ಶಿವಮೊಗ್ಗ: ಜಿಲ್ಲಾ ಕೈಗಾರಿಕಾ ಕೇಂದ್ರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅತಿ ಸಣ್ಣ ಉದ್ದಿಮೆದಾರರಿಗೆ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಶೇ.60 ಸಹಾಯಧನ ಯೋಜನೆಯಡಿ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ರಾಷ್ಟ್ರೀಕೃತ ಬ್ಯಾಂಕಿನಿಂದ ಯೋಜನಾ ವೆಚ್ಚದ ಶೇ.90% ಸಾಲ ಹಾಗೂ ಫಲಾನುಭವಿ ವಂತಿಕೆ ಶೇ.10% ವೆಚ್ಚ ಭರಿಸಿ ರೂ. 10 ಲಕ್ಷಗಳ ಒಳಗಿನ ಯೋಜನಾ ವೆಚ್ಚ ಹೊಂದಿದ ಅತಿಸಣ್ಣ ಅರ್ಹ ಉತ್ಪಾದನಾ ಹಾಗೂ ಸೇವಾ ಘಟಕಗಳು. ಇಲಾಖೆಯಿಂದ ಯೋಜನಾ ವೆಚ್ಚದ ಶೆ. 60% ರಷ್ಟು ರೂ. 5 ಲಕ್ಷ ಸಹಾಯಧನ ನೀಡಲಾಗುವುದು. ಕೇವಲ ದುಡಿಮೆ ಬಂಡವಾಳಕ್ಕೆ ಅವಕಾಶ ಇರುವುದಿಲ್ಲ ಹಾಗೂ ಸಹಾಯಧನ ಮಂಜೂರಾದ ನಂತರ 2ವರ್ಷಗಳ ಠೇವಣಿ ಇಡಲಾಗುವುದು ನಂತರ ಸಾಲಕ್ಕೆ ಹೊಂದಾಣಿಕೆ ಮಾಡಲಾಗುವುದು. ಈಗಾಗಲೇ ಬ್ಯಾಂಕಿನಿಂದ ಸಾಲ ಪಡೆದು ಘಟಕಗಳನ್ನು ಸ್ಥಾಪಿಸಿರುವ ಅರ್ಹ ಉದ್ದಿಮೆದಾರರು ಹೆಚ್ಚಿನ ವಿವರಗಳಿಗೆ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ನೆಹರೂ ರಸ್ತೆ, ಶಿವಮೊಗ್ಗ ಇವರನ್ನು ಅಥವಾ ದೂ.ಸಂ.: 08182-222802 ನ್ನು ಸಂಪರ್ಕಿಸುವುದು.