Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ನ್ಯಾಟೋ’ ಮೈತ್ರಿಕೂಟದಿಂದ ಹೊರಬರಲು ಅಧ್ಯಕ್ಷ ಟ್ರಂಪ್ ಚಿಂತನೆ; ಮಧ್ಯಪ್ರಾಚ್ಯ ಯುದ್ಧದ ಬೆನ್ನಲ್ಲೇ ಅಮೆರಿಕದ ಅಚ್ಚರಿಯ ನಡೆ!

02/04/2026 6:55 AM

BREAKING : ಪಶ್ಚಿಮ ಏಷ್ಯಾ ಸಂಘರ್ಷ: ಇರಾನ್ ವಿರುದ್ಧ ಅಮೆರಿಕ ಸೇನೆಗೆ ಭರ್ಜರಿ ಜಯ : ಡೊನಾಲ್ಡ್ ಟ್ರಂಪ್ ಘೋಷಣೆ

02/04/2026 6:49 AM

BREAKING: ಚಂದಿರನತ್ತ ಮತ್ತೆ ಮಾನವನ ಪಯಣ: ನಾಸಾದ ಐತಿಹಾಸಿಕ ‘ಆರ್ಟೆಮಿಸ್-2’ ಗಗನನೌಕೆ ಯಶಸ್ವಿ ಉಡಾವಣೆ!

02/04/2026 6:48 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS: ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆಯ ಸಿಬ್ಬಂದಿಗಳಿಗೆ ಗುಡ್ ನ್ಯೂಸ್: ಇನ್ಮುಂದೆ ಟರ್ಮ್‌ ಇನ್ಶೂರೆನ್ಸ್‌
KARNATAKA

GOOD NEWS: ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆಯ ಸಿಬ್ಬಂದಿಗಳಿಗೆ ಗುಡ್ ನ್ಯೂಸ್: ಇನ್ಮುಂದೆ ಟರ್ಮ್‌ ಇನ್ಶೂರೆನ್ಸ್‌

By kannadanewsnow0904/01/2026 2:26 PM

ಬೆಂಗಳೂರು: ಸರ್ಕಾರದ ಆಡಳಿತದಲ್ಲಿ ಪ್ರಮುಖ ವಹಿಸುವ ಸಿಬ್ಬಂದಿಗಳಿಗೆ ಸೂಕ್ತ ವಿಮಾ ಭದ್ರತೆ ಒದಗಿವುಸು ಅತಿ ಮುಖ್ಯ ಮತ್ತು ಅತ್ಯಂತ ಜವಾಬ್ದಾರಿ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಸಿಬ್ಬಂದಿ ಸ್ನೇಹಿ ಕ್ರಮ ಕೈಗೊಳ್ಳಲು *ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ‌. ಶರಣಪ್ರಕಾಶ್ ಆರ್. ಪಾಟೀಲ್* ಮುಂದಾಗಿದ್ದಾರೆ.

ತಮ್ಮ ಇಲಾಖೆ ವ್ಯಾಪ್ತಿಯ ಎಲ್ಲ ಅಧಿಕಾರಿಗಳಿಗೆ, ಸಿಬ್ಬಂದಿಗೆ ಮತ್ತು ಕುಟುಂಬ ಸದಸ್ಯರಿಗೆ ವಿಮಾ ಭದ್ರತೆ ಒದಗಿಸಲು ಕ್ರಮ ಕೈಗೊಂಡಿದ್ದಾರೆ.

ಕಳೆದ ತಿಂಗಳು ರಸ್ತೆ ಅಪಘಾತದಲ್ಲಿ ನಿಧನರಾದ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಕುಟುಂಬ ಸದಸ್ಯರು ವಿಮಾ ಹಣ ಪಡೆಯಲು ತಾಂತ್ರಿಕ ಸಮಸ್ಯೆಗಳು ಎದುರಾದ ಹಿನ್ನೆಲೆಯಲ್ಲಿ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಅವರು ತಮ್ಮ ಇಲಾಖೆಯ ಅಡಿಯಲ್ಲಿರುವ ಎಲ್ಲಾ ವೈದ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಮಾಜಿಕ ಭದ್ರತಾ ಕ್ರಮವಾಗಿ ಕಡ್ಡಾಯವಾಗಿ ಟರ್ಮ್‌ ಇನ್ಶೂರೆನ್ಸ್‌ ಪಡೆಯಬೇಕೆಂದು ಸೂಚಿಸಿದ್ದಾರೆ.

