ಬೆಂಗಳೂರು: ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ನೇತೃತ್ವದಲ್ಲಿ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ( Karnataka Cabinet Meeting ), ಮಹತ್ವದ ಕರ್ನಾಟಕ ಭೂ ಕಬಳಿಕೆ ಕಾಯ್ದೆಯ ತಿದ್ದುಪಡಿಗೆ, ಸಚಿವ ಸಂಪುಟ ಒಪ್ಪಿಗೆ ಸೂಚಿಸಲಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಗ್ರಾಮೀಣ ಪ್ರದೇಶದ ರೈತರ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ( Criminal Case ) ದಾಖಲಿಸುವುದರಿಂದ ರಕ್ಷಣೆ ದೊರೆಯಲಿದೆ. ಈ ಮೂಲಕ ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್ ದೊರೆತಂತೆ ಆಗಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಂತ ಗೃಹ ಸಚಿವ ಅರಗ ಜ್ಞಾನೇಂದ್ರ ( Home Minister Araga Jnanendra ) ಅವರು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ, ಕರ್ನಾಟಕ ಭೂ ಕಬಳಿಕೆ (ನಿಷೇಧ) ಕಾಯಿದೆ 2011ರ ಕಲಮು 2(ಡಿ) ಗೆ ತಿದ್ದುಪಡಿ ತರಲು ನಿರ್ಧಾರ ಮಾಡಿದ್ದು, ಬಹುದಿನಗಳ ಜನತೆಯ ಬೇಡಿಕೆಗೆ, ಸ್ಪಂದಿಸಿದಂತಾಗಿದೆ ಎಂದು ತಿಳಿಸಿದ್ದಾರೆ.
BIG NEWS: ಶಾಲೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನಿರ್ಬಂಧವಿಲ್ಲ – ಸಚಿವ ಬಿ.ಸಿ ನಾಗೇಶ್ ಸ್ಪಷ್ಟನೆ
ಪ್ರಸ್ತಾವಿತ ಕರಡು ತಿದ್ದುಪಡಿಯು, ಯಾವುದೇ ರೀತಿಯಲ್ಲಿಯೂ ವಿಧೇಯಕದ ಮೂಲ ಕರಡಿಗೆ ವಿರುದ್ದವಾಗಿರದೆ, ಗ್ರಾಮೀಣ ಪ್ರದೇಶದ, ರೈತರ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುವುದರಿಂದ ರಕ್ಷಣೆ ದೊರೆಯುತ್ತದೆ. ಸಣ್ಣ ಹಾಗೂ ಅತಿ ಸಣ್ಣ ರೈತರು ಹಾಗೂ ಜನಸಾಮಾನ್ಯರು, ಬಗರ್ ಹುಕುಮ್ ಸಾಗುವಳಿ ಸಂಬಂಧ, ಬೆಂಗಳೂರಿನಲ್ಲಿ ಸ್ಥಾಪಿತವಾದ ವಿಶೇಷ ನ್ಯಾಯಾಲಯಕ್ಕೆ ಅಲೆಯುವುದನ್ನು ತಪ್ಪಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.
BIG NEWS: ಗೌರಿ ಗಣೇಶ ಹಬ್ಬಕ್ಕೆ ಊರಿಗೆ ಹೋಗೋರಿಗೆ ಗುಡ್ ನ್ಯೂಸ್: KSRTCಯಿಂದ 500 ಹೆಚ್ಚುವರಿ ಬಸ್ ಸಂಚಾರ ವ್ಯವಸ್ಥೆ
ಈ ಕುರಿತು, ಸೂಕ್ತ ನಿರ್ಧಾರಕ್ಕೆ ಬಂದು, ವಿಧೇಯಕಕ್ಕೆ ತಿದ್ದುಪಡಿ ತರಲು ನಿರ್ಧರಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್ ಅಶೋಕ್ ಅವರನ್ನು, ಹಾರ್ಧಿಕವಾಗಿ ಅಭಿನಂದಿಸುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಹೀಗಿವೆ.. ಇಂದಿನ ಸಿಎಂ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಸಭೆಯ ಮುಖ್ಯಾಂಶಗಳು
ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಅವರ ಅಧ್ಯಕ್ಷತೆಯಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಚಿವ ಸಂಪುಟ ಸಭೆಯಲ್ಲಿ ( Cabinet Meeting ) ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ಅನುಮೋದನೆ ನೀಡಲಾಗಿದೆ.
