ಮೈಸೂರು: ನೈರುತ್ಯ ರೈಲ್ವೆ ಮೈಸೂರು ವಿಭಾಗದ ಅಧೀನದಲ್ಲಿರುವ ಜನಪ್ರಿಯ ಪಾರಂಪರಿಕ ಪ್ರವಾಸಿ ತಾಣವಾದ ಮೈಸೂರು ರೈಲ್ವೆ ಮ್ಯೂಸಿಯಂನಲ್ಲಿ, ವೀಕ್ಷಕರ ಅನುಕೂಲಕ್ಕಾಗಿ ಡಿಜಿಟಲ್ ಕ್ಯೂಆರ್ ಆಧಾರಿತ ಪಾವತಿ ಸೌಲಭ್ಯವನ್ನು ಪರಿಚಯಿಸಲಾಗಿದೆ.
29 ಜನವರಿ 2026 ರಿಂದ ಮ್ಯೂಸಿಯಂಗೆ ಭೇಟಿ ನೀಡುವ ಪ್ರವಾಸಿಗರು ಮತ್ತು ಸಾರ್ವಜನಿಕರು ಪ್ರವೇಶ ಶುಲ್ಕ ಹಾಗೂ ಇತರ ಅನುಮತಿಸಲ್ಪಟ್ಟ ಸೇವೆಗಳಿಗಾಗಿ ಯುಪಿಐ / ಕ್ಯೂಆರ್ ಕೋಡ್ ಮೂಲಕ ಡಿಜಿಟಲ್ ಪಾವತಿ ವಿಧಾನವನ್ನು ಬಳಸಿಕೊಳ್ಳಬಹುದು. ಇದರಿಂದಾಗಿ ನಗದು ರಹಿತ, ಸುರಕ್ಷಿತ ಹಾಗೂ ಸುಲಭ ಪಾವತಿ ಅನುಭವವನ್ನು ಒದಗಿಸುವ ಉದ್ದೇಶ ಹೊಂದಿದ್ದು, ದೇಶದ ವಿವಿಧ ಭಾಗಗಳಿಂದ ಆಗಮಿಸುವ ಪ್ರವಾಸಿಗರಿಗೆ ವಿಶೇಷವಾಗಿ ಸಹಕಾರಿಯಾಗಲಿದೆ.
ಡಿಜಿಟಲ್ ಪಾವತಿ ಸೌಲಭ್ಯದ ಪರಿಚಯವು ಡಿಜಿಟಲ್ ಇಂಡಿಯಾ ಯೋಜನೆಯತ್ತ ಭಾರತೀಯ ರೈಲ್ವೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತಿದ್ದು, ಪಾರಂಪರಿಕ ಹಾಗೂ ಪ್ರವಾಸಿ ತಾಣಗಳಲ್ಲಿ ವೀಕ್ಷಕರಿಗೆ ಉತ್ತಮ ಸೇವೆ ಮತ್ತು ಸುಲಭ ಪ್ರವೇಶವನ್ನು ಒದಗಿಸಲು ನೆರವಾಗುತ್ತದೆ.
ಮೈಸೂರು ರೈಲ್ವೆ ಮ್ಯೂಸಿಯಂಗೆ ಭೇಟಿ ನೀಡುವ ಎಲ್ಲ ವೀಕ್ಷಕರು ಈ ಡಿಜಿಟಲ್ ಪಾವತಿ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮೈಸೂರಿನ ನೈರುತ್ಯ ರೈಲ್ವೆ ವಿಭಾಗವು ವಿನಂತಿಸಿದೆ.
ಬೆಂಗಳೂರಲ್ಲಿ 4 ಲಕ್ಷ ಲಂಚ ಸ್ವೀಕರಿಸುವಾಗಲೇ ಇನ್ಸ್ ಪೆಕ್ಟರ್ ಲೋಕಾಯುಕ್ತ ಬಲೆಗೆ
ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಹಬ್ಬದ ಮುಂಗಡ ಪಡೆಯಲು ಈ ಹಬ್ಬಗಳನ್ನು ಸೇರ್ಪಡೆಗೊಳಿಸಿ ಸರ್ಕಾರ ಆದೇಶ








