ನವದೆಹಲಿ : ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ದೇಶೀಯ ಬೃಹತ್ ಅವಧಿಯ ಠೇವಣಿಗಳ ಮೇಲಿನ ಬಡ್ಡಿದರಗಳನ್ನ ಹೆಚ್ಚಿಸಿದೆ. ಪರಿಷ್ಕರಣೆಯ ಪರಿಣಾಮವಾಗಿ ಒಂದು ವರ್ಷದಲ್ಲಿ ಪಕ್ವವಾಗುವ ಠೇವಣಿಗಳ ಮೇಲಿನ ಬಡ್ಡಿದರಗಳನ್ನ ಬ್ಯಾಂಕ್ ಎರಡು ವರ್ಷಗಳಿಗಿಂತ ಕಡಿಮೆಗೆ ಹೆಚ್ಚಿಸಿದೆ. ಅದ್ರಂತೆ, ಇದು ಜುಲೈ 15, 2022ರಿಂದ ಅಂದ್ರೆ ಇಂದಿನಿಂದ ಜಾರಿಗೆ ಬರಲಿದೆ ಎಂದು ಬ್ಯಾಂಕಿನ ವೆಬ್ಸೈಟ್ ತಿಳಿಸಿದೆ.
ಎಸ್ಬಿಐ ಎಫ್ಡಿ ದರಗಳು
7 ದಿನಗಳಿಂದ 45 ದಿನಗಳಲ್ಲಿ ಪಕ್ವವಾಗುವ ಠೇವಣಿಗಳ ಮೇಲೆ ಬ್ಯಾಂಕ್ ಶೇಕಡಾ 3.50 ರಷ್ಟು ಬಡ್ಡಿದರವನ್ನು ಪಾವತಿಸುವುದನ್ನು ಮುಂದುವರಿಸುತ್ತದೆ. ಆದ್ರೆ, ಎಸ್ಬಿಐ 46 ದಿನಗಳಿಂದ 179 ದಿನಗಳಲ್ಲಿ ಪಕ್ವವಾಗುವ ಅವಧಿ ಠೇವಣಿಗಳ ಮೇಲೆ ಶೇಕಡಾ 4.00 ರಷ್ಟು ಬಡ್ಡಿದರ ನೀಡುವುದನ್ನ ಮುಂದುವರಿಸುತ್ತದೆ. 180 ದಿನಗಳಿಂದ 210 ದಿನಗಳವರೆಗೆ ಪಕ್ವವಾಗುವ ಠೇವಣಿಗಳ ಮೇಲೆ, ಎಸ್ಬಿಐ ಶೇಕಡಾ 4.25 ರಷ್ಟು ಬಡ್ಡಿದರವನ್ನು ನೀಡುವುದನ್ನು ಮುಂದುವರಿಸುತ್ತದೆ. ಆದ್ರೆ, 211 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಗೆ ಪಕ್ವವಾಗುವ ಸ್ಥಿರ ಠೇವಣಿಗಳ ಮೇಲೆ ಬ್ಯಾಂಕ್ ತನ್ನ ಬಡ್ಡಿದರವನ್ನ ಶೇಕಡಾ 4.50 ಕ್ಕೆ ಸ್ಥಿರವಾಗಿರಿಸಿದೆ. 1 ವರ್ಷದಿಂದ 2 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಪಕ್ವವಾಗುವ ಠೇವಣಿಗಳು ಈಗ 5.25% ಬಡ್ಡಿದರವನ್ನು ಪಡೆಯುತ್ತವೆ, ಇದು ಈ ಮೊದಲು 4.75% ಆಗಿತ್ತು, ಇದು 50 ಬಿಪಿಎಸ್ ಹೆಚ್ಚಳವಾಗಿದೆ.
2 ವರ್ಷದಿಂದ 3 ವರ್ಷಗಳಿಗಿಂತ ಕಡಿಮೆ ಅವಧಿಯವರೆಗೆ ಪಕ್ವವಾಗುವ ಠೇವಣಿಗಳ ಮೇಲೆ ಶೇಕಡಾ 4.25ರಷ್ಟು ಮತ್ತು 3 ವರ್ಷಗಳಲ್ಲಿ ಮತ್ತು 10 ವರ್ಷಗಳವರೆಗೆ ಪಕ್ವವಾಗುವ ಠೇವಣಿಗಳಿಗೆ ಶೇಕಡಾ 4.50 ರಷ್ಟು ಬಡ್ಡಿದರವನ್ನ ಬ್ಯಾಂಕ್ ನೀಡುವುದನ್ನು ಮುಂದುವರಿಸುತ್ತದೆ. ಎಸ್ಬಿಐ ತನ್ನ ವೆಬ್ಸೈಟ್ನಲ್ಲಿ “ಪರಿಷ್ಕೃತ ಬಡ್ಡಿದರಗಳನ್ನ ಹೊಸ ಠೇವಣಿಗಳು ಮತ್ತು ಪಕ್ವಗೊಳ್ಳುವ ಠೇವಣಿಗಳ ನವೀಕರಣಗಳಿಗೆ ಅನ್ವಯಿಸುವಂತೆ ಮಾಡಲಾಗುವುದು. ದೇಶೀಯ ಅವಧಿಯ ಠೇವಣಿಗಳ ದರಗಳಿಗೆ ಅನುಗುಣವಾಗಿ ಎನ್ಆರ್ಒ ಅವಧಿಯ ಠೇವಣಿಗಳ ಮೇಲಿನ ಬಡ್ಡಿದರಗಳನ್ನ ಹೊಂದಿಸಲಾಗುತ್ತದೆ. ಈ ಬಡ್ಡಿದರಗಳನ್ನು ಸಹಕಾರಿ ಬ್ಯಾಂಕುಗಳಿಂದ ದೇಶೀಯ ಅವಧಿಯ ಠೇವಣಿಗಳಿಗೂ ಅನ್ವಯಿಸುವಂತೆ ಮಾಡಲಾಗುವುದು.