ಬೆಂಗಳೂರು : ರಾಜ್ಯದ ಗ್ರಾಮೀಣ ಜನತೆಗೆ ರಾಜ್ಯ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಿದ್ದು, ಇನ್ಮುಂದೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗಳಲ್ಲೇ ಜನನ, ಮರಣ ಪ್ರಮಾಣಪತ್ರಗಳ ಡಿಜಿಟಲ್ ದಾಖಲೆಗಳು ಸಿಗಲಿವೆ.
ಗ್ರಾಮೀಣ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ಜನನ ಮತ್ತು ಮರಣ ನೋಂದಣಿಗಳನ್ನು ದಾಖಲಿಸುವ ಉದ್ದೇಶದಿಂದ ಗ್ರಾಮಪಂಚಾಯಿತಿಗಳಲ್ಲೇ ಜನನ ಮರಣ ಪತ್ರಗಳ ಡಿಜಿಟಲ್ ದಾಖಲೆಗಳನ್ನು ನೀಡಲು ನಿರ್ಧರಿಸಿದೆ.
ಇ-ಜನ್ಮ ಪೋರ್ಟ್‌ಲ್‌ನಲ್ಲಿಆಧಾರ್ ಕಾರ್ಡ್ ಮಾದರಿಯಲ್ಲಿಯೇ ಒಬ್ಬರಿಗೆ ಒಂದು ನಂಬರ್ ಸಿಗಲಿದ್ದು, ಮಗು ಹುಟ್ಟಿದ ತಕ್ಷಣ ಆ ಮಾಹಿತಿಯನ್ನು ಗ್ರಾಮ ಪಂಚಾಯತ್‌ಗಳಿಗೆ ನೀಡಬೇಕು. ಗ್ರಾಮ ಪಂಚಾಯತ್ ಅಧಿಕಾರಿಗಳು ಇ-ಜನ್ಮ ಪೋರ್ಟ್‌ಲ್‌ನಲ್ಲಿ ತಂದೆ, ತಾಯಿ ಹೆಸರು, ಆಧಾರ್, ಪಾನ್ ಕಾರ್ಡ್ ಸೇರಿ ಯಾವುದಾದರೊಂದು ದಾಖಲಾತಿ ನೀಡಿ ಅಪ್ಲೋಡ್ ಮಾಡುತ್ತಾರೆ. ನಂತರ ಸರ್ಟಿಫಿಕೇಟ್‌ನೊಂದಿಗೆ ನಂಬರ್ ವೊಂದು ಜನರೇಟ್ ಆಗಲಿದ್ದು, ಈ ನಂಬರ್ ಪಡೆದು ಎಲ್ಲಿ ಬೇಕಾದರೂ ಆನ್‌ಲೈನ್‌ನಲ್ಲಿ ಮಾಹಿತಿ, ದಾಖಲೆ ಪಡೆದುಕೊಳ್ಳಬಹುದು.