ಅಮರಾವತಿ : ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ದೇವರ ದರ್ಶನದ ನಿಯಮಗಳಲ್ಲಿ ಕೆಲವು ಬದಲಾವಣೆ ತಂದಿದೆ. ಇದರಿಂದಾಗಿ ದೇವರ ದರ್ಶನಕ್ಕೆ ಆಗಮಿಸುವ ಹಿರಿಯ ನಾಗರಿಕರಿಗೆ ಸಹಾಯಕವಾಗಲಿದೆ.
BIGG NEWS : ದೇವಸ್ಥಾನ ಸ್ಪೋಟಕ್ಕೆ ಉಗ್ರನ ಸ್ಕೆಚ್ : ಮಂಗಳೂರಿನಲ್ಲಿ ಹೈ ಅಲರ್ಟ್ ; ತೀವ್ರ ತಪಾಸಣೆ
ಹಿರಿಯ ನಾಗರಿಕರು ಸುಲಭವಾಗಿ ದೇವರ ದರ್ಶನ ಮಾಡಲು ಅನುಕೂಲವಾಗುವಂತೆ ಟಿಟಿಡಿ ಎರಡು ಸ್ಲಾಟ್ಗಳನ್ನು ನಿಗದಿ ಮಾಡಿದೆ. ಪ್ರತಿದಿನ ಈ ಸ್ಲಾಟ್ ಲಭ್ಯವಿದ್ದು, ಹಿರಿಯ ನಾಗರಿಕರು ಆ ಸಮಯದಲ್ಲಿ ದರ್ಶನಕ್ಕೆ ಹೋಗಬಹುದು.
BIGG NEWS : ದೇವಸ್ಥಾನ ಸ್ಪೋಟಕ್ಕೆ ಉಗ್ರನ ಸ್ಕೆಚ್ : ಮಂಗಳೂರಿನಲ್ಲಿ ಹೈ ಅಲರ್ಟ್ ; ತೀವ್ರ ತಪಾಸಣೆ
ಪ್ರತಿದಿನ ಬೆಳಗ್ಗೆ 10 ಗಂಟೆಗೆ ಮತ್ತು ಮಧ್ಯಾಹ್ನ 3 ಗಂಟೆಗೆ ವಿಶೇಷ ಸ್ಲಾಟ್ ನಿಗದಿ ಮಾಡಲಾಗಿದೆ. ಈ ಸಮಯದಲ್ಲಿ ಹಿರಿಯ ನಾಗರಿಕರು ವಯಸ್ಸು ನಮೂದಿಸಿರುವ ಫೋಟೋ ಇರುವ ಗುರುತಿನ ಚೀಟಿಯನ್ನು ತೋರಿಸಿ, ದರ್ಶನ ಪಡೆಯಬಹುದು.
ಈ ದರ್ಶನಕ್ಕೆ ಟಿಟಿಡಿ ವಿಶೇಷ ದರವನ್ನು ಏನೂ ನಿಗದಿ ಮಾಡಿಲ್ಲ. ಒಬ್ಬರು ಎರಡು ಲಾಡು ಪ್ರಸಾದ ಪಡೆಯಲು 20 ರೂ. ಮತ್ತು ಹೆಚ್ಚುವರಿ ಪ್ರತಿ ಲಾಡುವಿಗೆ 25 ರೂ. ನೀಡಬೇಕಾಗುತ್ತದೆ. ಹಿರಿಯ ನಾಗರಿಕರು ದರ್ಶನಕ್ಕಾಗಿ ತಾಸುಗಟ್ಟಲೇ ಕಾಯುವುದನ್ನು ತಪ್ಪಿಸಲು ಟಿಟಿಡಿ ಈ ವ್ಯವಸ್ಥೆ ಮಾಡಿದೆ.