ಈ ಕುರಿತಂತೆ ಸಚಿವ ಸಂಪುಟ ಸಭೆ ಮುಕ್ತಾಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದಂತ ಕಾನೂನು ಸಚಿವ ಜೆಸಿ ಮಾಧುಸ್ವಾಮಿಯವರು, ಮಲ್ಪೆ ಬಂದರು ಅಭಿವೃದ್ಧಿಗೆ 49 ಕೋಟಿ ಅನುದಾನಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಬೆಂಗಳೂರಿನ ಗುಳಿಮಂಗಲದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕಾಗಿ 100 ಕೋಟಿ ಅನುದಾನಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಸುಮಾರು 42 ಎಕರೆಯಲ್ಲಿ ಮಾರ್ಕೆಟ್ ಸ್ಥಾಪನೆಯಾಗಲಿದ್ದು, ಕೆ.ಆರ್.ಮಾರುಕಟ್ಟೆ ಭಾರ ತಗ್ಗಿಸಲಾಗುತ್ತದೆ ಎಂದರು.
BIG NEWS: ಶಾಲೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನಿರ್ಬಂಧವಿಲ್ಲ – ಸಚಿವ ಬಿ.ಸಿ ನಾಗೇಶ್ ಸ್ಪಷ್ಟನೆ
ಬೆಂಗಳೂರಿನ ನಾಲ್ಕು ಭಾಗದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಲಾಗುತ್ತದೆ. ಕೋಲಾರ, ಮಾಗಡಿ ಮಾರ್ಗದಲ್ಲೂ ಮಾಡಲಾಗುತ್ತದೆ. ಇದರ ಬಗ್ಗೆ ಅನೌಪಚಾರಿಕೆ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.
ಲೋಕಾಯುಕ್ತದಲ್ಲಿ ಪಿಪಿಗಳ ಸೇವೆ ವಿಸ್ತರಣೆ ಮಾಡಲಾಗಿದೆ. 7 ಮಂದಿಯ ಸೇವೆ ಒಂದು ವರ್ಷ ಮುಂದುವರಿಕೆ ಮಾಡಲಾಗಿದೆ. ಕೊಂಕಣ ರೈಲ್ವೆ ಅಭಿವೃದ್ಧಿಗೆ 73.53 ಕೋಟಿ ಹಣ ನೀಡಲು ಒಪ್ಪಿಗೆ ನೀಡಲಾಗಿದೆ. ರಾಜ್ಯದ ಪಾಲಿನ ಹಣವನ್ನ ಬಿಡುಗಡೆ ಮಾಡಿದ್ದೇವೆ ಎಂದರು.
ಅನ್ನದಿನ್ನಿ ಏತನೀರಾವರಿಗೆ 28 ಕೋಟಿ ಹಣ ಬಿಡುಗಡೆಗೆ ಅನುಮತಿ ನೀಡಲಾಗಿದೆ. ಕೇಂದ್ರ ನೀತಿ ಆಯೋಗದಂತೆ ರಾಜ್ಯದಲ್ಲಿ ಆಯೋಗ ರಚನೆ ಮಾಡಲಾಗುತ್ತದೆ. ರಾಣೆಬೆನ್ನೂರಿನ ಮಡ್ಲೇರಿ ರಸ್ತೆ ರಿಪೇರಿಗೆ 14.06 ಕೋಟಿ ಹಣ ಬಿಡುಗಡೆಗೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಹೇಳಿದರು.