ಶನಿವಾರ ನಡೆದ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಯಿತು, ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಹಾಂತೇಶ ಬೀಳಗಿ ವಿಷಯವನ್ನು ಪ್ರಸ್ತಾಪಿಸಿದರು. ಐಎಎಸ್‌ಗೆ ಬಡ್ತಿ ಪಡೆದ ನಂತರ ಟರ್ಮ್‌ ವಿಮಾ ವ್ಯವಸ್ಥೆಯಲ್ಲಿ ತಮ್ಮ ಸೇವಾ ವಿವರವನ್ನು ದಾಖಲಿಸಿರಲಿಲ್ಲ. ಇದರಿಂದಾಗಿ ಐಎಎಸ್ ಅಧಿಕಾರಿ ಕುಟುಂಬ ವರ್ಗದವರಿಗೆ ಸುಮಾರು 50 ಲಕ್ಷ ರೂ. ಕಡಿಮೆ ಸಿಕ್ಕಿದೆ ಎಂದು ತಿಳಿಸಿದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಎಲ್ಲಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವೈದ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಪ್ರಸ್ತುತ ಸಂಬಳ ಮತ್ತು ಹುದ್ದೆಗೆ ಅನುಗುಣವಾಗಿ ಟರ್ಮ್‌ ವಿಮೆ ಪಡೆಯುವುದನ್ನು ಕಡ್ಡಾಯಗೊಳಿಸಬೇಕು ಎಂದು ಆದೇಶ ಹೊರಡಿಸುವಂತೆ ತಕ್ಷಣವೇ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್ ಅವರಿಗೆ ಸೂಚಿಸಿದರು.

ಉದ್ಯೋಗಿಯ ದುರದೃಷ್ಟಕರ ಸಂದರ್ಭದಲ್ಲಿ ಕುಟುಂಬಗಳು ಪೂರ್ಣ ಅರ್ಹ ಟರ್ಮ್‌ ವಿಮಾ ಮೊತ್ತವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಬೇಕು. ವಿಶೇಷವಾಗಿ ಕಡಿಮೆ ವೇತನ ಶ್ರೇಣಿಯಲ್ಲಿರುವವರು, ಹಣಕಾಸಿನ ಕೊರತೆ ಅಥವಾ ಅರಿವಿನ ಕೊರತೆಯಿಂದಾಗಿ ವಿಮೆಯನ್ನು ಆಯ್ಕೆ ಮಾಡಿಕೊಂಡಿಲ್ಲದಿರಬಹುದು. ಈ ನಿಟ್ಟಿನಲ್ಲಿ ಅವರಿಗೆ ಅರಿವು ಮೂಡಿಸಬೇಕು ಎಂದು ಸಚಿವರು ಗಮನ ಸೆಳೆದರು.

ಬ್ಯಾಂಕ್‌, ವಿಮಾ ಕಂಪನಿಗಳೊಂದಿಗೆ ಚರ್ಚೆ

ಪ್ರಮುಖ ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳೊಂದಿಗೆ ಸಭೆ ನಡೆಸಿ ಇಲಾಖೆಯ ಉದ್ಯೋಗಿಗಳಿಗೆ ಕೈಗೆಟುಕುವ ದರಗಳಲ್ಲಿ ಅತ್ಯುತ್ತಮ ವಿಮಾ ಯೋಜನೆಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದರು.

ನೌಕರರ ಕುಟುಂಬಗಳಿಗೆ ಸಮಗ್ರ ಆರ್ಥಿಕ ಭದ್ರತೆಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಇಲಾಖೆಯಲ್ಲಿ ಕೆಲಸ ಮಾಡುವ ಗುತ್ತಿಗೆ ನೌಕರರಿಗೆ ಅವಧಿ ವಿಮಾ ಪ್ರಯೋಜನಗಳನ್ನು ವಿಸ್ತರಿಸುವ ಕಾರ್ಯಸಾಧ್ಯತೆಯನ್ನು ಪರಿಶೀಲಿಸುವಂತೆ ಹಿರಿಯ ಅಧಿಕಾರಿಗಳಿಗೆ ಡಾ. ಶರಣಪ್ರಕಾಶ್‌ ಪಾಟೀಲ್‌ ಆದೇಶಿಸಿದ್ದಾರೆ.

ಹೊರಗುತ್ತಿಗೆ ನೌಕರರನ್ನು ಗುತ್ತಿಗೆ ಹುದ್ದೆಗಳಿಗೆ ನೇಮಕ

ಮತ್ತೊಂದು ಸಿಬ್ಬಂದಿ ಸ್ನೇಹಿ ನಿರ್ಧಾರ ಕೈಗೊಂಡಿರುವ ಡಾ. ಪಾಟೀಲ್ ಇಲಾಖೆಯಲ್ಲಿರುವ ಅರ್ಹ ಹೊರಗುತ್ತಿಗೆ ನೌಕರರನ್ನು ಗುತ್ತಿಗೆ ಹುದ್ದೆ ವ್ಯಾಪ್ತಿಗೆ ತರುವ ಕುರಿತು, ಸೂಕ್ತ ಮೀಸಲಾತಿ ರೋಸ್ಟರ್ ಪಾಲಿಸುವಂತೆ ಸೂಚನೆ ನೀಡಿದ್ದಾರೆ. ಉದ್ಯೋಗದಲ್ಲಿ ನ್ಯಾಯಸಮ್ಮತೆ ಒದಗಿಸಲು ಈ ರೀತಿಯ ಕ್ರಮ ಅಗತ್ಯ ಎಂದು ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ತಿಳಿಸಿದರು.

