ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಹಬ್ಬದ ಮುಂಗಡ ಪಡೆಯಲು ಅಧಿಸೂಚಿಸಿರುವ ಹಬ್ಬಗಳೊಂದಿಗೆ ಹೆಚ್ಚುವರಿಯಾಗಿ ಕೆಲವು ಹಬ್ಬಗಳನ್ನು ಸೇರ್ಪಡೆಗೊಳಿಸಿ ಸರ್ಕಾರ ಆದೇಶಿಸಿದೆ. ಆ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿಯನ್ನು ನೀಡಿದೆ.
ಇಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಸರ್ಕಾರದ ಆದೇಶಗಳ ಅನುಸಾರ ಹಬ್ಬಗಳಿಗಾಗಿ ಮುಂಗಡ ಹಣವನ್ನು ರಾಜ್ಯ ಸರ್ಕಾರಿ ನೌಕರರಿಗೆ ಮಂಜೂರು ಮಾಡಲು ನಿಗದಿಪಡಿಸಿದ ಅರ್ಜಿಯಲ್ಲಿ ಈ ಕೆಳಕಂಡ ಹಬ್ಬಗಳಿಗೆ ಮಾತ್ರ ಹಬ್ಬದ ಮುಂಗಡ ಹಣವನ್ನು ಮಂಜೂರು ಮಾಡಲಾಗುತ್ತಿದೆ ಎಂದಿದ್ದಾರೆ.
ಪಟ್ಟಿ-1
1. ಸೌರಮಾನ ಯುಗಾದಿ ಅಥವಾ ಚಾಂದ್ರಮಾನ ಯುಗಾದಿ
2. ಮಕರ ಸಂಕ್ರಾಂತಿ
3. ದೀಪಾವಳಿ
4. ಗಣೇಶ ಚತುರ್ಥಿ
5. ರಂಜಾನ್
6. ಬಕ್ರೀದ್
7. ಈದ್-ಎ-ಮಿಲಾದ್
8. ಈಸ್ಟರ್
9. ಗಣತಂತ್ರ ದಿನ
10. ಸ್ವಾತಂತ್ರ್ಯ ದಿನ
11. ದಸರಾ
ಪ್ರಸ್ತುತ ರಾಜ್ಯ ಸರ್ಕಾರಿ ನೌಕರರು ಹಬ್ಬದ ಮುಂಗಡವನ್ನು ಪಡೆಯಲು ಅಧಿಸೂಚಿಸಿರುವ ಹಬ್ಬಗಳೊಂದಿಗೆ ಈ ಕೆಳಕಂಡ ಹಬ್ಬಗಳನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಲು ಸರ್ಕಾರವು ನಿರ್ಣಯಿಸಿರುತ್ತದೆ.
ಪಟ್ಟಿ-2
1. ಮಹಾ ಶಿವರಾತ್ರಿ
2. ಶ್ರೀರಾಮನವಮಿ
3.ವರಮಹಾಲಕ್ಷ್ಮಿ ವ್ರತ
4. ಮಹಾಲಯ ಅಮವಾಸ್ಯೆ
5. ನಾಗರ ಪಂಚಮಿ
6. ಕನ್ನಡ ರಾಜ್ಯೋತ್ಸವ
7. ಹೋಳಿ ಹಬ್ಬ
8. ಬಸವ ಜಯಂತಿ
ಆರ್ಥಿಕ ಇಲಾಖೆಯು ಪ್ರಸ್ತಾವನೆಗೆ ಅನುಮೋದನೆ ನೀಡಿರುತ್ತದೆ. ಆದುದರಿಂದ, ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ರಾಜ್ಯ ಸರ್ಕಾರಿ ನೌಕರರು ಹಬ್ಬದ ಮುಂಗಡವನ್ನು ಪಡೆಯಲು ಈಗಾಗಲೇ ಅಧಿಸೂಚಿಸಿರುವ ಹಬ್ಬಗಳೊಂದಿಗೆ ಈ ಕೆಳಕಂಡ ಹಬ್ಬಗಳನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಿ ಆದೇಶಿಸಿದ್ದಾರೆ.
1. ಮಹಾ ಶಿವರಾತ್ರಿ
2. ಶ್ರೀರಾಮನವಮಿ
3. ವರಮಹಾಲಕ್ಷ್ಮಿ ವ್ರತ
4. ಮಹಾಲಯ ಅಮವಾಸ್ಯೆ
5. ನಾಗರ ಪಂಚಮಿ
6. ಕನ್ನಡ ರಾಜ್ಯೋತ್ಸವ
7. ಹೋಳಿ ಹಬ್ಬ
8. ಬಸವ ಜಯಂತಿ

ಬೆಂಗಳೂರಲ್ಲಿ 4 ಲಕ್ಷ ಲಂಚ ಸ್ವೀಕರಿಸುವಾಗಲೇ ಇನ್ಸ್ ಪೆಕ್ಟರ್ ಲೋಕಾಯುಕ್ತ ಬಲೆಗೆ