BREAKING: ಶಾಸಕ ಭೈರತಿ ಸುರೇಶ್ ಗೆ ಕೊರೋನಾ ಪಾಸಿಟಿವ್ | MLA Byrathi Suresh tests positive for COVID-19
ಮಡ್ಲೇರಿ ರಸ್ತೆ ಅಭಿವೃದ್ಧಿಗೆ 11 ಕೋಟಿ ಅನುದಾನ ನೀಡಲಾಗಿದೆ. ವಿಜಯಪುರ ಕೋರ್ಟ್ ಕಟ್ಟಡ ನಿರ್ಮಾಣಕ್ಕಾಗಿ 12 ಕೋಟಿ ಹಣ ಬಿಡುಗಡೆಗೆ ಒಪ್ಪಿಗೆ ಸೂಚಿಸಲಾಗಿದೆ. ಯಾದಗಿರಿಯಲ್ಲಿ ಸಾಯಿ ಸಿದ್ದಾಶ್ರಮಕ್ಕೆ 4 ಎಕರೆ ಭೂಮಿ ನೀಡಲಾಗುತ್ತಿದೆ. ಚಿಕ್ಕಬಾಣಾವರದಲ್ಲಿ 3 ಎಕರೆ ಶ್ರೀನಿವಾಸ ಚಾರಿಟಿಗೆ ಭೂಮಿಯನ್ನು ನೀಡಲುಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದ್ದೇವೆ ಎಂದರು.
ಇಂಚಲಗೇರಿ ನೀರು ಪೂರೈಕೆಗೆ ಅನುದಾನ ನೀಡಲಾಗಿದೆ. ಹೆಬ್ರಿ, ಕಾರ್ಕಳಕ್ಕೆ ನೀರು ಸರಬಾರು ಯೋಜನೆ ಅನುಷ್ಠಾನಕ್ಕಾಗಿ 1600 ಕೋಟಿ ಅನುದಾನಕ್ಕೆ ಒಪ್ಪಿಗೆ ನೀಡಲಾಗಿದೆ. ಕಂಕನಾಡಿ ಪ್ರದೇಶಕ್ಕೆ ಕುಡಿಯುವ ನೀರು ಪೂರೈಕೆಗಾಗಿ 160 ಕೋಟಿ ಅನುದಾನ ಕೊಟ್ಟಿದ್ದೇವೆ. ಕಲ್ಲಹಳ್ಳಿ ಕುಡಿಯುವ ನೀರು ಪೂರೈಕೆಗೆ 48 ಕೋಟಿ ಅನುದಾನವನ್ನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಸೇಡಂನಲ್ಲಿ ಮ್ಯಾಕಾನಿಕಲ್ ಚಾಲನಾ ತರಬೇತಿ ಶಾಲೆಗೆ ಅನುಮತಿ ನೀಡಲಾಗಿದೆ. 18 ಕೋಟಿ ವೆಚ್ಚದಲ್ಲಿ ತರಬೇತಿ ಸಂಸ್ಥೆ ಪ್ರಾರಂಭಿಸಲಾಗುತ್ತದೆ. ಕಾಕ್ಸ್ ಟೌನ್ ಜಿಂಖಾನಾಗೆ 4 ಎಕರೆ ಲೀಸ್ ನೀಡಲಾಗಿತ್ತು. ಅದರಲ್ಲಿ 3 ಎಕರೆ 15 ಗುಂಟೆ ಜಮೀನು ವಾಪಸ್ ಪಡೆಯಲಾಗಿದೆ. ಅದನ್ನ ಸಾರ್ವಜನಿಕ ಆಟದ ಮೈದಾನಕ್ಕೆ ನೀಡ್ತೇವೆ ಎಂದು ತಿಳಿಸಿದರು.
ದುದ್ದ, ಜಾವಗಲ್ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕಾಗಿ 42 ಕೋಟಿ ಅನುದಾನ ನೀಡಲಾಗಿದೆ. ಸಂತೆಶಿವಿರ ಕುಡಿಯುವ ನೀರಿಗೆ ಅವಕಾಶಕ್ಕಾಗಿ 25 ಕೋಟಿ ಅನುದಾನ ನೀಡಿಕೆ. ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಒಪ್ಪಿಗೆ ಸೂಚಿಸಲಾಗಿದೆ. 3.2 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಬಹುದು. 25 ಸಾವಿರ ಹೆಕ್ಟೇರ್ ಗೆ ನೀರು ಪೂರೈಕೆಯಾಗಲಿದೆ. ಮೊದಲ ಹಂತದಲ್ಲಿ 760 ಕೋಟಿ, ಎರಡನೇ ಹಂತದಲ್ಲಿ 939 ಕೋಟಿ ಹಾಗೂ ಮೂರನೇ ಹಂತದಲ್ಲಿ 930 ಕೋಟಿ ಅನುದಾನ ನೀಡಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಸೆಪ್ಟಂಬರ್ 12 ರಿಂದ ಅಧಿವೇಶನ ಪ್ರಾರಂಭವಾಗಲಿದೆ. 10 ದಿನಗಳ ಕಾಲ ಬೆಂಗಳೂರಿನಲ್ಲಿಯೇ ಅಧಿವೇಶನ ನಡೆಯಲಿದೆ ಎಂದು ತಿಳಿಸಿದರು.