Share. Facebook Twitter LinkedIn WhatsApp Email

Related Posts

ರಾಜ್ಯದ ಜನತೆಯ ಗಮನಕ್ಕೆ : ನಿಮ್ಮ ಮನೆ, ಸೈಟ್‌ ಗೆ `ಇ-ಸ್ವತ್ತು’ ಮಾಡಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

02/04/2026 6:40 AM2 Mins Read

ರಾಜ್ಯದ ಗ್ರಾಮಪಂಚಾಯಿತಿಗಳಲ್ಲಿ 1,164 ಕೋಟಿ ರೂ. ತೆರಿಗೆ ಸಂಗ್ರಹ : ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ

02/04/2026 6:38 AM1 Min Read

ಪುರುಷರೇ ಎಚ್ಚರ: ಈ ಸಾಮಾನ್ಯ ಆರೋಗ್ಯ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ಬೇಡ .!

02/04/2026 6:30 AM2 Mins Read
Recent News

‘ನ್ಯಾಟೋ’ ಮೈತ್ರಿಕೂಟದಿಂದ ಹೊರಬರಲು ಅಧ್ಯಕ್ಷ ಟ್ರಂಪ್ ಚಿಂತನೆ; ಮಧ್ಯಪ್ರಾಚ್ಯ ಯುದ್ಧದ ಬೆನ್ನಲ್ಲೇ ಅಮೆರಿಕದ ಅಚ್ಚರಿಯ ನಡೆ!

02/04/2026 6:55 AM

BREAKING : ಪಶ್ಚಿಮ ಏಷ್ಯಾ ಸಂಘರ್ಷ: ಇರಾನ್ ವಿರುದ್ಧ ಅಮೆರಿಕ ಸೇನೆಗೆ ಭರ್ಜರಿ ಜಯ : ಡೊನಾಲ್ಡ್ ಟ್ರಂಪ್ ಘೋಷಣೆ

02/04/2026 6:49 AM

BREAKING: ಚಂದಿರನತ್ತ ಮತ್ತೆ ಮಾನವನ ಪಯಣ: ನಾಸಾದ ಐತಿಹಾಸಿಕ ‘ಆರ್ಟೆಮಿಸ್-2’ ಗಗನನೌಕೆ ಯಶಸ್ವಿ ಉಡಾವಣೆ!

02/04/2026 6:48 AM

BIG NEWS : ಅತ್ತೆ-ಮಾವ ಸೊಸೆಯಿಂದ `ಜೀವನಾಂಶ’ ಪಡೆಯಲು ಸಾಧ್ಯವಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

02/04/2026 6:46 AM
State News
KARNATAKA

ರಾಜ್ಯದ ಜನತೆಯ ಗಮನಕ್ಕೆ : ನಿಮ್ಮ ಮನೆ, ಸೈಟ್‌ ಗೆ `ಇ-ಸ್ವತ್ತು’ ಮಾಡಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

By kannadanewsnow5702/04/2026 6:40 AM KARNATAKA 2 Mins Read

ಬೆಂಗಳೂರು: ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಅಥವಾ ಖಾಲಿ ಸೈಟ್ ಹೊಂದಿರುವವರು ತಮ್ಮ ಆಸ್ತಿಯ ರಕ್ಷಣೆಗಾಗಿ ‘ಈ-ಸ್ವತ್ತು’ (E-Swathu) ಮಾಡಿಸುವುದು…

ರಾಜ್ಯದ ಗ್ರಾಮಪಂಚಾಯಿತಿಗಳಲ್ಲಿ 1,164 ಕೋಟಿ ರೂ. ತೆರಿಗೆ ಸಂಗ್ರಹ : ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ

02/04/2026 6:38 AM

ಪುರುಷರೇ ಎಚ್ಚರ: ಈ ಸಾಮಾನ್ಯ ಆರೋಗ್ಯ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ಬೇಡ .!

02/04/2026 6:30 AM

ನಿಮ್ಮ ಜಮೀನು ಅಕ್ರಮ ಒತ್ತುವರಿಯಾಗಿದೆಯೇ? ಚಿಂತಿಸಬೇಡಿ: ಇಲ್ಲಿದೆ ಕಾನೂನು ಹೋರಾಟದ ಹಾದಿ!

02/04/2026 6:25 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.