ಬೆಂಗಳೂರು: ಕೊರೋನಾ ಕಾರಣದಿಂದಾಗಿ ( Coronavirus ) ಶಾಲಾ-ಕಾಲೇಜುಗಳ ( School College ) ತಡವಾಗಿ ಆರಂಭವಾಗಿರೋ ಕಾರಣದಿಂದಾಗಿ, ಪರೀಕ್ಷೆಗಳು ಕೂಡ ತಡವಾಗಿ ಆರಂಭಗೊಂಡಿವೆ. ಈ ಹಿನ್ನಲೆಯಲ್ಲಿ ಪದವಿ, ಸ್ನಾತಕೋತ್ತರ ಸೇರಿದಂತೆ ವಿವಿಧ ಕೋರ್ಸ್ ವಿದ್ಯಾರ್ಥಿಗಳ ಪರೀಕ್ಷೆಗೆ ಅನುಕೂಲವಾಗೋ ನಿಟ್ಟಿನಲ್ಲಿ, ಬಿಎಂಟಿಸಿಯು ( BMTC ) ಅಕ್ಟೋಬರ್ 31, 2022ರವರೆಗೆ ಬಿಎಂಟಿಸಿ ಬಸ್ ನಲ್ಲಿ ಉಟಿತವಾಗಿ ಸಂಚರಿಸೋದಕ್ಕೆ ಅವಕಾಶ ನೀಡಿದೆ.
Job Alert: ‘ಪೊಲೀಸ್ ಕಾನ್ಸ್ ಟೇಬಲ್ ಹುದ್ದೆ’ಗಳ ನೇಮಕಾತಿ ಸಂಬಂಧ, ಇಲಾಖೆಯಿಂದ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ
ಈ ಕುರಿತಂತೆ ಬಿಎಂಟಿಸಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕೋವಿಡ್-19 ಸಾಂಕ್ರಾಮಿಕದ ಕಾರಣ 2021-22 ನೇ ಸಾಲಿನ ಕಾಲೇಜಿನ ತರಗತಿಗಳು ತಡವಾಗಿ ಪ್ರಾರಂಭವಾಗಿದ್ದು ಅಂತಿಮ ಸೆಮಿಸ್ಟರ್ನ ಪದವಿ, ವೃತ್ತಿಪರ, ಸ್ನಾತಕೋತ್ತರ ಮತ್ತು ತಾಂತ್ರಿಕ ಹಾಗೂ ವೈಧ್ಯಕೀಯ ವಿದ್ಯಾರ್ಥಿಗಳ ಪರೀಕ್ಷೆಗಳು ಸೆಪ್ಟೆಂಬರ್-2022 ಮತ್ತು ಅಕ್ಟೋಬರ್ – 2022 ರ ಮಾಹೆಯಲ್ಲಿ ಇರುತ್ತವೆ ಎಂದು ತಿಳಿಸಿದೆ.
BIGG NEWS: ಮಂಗಳೂರಿನಲ್ಲಿ ಭಾರಿ ಗಾಳಿಮಳೆಗೆ ಅನಾಹುತ; ತೆಂಗಿನಮರ ಬಿದ್ದು ಮನೆ ಹಾನಿ
ತತ್ಸಂಬಂಧ, ಸದರಿ ವಿದ್ಯಾರ್ಥಿಗಳ ಪರೀಕ್ಷೆಗಳು ಮುಗಿಯುವವರೆಗೂ ಸಂಸ್ಥೆಯ ಸೇವೆಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸುವ ಸಲುವಾಗಿ, 2021-22 ನೇ ಸಾಲಿನ ವಿದ್ಯಾರ್ಥಿ ಬಸ್ ಪಾಸಿನೊಂದಿಗೆ ಅಂತಿಮ ವರ್ಷದ/ಸೆಮಿಸ್ಟರ್ನ ಪದವಿ, ವೃತ್ತಿಪರ, ಸ್ನಾತಕೋತ್ತರ ಮತ್ತು ತಾಂತ್ರಿಕ ಹಾಗೂ ವೈಧ್ಯಕೀಯ ವಿದ್ಯಾರ್ಥಿಗಳು ದಿನಾಂಕ 31.10.2022 ರವರೆಗೆ ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದೆ.
BREAKING NEWS : ಮುರುಘಾಮಠದ ಆಡಳಿತಾಧಿಕಾರಿ, ಮಾಜಿ ಶಾಸಕ ‘ಎಸ್.ಕೆ ಬಸವರಾಜನ್ ದಂಪತಿ’ಗೆ ಜಾಮೀನು ಮಂಜೂರು