ನವದೆಹಲಿ: ಸ್ಯಾಮ್ಸಂಗ್ ಫೋನ್ ಬಳಕೆದಾರರಿಗೆ 5G ತಡೆರಹಿತ ಅನುಭವ ನೀಡಲು ಪ್ರಸ್ತುತ ಆಪರೇಟರ್ ಪಾಲುದಾರರೊಂದಿಗೆ ಕಾರ್ಯನಿರ್ವಹಿಸುತ್ತಿದೆ. ನವೆಂಬರ್ 2022 ರ ಅಂತ್ಯದ ವೇಳೆಗೆ ನಮ್ಮ 5G ಸಾಧನಗಳು ಭಾರತೀಯ ಗ್ರಾಹಕರು 5G ಸಂಪರ್ಕವನ್ನು ಆನಂದಿಸಬಹುದು ಎಂದು Samsung ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ಹೊಸ ತಂತ್ರಜ್ಞಾನದತ್ತ ಸುಗಮ ಸ್ಥಿತ್ಯಂತರವನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಬುಧವಾರ ಹ್ಯಾಂಡ್ಸೆಟ್ ತಯಾರಕರು ಮತ್ತು ಟೆಲಿಕಾಂ ಸೇವಾ ಪೂರೈಕೆದಾರರ ಸಭೆಯನ್ನು ಕರೆದಿತ್ತು. ಈ ವೇಳೆ ಈ ಪ್ರಕಟಣೆ ಹೊರಬಿದ್ದಿದೆ. ಸಾಫ್ಟ್ವೇರ್ ಅಪ್ಗ್ರೇಡ್ಗಳಿಗೆ ಆದ್ಯತೆ ನೀಡುವುದರಿಂದ ಭಾರತದಲ್ಲಿ 5G ಯ ಆರಂಭಿಕ ಅಳವಡಿಕೆಯನ್ನು ಸಕ್ರಿಯಗೊಳಿಸುತ್ತದೆ.
ಏರ್ಟೆಲ್ ಮತ್ತು ಜಿಯೋ ಪ್ರಮುಖ ಮಹಾನಗರಗಳಲ್ಲಿ ಹಂತ ಹಂತವಾಗಿ ತಮ್ಮ 5G ಸೇವೆಗಳನ್ನು ಹೊರತಂದಿವೆ. Vodafone-Idea ನಿಂದ ಇನ್ನೂ ಯಾವುದೇ 5Gಯ ಬಗ್ಗೆ ಮಾಹಿತಿ ಹೊರಬಂದಿಲ್ಲ. ಇತ್ತೀಚಿನ ಎರಿಕ್ಸನ್ ವರದಿಯ ಪ್ರಕಾರ ಭಾರತವು 500 ಮಿಲಿಯನ್ಗಿಂತಲೂ ಹೆಚ್ಚು ಸ್ಮಾರ್ಟ್ಫೋನ್ ಬಳಕೆದಾರರಿಗೆ ನೆಲೆಯಾಗಿದೆ ಮತ್ತು 5G-ಸಿದ್ಧ ಸ್ಮಾರ್ಟ್ಫೋನ್ಗಳನ್ನು ಹೊಂದಿರುವ 100 ಮಿಲಿಯನ್ ಬಳಕೆದಾರರು 2023 ರಲ್ಲಿ 5G ಚಂದಾದಾರಿಕೆಗೆ ಅಪ್ಗ್ರೇಡ್ ಮಾಡಲು ಬಯಸುತ್ತಾರೆ ಎನ್ನಲಾಗಿದೆ.
BIGG NEWS: ಕಲಬುರಗಿಯಲ್ಲಿ ಸಾರಿಗೆ ಬಸ್ ಚಾಲಕನ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