ಶಿವಮೊಗ್ಗ: ಸಾಗರದ ತಾಲ್ಲೂಕಿನ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ನಾಳೆಯಿಂದ ಸಾಗರ ನಗರ ಸಾರಿಗೆ ಬಸ್ ಸಂಚಾರ ಆರಂಭಗೊಳ್ಳಲಿದೆ. ಇದಕ್ಕೆ ನಾಳೆ ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ.
ಈಗಾಗಲೇ ರಾಜ್ಯದ ವಿವಿಧ ಜಿಲ್ಲೆ, ತಾಲ್ಲೂಕು ಹಂತದಲ್ಲಿ ನಗರ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಇದೀಗ ಶಿವಮೊಗ್ಗ ಜಿಲ್ಲೆಯಲ್ಲೇ ಮೊದಲು ಎನ್ನುವಂತೆ ಸಾಗರ ನಗರ ಸಾರಿಗೆಗೆ ನಾಳೆ ಜನರ ಸೇವೆಗೆ ತೆರೆದುಕೊಳ್ಳಲಿದೆ.
ನಾಳೆ ಬೆಳಗ್ಗೆ 10.30ಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸಾಗರ ನಗರ ಸಾರಿಗೆ ನೂತನ ಬಸ್ ಮಾರ್ಗಗಳನ್ನು ಉದ್ಘಾಟನೆ ಮಾಡಲಿದ್ದಾರೆ. ಆ ಬಳಿಕ ಸಾಗರ ತಾಲ್ಲೂಕು ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ವಿವಿಧ ಮಾರ್ಗದಲ್ಲಿ ಸಾಗರ ನಗರ ಸಾರಿಗೆ ಬಸ್ ಸಂಚಾರ ಆರಂಭಗೊಳ್ಳಲಿದೆ.
ಈ ಮಾರ್ಗದಲ್ಲಿ ಸಾಗರ ನಗರ ಸಾರಿಗೆ ಬಸ್ ಸಂಚಾರ ಆರಂಭ
- ಸಾಗರ, ಸಿಗಂದೂರು, ಮರಾಠಿಕೇರಿ, ನಾಗೋಡಿ – ಸಮಯ ಸಂಜೆ 5.15ಕ್ಕೆ
- ನಾಗೋಡಿ, ಮರಾಠಿಕೇರಿ, ಸಿಗಂದೂರು, ಸಾಗರ – ಸಮಯ ಬೆಳಗ್ಗೆ 7 ಗಂಟೆಗೆ
- ಸಾಗರ, ಸಿಗಂದೂರು, ನಿಟ್ಟೂರು – ಸಮಯ ಬೆಳಗ್ಗೆ 10.45ಕ್ಕೆ
- ನಿಟ್ಟೂರು, ಸಿಗಂದೂರು, ಸಾಗರ – ಸಮಯ ಮಧ್ಯಾಹ್ನ 1.15ಕ್ಕೆ
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು
ಸಾಗರದಲ್ಲಿ ಫ್ಲೆಕ್ಸ್ ಹಾವಳಿಯಲ್ಲಿ ಮುಚ್ಚಿ ಹೋದ ‘ಅಮ್ಯೂಸ್ಮೆಂಟ್ ಪಾರ್ಕ್’: ಸಂಕಷ್ಟದಲ್ಲಿ ‘ಟೆಂಡರ್ ದಾರ’








