ಬೆಂಗಳೂರು : ರಾಜ್ಯ ಸರ್ಕಾರವು ಪರಿಶಿಷ್ಟ ಪಂಗಡದ ಯುವಕ / ಯುವತಿಯರಲ್ಲಿ ಸ್ವ-ಉದ್ಯೋಗವನ್ನು ಉತ್ತೇಜಿಸಲು ಸ್ವಾವಲಂಬಿ ಸಾರಥಿ ಯೋಜನೆ ಆರಂಭಿಸಿದ್ದು, ಈ ಯೋಜನೆ ಮೂಲಕ ಟ್ರ್ಯಾಕ್ಟರ್, ಸರಕು, ಸಾರಿಗೆ ವಾಹನ ಖರೀದಿಗೆ 4 ಲಕ್ಷ ರೂ.ಗಳ ಸಹಾಯಧನ ಸಿಗಲಿದೆ.
ಸರಕು ಸಾಗಾಣಿಕೆ ವಾಹನ, ಸಾರಿಗೆ ವಾಹನ, ಟ್ರಾಕ್ಟರ್ ಹಾಗೂ ಇತರೆ ವ್ಯಾಪಾರ ಉದ್ದೇಶಗಳಿಗೆ ನೆರವು ಸಿಗಲಿದ್ದು, ಘಟಕ ವೆಚ್ಚದ 70% ರಷ್ಟು ಅಥವಾ ಗರಿಷ್ಠ ರೂ. 4.00 ಲಕ್ಷ ಸಹಾಯಧನ ನೀಡಲಿದೆ. ಉಳಿದ ಮೊತ್ತವನ್ನು ಬ್ಯಾಂಕ್ ಸಾಲದ ಮೂಲಕ ಭರಿಸಲಾಗುತ್ತದೆ ಸ್ವಂತ ವಾಹನ ಖರೀದಿ ಮೂಲಕ ಸ್ವಂತ ಉದ್ಯಮ ಆರಂಭಿಸುವ ಅವಕಾಶ. ಯುವಕರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ನೆರವಾಗುವ ಯೋಜನೆ ಇದಾಗಿದೆ.
ಸ್ವಾವಲಂಬಿ ಸಾರಥಿ ಯೋಜನೆ
ಈ ಯೋಜನೆ ಅಡಿಯಲ್ಲಿ ಒಬ್ಬ ವ್ಯಕ್ತಿಯು ಕಾರು ಅಥವಾ ಗೂಡ್ ವಾಹನಗಳಂತಹ ನಾಲ್ಕು ಚಕ್ರದ ವಾಹನಗಳನ್ನು ಖರೀದಿಸುವ ಮೂಲಕಸ್ವಂತ ಉದ್ಯೋಗವನ್ನು ಪ್ರಾರಂಭಿಸಬಹುದು.
ಯೋಜನೆಗೆ ಸಬ್ಸಿಡಿ ಪಡೆಯಲು ಅರ್ಹತೆಗಳು
ಈ ಯೋಜನೆಗೆ ಅರ್ಜಿ ಸಲ್ಲಿಸುವ ಅರ್ಜಿದಾರನು ಕನಿಷ್ಠ 21ರಿಂದ 45 ವರ್ಷದೊಳಗಿನ ನಿರುದ್ಯೋಗಿ ಆಗಿರಬೇಕು.
ಕುಟುಂಬಸ್ಥನ ವಾರ್ಷಿಕ ಆದಾಯವು 1.5 ಲಕ್ಷಕ್ಕಿಂತ ಮೇಲ್ಪಟ್ಟಿರಬಾರದು,.
ಡ್ರೈವಿಂಗ್ ಲೈಸೆನ್ಸ್
ಕುಟುಂಬದ ಯಾವುದೇ ಸದಸ್ಯನೋ ಸರ್ಕಾರಿ ಉದ್ಯೋಗಿಯಾಗಿರಬಾರದು.
ಅರ್ಜಿ ಸಲ್ಲಿಸುವ ಕುಟುಂಬಸ್ಥರು ಭಾರತದ ಬಡತನ ರೇಖೆಗಿಂತ ಕೆಳಗಿರುವವರು ಮತ್ತು ಪರಿಶಿಷ್ಟ ಪಂಗಡದವರಾಗಿರಬೇಕು.
ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ
ಆಧಾರ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್
ಆದಾಯ ದೃಡೀಕರಣ ಪತ್ರ / ಜಾತಿ ದೃಢೀಕರಣ ಪತ್ರ
(DL) ಡ್ರೈವಿಂಗ್ ಲೈಸೆನ್ಸ್
ಫೋಟೋ
ಮೊಬೈಲ್ ನಂಬರ್
ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅಜ ಸಲ್ಲಿಸಲು ಅರ್ಹರಿರುವುದಿಲ್ಲ.








