ನೌಕರಿಗಾಗಿ ನಿಗದಿತ ಕಾಲಮಿತಿಯೊಳಗೆ ಅರ್ಜಿ ಸಲ್ಲಿಸಿದ ಪಕ್ಷದಲ್ಲಿ ಹಾಗೂ ಅಂತಹ ಅವಲಂಬಿತ ಅಭ್ಯರ್ಥಿಯ ಪದವಿ ಪೂರ್ವ (ಪಿಯುಸಿ) ಪರೀಕ್ಷಾ ಫಲಿತಾಂಶ ಪ್ರಕಟಣೆಯು 2019-20ನೇ ಸಾಲಿನಲ್ಲಿ ಕೋವಿಡ್-19ರ ಲಾಕ್ ಡೌನ್ ಕಾರಣದಿಂದ ವಿಳಂಬವಾಗಿತ್ತು ಎಂದಿದ್ದಾರೆ.
ಹವಾಮಾನ ವೈಪರೀತ್ಯ ನಿರೋಧಕ ರಾಜ್ಯವಾಗಿ ಕರ್ನಾಟಕ: ವಿಶ್ವಬ್ಯಾಂಕ್ ನೊಂದಿಗೆ ಸಿಎಂ ಬೊಮ್ಮಾಯಿ ಚರ್ಚೆ
ಈ ಪ್ರಕರಣಗಳನ್ನು ವಿಶೇಷ ಪ್ರಕರಣಗಳೆಂದು ಪರಿಗಣಿಸಿ, ಪಿಯುಸಿ ಜೊತೆಗೆ, ಡಿಪ್ಲೋಮಾ, ಪದವಿ, ಇಂಜಿನಿಯರಿಂಗ್ ಹಾಗೂ ಇನ್ನಿತರೆ ತತ್ಸಮಾನ ವಿದ್ಯಾರ್ಹತೆಗಳನ್ನು, ಗಣನೆಗೆ ತೆಗೆದುಕೊಂಡು ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡುವಂತೆ ಎಲ್ಲಾ ಸಕ್ಷಮ, ನೇಮಕಾತಿ ಪ್ರಾಧಿಕಾರಗಳಿಗೆ ಸೂಚಿಸಿದ್ದಾರೆ.