ಕೆಪಿಎಸ್ ಸಿ ತಿದ್ದುಪಡಿಯನ್ನ ತಂದಿದ್ದೇವೆ. ವೈವಾ ಮಾಡದೆ ಸೆಲೆಕ್ಷನ್ ಮಾಡಲು ತಿದ್ದುಪಡಿ ನೀಡಲಾಗಿದೆ. ಡಿ ಗ್ರೂಪ್ ನೌಕರಿಗೆ ನೇಮಕ ಮಾಡಲು ಅನುಮತಿ ನೀಡಲಾಗಿದೆ. ಡೈರೆಕ್ಟ್ ರಿಕ್ರೂಟ್ ಮೆಂಟ್ ಮಾಡಲು ಸಮ್ಮತಿ ನೀಡಲಾಗಿದೆ ಎಂದರು.
BIG NEWS: ತುಮಕೂರು ಅಪಘಾತದಲ್ಲಿ 9 ಜನರ ಸಾವಿನ ಹಿಂದಿನ ರಹಸ್ಯ ಬಯಲು: ಏನದು ಗೊತ್ತಾ.? | Tumkur Accident
ರಾಜ್ಯದಲ್ಲಿ ಹೊಸದಾಗಿ 7 ವಿವಿಗಳು ಪ್ರಾರಂಭಿಸಲಾಗುತ್ತದೆ. ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಬಾಗಲಕೋಟೆಯಲ್ಲಿ ಪ್ರಾರಂಭವಾಗಲಿದೆ. ಮಂಡ್ಯದಲ್ಲೂ ಒಂದು ವಿವಿ ಶುರುವಾಗಲಿದೆ. ಯುಜಿಸಿ ಒತ್ತಾಯದ ಮೇರೆಗೆ ವಿವಿಗಳ ಸ್ಥಾಪನೆ ಮಾಡಲಾಗುತ್ತದೆ ಎಂದರು.
ಗುಂಡೆ ಕೋಟೆ ಕರಡಿ ವನ್ಯಜೀವಿ ಧಾಮ, ಶರಾವತಿ ಸಿಂಗಲೀಕ ವನ್ಯಜೀವಿ ಧಾಮ, ಕಪ್ಪತ್ತಗುಡ್ಡ, ಭೀಮಘಡ ಜೀವವೈವಿದ್ಯಧಾಮಗಳೆಂದು ಗುರ್ತಿಸಿದ್ದೇವೆ. ಕೇಂದ್ರ ಸರ್ಕಾರಕ್ಕೆ ಇದನ್ನ ಶಿಫಾರಸು ಮಾಡ್ತೇವೆ ಎಂದು ಹೇಳಿದರು.
ಅಂಗನವಾಡಿ ಪೋಷಣ ಅಭಿಯಾನ ಜಾರಿಗೊಳಿಸಲು 4244 ಅಂಗನವಾಡಿ ಕೇಂದ್ರಗಳ ಅರಂಭಿಸಲಾಗುತ್ತದೆ ಎಂದರು.
ಶಿರಾದಲ್ಲಿ ಭೀಕರ ಅಪಘಾತದಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ಮೃತರಿಗೆ ತಲಾ 5 ಲಕ್ಷ ಪರಿಹಾರ ನೀಡಲು ತೀರ್ಮಾನ ಮಾಡಲಾಗಿದೆ. ಇಂದಿನ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಎಸಿಬಿ ರದ್ಧು ಕೋರಿ ನಾವು ಹೋಗಿಲ್ಲ. ಖಾಸಗಿ ವ್ಯಕ್ತಿಯೊಬ್ಬರು ಹೋಗಿದ್ದಾರೆ. ಅದು ಅಲ್ಲಿ ನಿಲ್ಲುತ್ತೋ ಇಲ್ವೋಗೊತ್ತಿಲ್ಲ ಎಂದರು.