ರಾಮನಗರ: ಸ್ವ ಉದ್ಯೋಗವನ್ನು ಕೈಗೊಳ್ಳುವಂತ ಆಸಕ್ತಿಯಲ್ಲಿದ್ದವರಿಗೆ, ಉಚಿತವಾಗಿ ಊಟ ವಸತಿಯೊಂದಿಗೆ ಬೈಕ್ ರಿಪೇರಿ ತರಬೇತಿಯನ್ನು ನೀಡೋದಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಬಗ್ಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಹಾರೋಹಳ್ಳಿ ಇವರ ಮಾಹಿತಿ ನೀಡಿದ್ದು, ಮೂವತ್ತು ದಿನಗಳ ಉಚಿತ ದ್ವಿಚಕ್ರ ವಾಹನ ರಿಪೇರಿ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. 18-45 ವರ್ಷದೊಳಗಿನ,ರಾಮನಗರ ಜಿಲ್ಲಾ ವ್ಯಾಪ್ತಿಗೆ ಒಳಪಡುವಂತಹ (ಆಸಕ್ತಿ ಇದ್ದಲ್ಲಿ ಅಕ್ಕ ಪಕ್ಕದ ಜಿಲ್ಲೆಯವರು ಭಾಗವಹಿಸಬಹುದು ) ಆಸಕ್ತ ನಿರುದ್ಯೋಗಿ ಯುವಕರು ತರಬೇತಿಯಲ್ಲಿ ಭಾಗವಹಿಸಬಹುದಾಗಿದೆ ಎಂದು ಹೇಳಿದೆ.
ತರಬೇತಿ ಅವಧಿಯಲ್ಲಿ ಊಟ, ವಸತಿ ಉಚಿತ
ಇನ್ನೂ 30 ದಿನಗಳ ದ್ವಿಚಕ್ರ ವಾಹನ ರಿಪೇರಿ ತರಬೇತಿಯಲ್ಲಿ ಭಾಗವಹಿಸುವಂತ ಅಭ್ಯರ್ಥಿಗಳಿಗೆ, ತರಬೇತಿಯ ಅವಧಿಯಲ್ಲಿ ಊಟ, ವಸತಿ ಹಾಗೂ ಕಚ್ಚಾ ಸಾಮಗ್ರಿಗಳ ಸಹಿತ ಸಂಪೂರ್ಣವಾಗಿ ಉಚಿತವಾಗಿರುತ್ತದೆ.
ಇನ್ನೂ ತರಬೇತಿ ಮುಗಿದ ನಂತರ ಶಿಬಿರಾರ್ಥಿಗಳಿಗೆ ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಹಾಗೂ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ 2ಪ್ರಮಾಣ ಪತ್ರಗಳನ್ನು ನೀಡಲಾಗುವುದು.
ಸ್ವ ಉದ್ಯೋಗ ಕೈಗೊಳ್ಳೋರಿಗೆ ಸಿಗಲಿದೆ ಸಾಲ ಸೌಲಭ್ಯ
ಈ ತರಬೇತಿಯಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಬಂಡವಾಳದ ಅನುಕೂಲತೆಗಾಗಿ ಅವರು ಖಾತೆ ಹೊಂದಿರುವ ಬ್ಯಾಂಕ್ ಗೆ ಸಂಪರ್ಕಿಸಿ ಸಾಲದ ವ್ಯವಸ್ಥೆಯನ್ನೂ ಮಾಡಿಕೊಡಲಾಗುವುದು. ಆದ್ರೇ ಇದಕ್ಕೆ ಬ್ಯಾಂಕಿನ ಷರತ್ತುಗಳಿಗೆ ಅನ್ವಯಿಸಲಿದ್ದಾವೆ.
ಈ ದಿನಾಂಕದಿಂದ ತರಬೇತಿ ಆರಂಭ
30 ದಿನಗಳ ಉಚಿತ ದ್ವಿಚಕ್ರ ರಿಪೇರಿ ತರಬೇತಿಯು ದಿನಾಂಕ 21-07-2022ರ ಗುರುವಾರದಿಂದ ಆರಂಭಗೊಳ್ಳಲಿದೆ. ಈ ದಿನಾಂಕದಿಂದ ಮುಂದಿನ 30 ದಿನಗಳ ಕಾಲ ಬೈಕ್ ರಿಪೇರಿ ತರಬೇತಿಯನ್ನು ಉಚಿತ ಊಟ, ವಸತಿಯೊಂದಿಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಹಾರೋಹಳ್ಳಿ ನೀಡಲಿದೆ.
ಚಿತ್ರದುರ್ಗ: ಲಾರಿ-ಕಾರಿನ ನಡುವೆ ಭೀಕರ ಅಪಘಾತ: ದಂಪತಿಗಳಿಬ್ಬರು ಸ್ಥಳದಲ್ಲೇ ಸಾವು
ಅರ್ಹ ಅಭ್ಯರ್ಥಿಗಳು ನೀಡಬೇಕಾದ ದಾಖಲೆಗಳು
ಅಂದಹಾಗೇ ಉಚಿತ ದ್ವಿಚಕ್ರ ರಿಪೇರಿ ತರಬೇತಿಗೆ ಪಡೆಯೋದಕ್ಕೆ ಇಚ್ಚಿಸುವಂತ ಆಸಕ್ತರು, ಈ ಕೆಳಕಂಡ ದಾಖಲೆಗಳೊಂದಿಗೆ ತೆರಳುವುದು ಕಡ್ಡಾಯವಾಗಿದೆ.
- ಬಿಪಿಎಲ್ ಕಾರ್ಡಿನ ಜೆರಾಕ್ಸ್ ಪ್ರತಿ -2
- ಆಧಾರ್ ಕಾರ್ಡಿನ ಜೆರಾಕ್ಸ್ ಪ್ರತಿ -2
- ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ -2
- ಪ್ಯಾನ್ ಕಾರ್ಡಿನ ಜೆರಾಕ್ಸ್ ಪ್ರತಿ -2
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು -5
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಈ ಕೂಡಲೇ ಕರೆ ಮಾಡಿ – ಕೆನರಾ ಬ್ಯಾಂಗ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರದ ನಿರ್ದೇಶಕರು – 8105185202, ತರಬೇತಿ ಸಂಯೋಜಕರು- 9901512638
ಚಿತ್ರದುರ್ಗ: ಲಾರಿ-ಕಾರಿನ ನಡುವೆ ಭೀಕರ ಅಪಘಾತ: ದಂಪತಿಗಳಿಬ್ಬರು ಸ್ಥಳದಲ್ಲೇ ಸಾವು