BIGG NEWS : ದೇವಸ್ಥಾನ ಸ್ಪೋಟಕ್ಕೆ ಉಗ್ರನ ಸ್ಕೆಚ್ : ಮಂಗಳೂರಿನಲ್ಲಿ ಹೈ ಅಲರ್ಟ್ ; ತೀವ್ರ ತಪಾಸಣೆ
ಪ್ರತ್ಯೇಕ ಸಾಲು ನಿರ್ಮಾಣ
ಟಿಟಿಡಿ ನಿಗದಿಪಡಿಸಿದ ಸ್ಲಾಟ್ಗಳಲ್ಲಿ ಹಿರಿಯ ನಾಗರಿಕರು ಸುಲಭವಾಗಿ ದೇವರ ದರ್ಶನ ಮಾಡಲು ಅನುಕೂಲವಾಗುವಂತೆ ವಿಶೇಷ ಸಾಲು ತೆರೆಯಲಿದೆ. ಅಲ್ಲದೇ ಸಾಲಿನಲ್ಲಿ ಕಾಯುವಾಗ ಅವರಿಗೆ ಆಹಾರದ ವ್ಯವಸ್ಥೆಯನ್ನು ಸಹ ಮಾಡಿದೆ.
BIGG NEWS : ದೇವಸ್ಥಾನ ಸ್ಪೋಟಕ್ಕೆ ಉಗ್ರನ ಸ್ಕೆಚ್ : ಮಂಗಳೂರಿನಲ್ಲಿ ಹೈ ಅಲರ್ಟ್ ; ತೀವ್ರ ತಪಾಸಣೆ
ಕಾರು ಪಾರ್ಕಿಂಗ್ ಪ್ರದೇಶದಿಂದ ಹಿರಿಯ ನಾಗರಿಕರು ದರ್ಶನಕ್ಕೆ ಹೋಗುವ ತನಕ ಮೆಟ್ಟಿಲು ಹತ್ತುವುದನ್ನು ತಪ್ಪಿಸಲು ಬ್ಯಾಟರಿ ಕಾರಿನ ವ್ಯವಸ್ಥೆಯನ್ನು ಮಾಡಿದೆ. ಹಿರಿಯ ನಾಗರಿಕರ ದರ್ಶನ ಸ್ಲಾಟ್ ಅವಧಿಯಲ್ಲಿ ಸಾಮಾನ್ಯ ದರ್ಶನ ಇರುವುದಿಲ್ಲ. ಪ್ರತಿದಿನ ಹಿರಿಯ ನಾಗರಿಕರ ದರ್ಶನಕ್ಕೆ ಎರಡು ಸ್ಲಾಟ್ ನಿಗದಿ ಮಾಡಲಾಗಿದೆ. ಈ ಸ್ಲಾಟ್ ಅವಧಿ 30 ನಿಮಿಷಗಳು. ಸಾಲಿನಲ್ಲಿರುವ ಜನರನ್ನು ನೋಡಿಕೊಂಡು ಸಮಯ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.
ವಿಐಪಿ ದರ್ಶನದ ಅವಧಿಯಲ್ಲಿ ಬದಲಾವಣೆ
ಟಿಟಿಡಿ ನವೆಂಬರ್ ತಿಂಗಳಿನಲ್ಲಿ ತಿರುಪತಿ ವೆಂಕಟೇಶ್ವರನ ವಿಐಪಿ ದರ್ಶನದ ನಿಯಮದಲ್ಲಿ ಸಹ ಬದಲಾವಣೆ ಮಾಡಿದೆ. ವಿಐಪಿ ದರ್ಶನ ಮತ್ತು ಸಾಮಾನ್ಯ ದರ್ಶನದ ಸಮಯ ಒಂದೇ ಆಗಿದ್ದರಿಂದ ಭಕ್ತರಿಗೆ ಆಗುತ್ತಿದ್ದ ತೊಂದರೆ ಗಮನಿಸಿ ಈ ಬದಲಾವಣೆ ಮಾಡಲಾಗಿದೆ. ಆದರೆ ಈ ಬದಲಾವಣೆ ಪ್ರಾಯೋಗಿಕವಾಗಿದ್ದು, ಮುಂದುವರೆಸುವ ಕುರಿತು ನಂತರ ತೀರ್ಮಾನ ಕೈಗೊಳ್ಳಲಾಗುತ್ತದೆ.
BIGG NEWS : ದೇವಸ್ಥಾನ ಸ್ಪೋಟಕ್ಕೆ ಉಗ್ರನ ಸ್ಕೆಚ್ : ಮಂಗಳೂರಿನಲ್ಲಿ ಹೈ ಅಲರ್ಟ್ ; ತೀವ್ರ ತಪಾಸಣೆ