ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯ ಕಾರಣದಿಂದಾಗಿ ಸರ್ಕಾರಿ ನೌಕರರಿಗೆ ನೀಡಲಾಗುತ್ತಿದ್ದಂತ ವಿಡಿಎ ತುಟ್ಟಿ ಭತ್ಯೆಯನ್ನು ಮುಂದೂಡಿಕೆ ಮಾಡಲಾಗಿತ್ತು. ಈ ಆದೇಶವನ್ನು ಇಂದು ರಾಜ್ಯ ಸರ್ಕಾರ ವಾಪಾಸ್ ಪಡೆದ ಕಾರಣ, ಶೀಘ್ರವೇ ಮತ್ತೆ ತುಟ್ಟಿಭತ್ಯೆಯನ್ನು ನೀಡುವ ಸಂಬಂಧ ಆದೇಶ ಹೊರಡಿಸಲಾಗುತ್ತದೆ. ಈ ಮೂಲಕ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲಿದೆ.
BREAKING NEWS: ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ್ ಸೇವಾವಧಿ 1 ವರ್ಷ ವಿಸ್ತರಿಸಿ ಸರ್ಕಾರ ಆದೇಶ
ಈ ಬಗ್ಗೆ ರಾಜ್ಯ ಕಾರ್ಮಿಕ ಇಲಾಖೆಯ ಅಧಿಕಾರಿ ನಡವಳಿಯನ್ನು ಹೊರಡಿಸಿದ್ದು, ಕೋವಿಡ್-19 ತುರ್ತು ಸಂದರ್ಭದ ಹಿನ್ನಲೆಯಲ್ಲಿ ಘೋಷಿಸಲಾಗಿದ್ದ ಲಾಕ್ ಡೌನ್ ಅವಧಿಗೆ ವೇತನವನ್ನು ನೀಡಬೇಕೆಂದು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಲ್ಲಿ ತಿಳಿಸಿದ್ದು, ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ ಉದ್ಯೋಗದಾತರ ಹಿತ ರಕ್ಷಣೆಯನ್ನು ಪರಿಗಣಿಸಿ, ದಿನಾಂಕ 01-04-2020 ರಿಂದ 31-03-2021ರವರೆಗೆ ಪಾವತಿಸಬೇಕಾಗಿರುವ ವಿಡಿಎ ಮೊತ್ತವನ್ನು ಮುಂದೂಡಿ ಆದೇಶಿಸಲಾಗಿತ್ತು.
ಚಿತ್ರದುರ್ಗ: ಲಾರಿ-ಕಾರಿನ ನಡುವೆ ಭೀಕರ ಅಪಘಾತ: ದಂಪತಿಗಳಿಬ್ಬರು ಸ್ಥಳದಲ್ಲೇ ಸಾವು
ರಾಜ್ಯ ಸರ್ಕಾರದ ಈ ಆದೇಶದ ವಿರುದ್ಧ ಕಾರ್ಮಿಕ ಸಂಘಟನೆಗಳು ಉಚ್ಛನ್ಯಾಯಾಲಯದ ಮೊರೆ ಹೋಗಿದ್ದರು. ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿರುತ್ತದೆ. ಅಲ್ಲದೇ ಈ ಸಂಬಂಧ ಸರ್ಕಾರದ ಹಂತದಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿರುತ್ತದೆ.
ಈ ಎಲ್ಲಾ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಸರ್ಕಾರ ದಿನಾಂಕ 20-07-2020ರಂದು ಹೊರಡಿಸಿದಂತ ಆದೇಶವನ್ನು ಹಿಪಂಡೆಯಲಾಗಿದೆ ಎಂಬುದಾಗಿ ತಿಳಿಸಿದ್ದಾರೆ. ಹೀಗಾಗಿ ಮತ್ತೆ ರಾಜ್ಯದ ಸರ್ಕಾರಿ ನೌಕರರಿಗೆ ವಿಡಿಎ ಮೊತ್ತವನ್ನು ನೀಡುವ ಆದೇಶ ಹೊರಡಿಸಲಿದ್ದು, ಗುಡ್ ನ್ಯೂಸ್ ನೀಡಲಿದೆ.