ಬೆಂಗಳೂರು: ಪ್ರಯಾಣಿಕ ಸ್ನೇಹಿಯಾಗಿ ರೈಲ್ವೆ ಇಲಾಖೆಯನ್ನು ಮಾಡುವ ನಿಟ್ಟಿನಲ್ಲಿ ಇದೀಗ ಭಾರತೀಯ ರೈಲ್ವೆಯಿಂದ ಮಹತ್ವದ ಹೆಜ್ಜೆ ಇರಿಸಲಾಗಿದೆ. ಇನ್ಮುಂದೆ ಮೊಬೈಲ್ ಅಪ್ಲಿಕೇಷನ್ ಮೂಲಕವೂ ಕಾಯ್ದಿರಿಸದ ಟಿಕೆಟ್ ಬುಕ್ಕಿಂಗ್ ಸೌಲಭ್ಯವನ್ನು ಕಲ್ಪಿಸಿದೆ.
ಈ ಕುರಿತಂತೆ ನೈರುತ್ಯ ರೈಲ್ವೆ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು “ಯುಟಿಎಸ್ ಮೊಬೈಲ್ ಅಪ್ಲಿಕೇಶನ್ ಮೂಲಕ ಕಾಯ್ದಿರಿಸದ ಟಿಕೆಟ್” ಕುರಿತು ದಿನಾಂಕ 12.12.2022ರಿಂದ 11.01.2023ರ ವರೆಗೆ ಒಂದು ತಿಂಗಳ ಜಾಗೃತಿ ಅಭಿಯಾನವನ್ನು ಪ್ರಾರಂಭಿಸುತ್ತಿದೆ.
ಸರ್ಕಾರಿ ಉದ್ಯೋಗಿಗಳಿಗೆ ಗುಡ್ ನ್ಯೂಸ್ ; ಶೀಘ್ರ ‘ತುಟ್ಟಿಭತ್ಯೆ’ ಹೆಚ್ಚಳ, ಸ್ಯಾಲರಿ ಹೈಕ್
ಯುಟಿಎಸ್ ಆನ್ ಮೊಬೈಲ್ ಅಪ್ಲಿಕೇಶನಗಾಗಿ ಆಂಡ್ರಾಯ್ಡ್ ಮೊಬೈಲ್ಗಳಲ್ಲಿ ಗೂಗಲ್ ಪ್ಲೇ ಸ್ಟೋರ್ನಿಂದ, ವಿಂಡೋಸ್ ಮೊಬೈಲ್ಗಳಿಲ್ಲಿ ವಿಂಡೋಸ್ ಸ್ಟೋರ್ ಮತ್ತು ಐಫೋನ್ ಬಳಕೆದಾರರಿಗಾಗಿ ಆಪಲ್ ಸ್ಟೋರ್ನಿಂದ ಡೌನ್ಲೋಡ್ ಮಾಡಬಹುದು.
ಯುಟಿಎಸ್ ಮೊಬೈಲ್ ಅಪ್ಲಿಕೇಶನ್ನಲ್ಲಿ ಪ್ರಯಾಣಿಕರು ಕಾಯ್ದಿರಿಸದ ಪ್ರಯಾಣದ ಟಿಕೆಟ್ಗಳು, ಸೀಸನ್ ಟಿಕೆಟ್ಗಳು ಮತ್ತು ಪ್ಲಾಟ್ಫಾರ್ಮ್ ಟಿಕೆಟ್ಗಳನ್ನು ಖರೀದಿಸಬಹುದು.
ಈ ಯುಟಿಎಸ್ ಅಪ್ಲಿಕೇಶನ್ ಅನ್ನು ಬಳಸುವ ಮೂಲಕ, ಪ್ರಯಾಣಿಕರು ಕಾಯ್ದಿರಿಸದ ಟಿಕೆಟ್ಗಳನ್ನು ಖರೀದಿಸಲು ದೀರ್ಘ ಸರದಿಯಲ್ಲಿ ಕಾಯಬೇಕಾಗಿಲ್ಲ. ಅವರು ತಮ್ಮ ಮೊಬೈಲ್ನಲ್ಲಿ ಯುಟಿಎಸ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕು ಮತ್ತು ನಿಲ್ದಾಣದ ಆವರಣವನ್ನು ಪ್ರವೇಶಿಸುವ ಮೊದಲು ಟಿಕೆಟ್ಗಳನ್ನು ಖರೀದಿಸಬೇಕು ಮತ್ತು ಡಿಜಿಟಲ್ ಟಿಕೆಟ್ ಅನ್ನು ರಚಿಸಿದ ನಂತರ ನೇರವಾಗಿ ರೈಲು ಹತ್ತಬೇಕಾಗುತ್ತದೆ.
BREAKING NEWS: ರಾಜ್ಯದಲ್ಲೇ ಮೊದಲ ಝೀಕಾ ವೈರಸ್ ರಾಯಚೂರಿನಲ್ಲಿ ದೃಢ: ಇಂದು ಸಂಜೆ ಮಾರ್ಗಸೂಚಿ ಬಿಡುಗಡೆ
ಇದು ಡಿಜಿಟಲ್ ಇಂಡಿಯಾದ ಕಡೆಗೆ ಒಂದು ಉಪಕ್ರಮವಾಗಿದೆ ಮತ್ತು ಡಿಜಿಟಲ್ ಆರ್ಥಿಕತೆ ಮತ್ತು ನಗದು ರಹಿತ ವ್ಯವಹಾರವನ್ನು ಉತ್ತೇಜಿಸುತ್ತದೆ. ಇದು ಟಿಕೆಟ್ಗಳು ಮತ್ತು ಕರೆನ್ಸಿ ನೋಟುಗಳ ಮುದ್ರಣದ ವೆಚ್ಚವನ್ನು ಉಳಿಸುತ್ತದೆ.
ಯುಟಿಎಸ್ ಅಪ್ಲಿಕೇಶನ್ನ ಬಳಕೆಯ ಕುರಿತು ಯಾವುದೇ ಸಲಹೆಗಳನ್ನು ಇಲ್ಲಿಗೆ ಕಳುಹಿಸಬಹುದು:
@SrDCM_BENGALURU ಟ್ವಿಟ್ಟರ್ನಲ್ಲಿ.
Whatsapp ನಲ್ಲಿ 8861309572
ಇಮೇಲ್ ನಲ್ಲಿ dcmbengaluru@gmail.com.
ಮೌಲ್ಯಯುತ ಸಲಹೆ ಗಳಿಗೆ ಸೂಕ್ತ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದೆ.