Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಂಡ್ಯದಲ್ಲಿ ಜಮೀನು ಖಾತೆ ಮಾಡಿಕೊಡಲು 10 ಸಾವಿರ ಲಂಚ ಸ್ವೀಕಾರ : ಲೋಕಾಯುಕ್ತ ಬಲೆಗೆ ಬಿದ್ದ ರೆವಿನ್ಯೂ ಇನ್ಸ್‌ಪೆಕ್ಟರ್!

ರಾಜ್ಯಾದ್ಯಂತ ‘ಉಚಿತ ಬಸ್ ಪಾಸ್’ ವಿತರಣೆ ಆರಂಭ: ಇಂದು ಒಂದೇ ದಿನ 2764 ವಿದ್ಯಾರ್ಥಿಗಳಿಗೆ ಪಾಸ್ ವಿತರಣೆ

ಫ್ರಿಡ್ಜ್‌ನಲ್ಲಿ ಎಂದಿಗೂ ಇಡಬಾರದ 7 ಹಣ್ಣುಗಳಿವು; ಯಾಕೆ ಅಂತ ಈ ಸುದ್ದಿ ಓದಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಸರ್ಕಾರದಿಂದ `ಆಸ್ತಿ’ ಖರೀದಿದಾರರಿಗೆ ಗುಡ್ ನ್ಯೂಸ್ : `ಇ-ಆಸ್ತಿ’ ತಂತ್ರಾಂಶದಿಂದ `ಆಸ್ತಿ’ ಮಾಹಿತಿ ಪಡೆಯಬಹುದು!
KARNATAKA

ರಾಜ್ಯ ಸರ್ಕಾರದಿಂದ `ಆಸ್ತಿ’ ಖರೀದಿದಾರರಿಗೆ ಗುಡ್ ನ್ಯೂಸ್ : `ಇ-ಆಸ್ತಿ’ ತಂತ್ರಾಂಶದಿಂದ `ಆಸ್ತಿ’ ಮಾಹಿತಿ ಪಡೆಯಬಹುದು!

By kannadanewsnow57

ಬೆಂಗಳೂರು : ಕೃಷಿ ಜಮೀನಿನ ನೋಂದಣಿಗೆ ಭೂಮಿ ತಂತ್ರಾಂಶದೊಂದಿಗೆ 2006ರಿಂದಲೇ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ ತಂತ್ರಾಂಶವನ್ನು ಸಂಯೋಜನೆ ಮಾಡಲಾಗಿದ್ದು ಜಮೀನಿನ ಸರ್ವೆ ನಕ್ಷೆ(ಸ್ಕೆಚ್)- ನಮೂನೆ 11 ಇ ಇರುವ ಮೋಜಣಿ ತಂತ್ರಾಶದೊಂದಿಗೆ ಹಾಗೂ ಕಾವೇರಿ ತಂತ್ರಾಂಶವನ್ನು 2016 ಅಕ್ಟೋಬರ್ 05 ರಿಂದ ಸಂಯೋಜನೆ ಮಾಡಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿಯೇತರ ಸ್ವತ್ತುಗಳ ದಸ್ತಾವೇಜುಗಳ ನೋಂದಣಿಗಾಗಿ ಇ-ಸ್ವತ್ತು ತಂತ್ರಾಂಶವನ್ನು 2014 ಜುಲೈ 18 ರ ಸುತ್ತೋಲೆಯಂತೆ ಸಂಯೋಜನೆಗೊಳಿಸಲಾಗಿದೆ.

ಮೇಲಿನ ಆಸ್ತಿಗಳನ್ನು ಹೊರತು ಪಡಿಸಿ ಅಂದರೆ ನಗರ ಪ್ರದೇಶಗಳಲ್ಲಿನ ಕೃಷಿಯೇತರ ಆಸ್ತಿಗಳಿಗೆ ಸಂಬಂಧಿಸಿದಂತೆ ಇ-ಆಸ್ತಿ(ತಂತ್ರಾಶ)ವನ್ನು ರೂಪಿಸಿದ್ದು, ಇ-ಆಸ್ತಿ ತಂತ್ರಾಂಶವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.0 ತಂತ್ರಾಶದೊಂದಿಗೆ ಪ್ರಾಯೋಗಿಕವಾಗಿ ರಾಮನಗರ ಮತ್ತು ಕನಕಪುರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಸಂಬಂಧಿಸಿದಂತೆ ಕಾವೇರಿ-2.0 ತಂತ್ರಾಂಶದೊಂದಿಗೆ ಸಂಯೋಜನೆ ಮಾಡಿ 2020 ಜನವರಿ 01 ರಿಂದ ನೋಂದಣಿ ಮಾಡುತ್ತಿರುವುದು ಯಶಸ್ವಿಯಾಗಿರುತ್ತದೆ.

ನಗರಾಭಿವೃದ್ಧಿ ಇಲಾಖೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿಗಳ ಹಕ್ಕು ವರ್ಗಾವಣೆಗೆ ಸಂಬಂಧಿಸಿದಂತೆ ಇ-ಆಸ್ತಿ ತಂತ್ರಾಂಶ ಮತ್ತು ಕಾವೇರಿ ತಂತ್ರಾಂಶವನ್ನು ಸಂಯೋಜನೆ ಮಾಡಲು ಸಮ್ಮತಿ ನೀಡಿರುತ್ತಾರೆ. ಮುಂದುವರೆದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ಥಿಗಳ ನೋಂದಣಿಯನ್ನು ಇ-ಆಸ್ತಿ ತಂತ್ರಾಂಶದಿಂದ ಕಡ್ಡಾಯವಾಗಿ ಮಾಹಿತಿ ಪಡೆದು ನೋಂದಾಯಿಸಲು ಇ-ಆಸ್ತಿ ತಂತ್ರಾಂಶವನ್ನು ಕಾವೇರಿ-2, ತಂತ್ರಾಂಶದೊಂದಿಗೆ 2024 ಸೆಪ್ಟೆಂಬರ್. 07 ರಿಂದ ಜಾರಿಗೆ ಬರುವಂತೆ ಸರ್ಕಾರದ ಆದೇಶ ಸಂಖ್ಯೆ:ಕಂಇ/20/ಎಂಎನ್‌ಎಂಯು/2023, ದಿನಾಂಕ:23-09-2024 ರ ಆದೇಶದ ಮೂಲಕ ಆದೇಶಿಸಲಾಗಿದೆ. ಆದಕಾರಣ ದಿನಾಂಕ:07-09-2024 ರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಎಲ್ಲಾ ಉಪನೋಂದಣಿ ಕಛೇರಿಗಳಲ್ಲಿ ನಗರ ಸ್ಥಳಿಯ ಸಂಸ್ಥೆಗಳ ಆಸ್ತಿಯನ್ನು ನೋಂದಾಯಿಸಲು ಆಸ್ತಿಯ ಮಾಹಿತಿಯನ್ನು ಕಡ್ಡಾಯವಾಗಿ ಇ-ಆಸ್ತಿ ತಂತ್ರಾಂಶದಿಂದಲೇ ಪಡೆಯಬೇಕಿರುತ್ತದೆ.

ಇ-ಖಾತಾ ಸಂಯೋಜನೆಯಿಂದ ಸಾರ್ವಜನಿಕರಿಗೆ ಆಗುವಂತಹ ಉಪಯೋಗಗಳು

ಇ-ಆಸ್ತಿ ತಂತ್ರಾಂಶದಿಂದಾಗಿ ಸ್ವತ್ತುಗಳ ನೋಂದಣಿ ವೇಳೆ ಸಾರ್ವಜನಿಕರು ಮೋಸ ಹೋಗುವುದನ್ನು ತಡೆಯುವುದು. ಇ-ಖಾತಾದಿಂದ ಮಾತ್ರ ಸ್ವತ್ತಿನ ಸ್ವರೂಪ ಮತ್ತು ನೈಜ ಮಾಲೀಕರನ್ನು ಗುರುತಿಸಲು ಸಾಧ್ಯ. ನೈಜ ಮಾಲೀಕರಿಗೆ ವಂಚಿಸಿ ಬೇರೆಯವರಿಂದ ಸ್ವತ್ತುಗಳ ನೋಂದಣಿಯನ್ನು ತಪ್ಪಿಸುವುದು. ಸ್ವತ್ತುಗಳ ಖರೀದಿದಾರರಿಗೆ ಸ್ವತ್ತಿನ ನೈಜ ಮಾಲೀಕರನ್ನು ಗುರುತಿಸುವುದು. ಭವಿಷ್ಯದಲ್ಲಿ ಉಂಟಾಗಬಹುದಾದ ವ್ಯಾಜ್ಯ, ಕಾನೂನು ತೊಂದರೆಗಳನ್ನು ತಪ್ಪಿಸುವುದು.

ಸಾರ್ವಜನಿಕರು ಇ-ಆಸ್ತಿ ಸಂಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Good news for ``property'' buyers from state government: ``Property'' information can be obtained from ``e-Asti'' software! ರಾಜ್ಯ ಸರ್ಕಾರದಿಂದ `ಆಸ್ತಿ' ಖರೀದಿ
Share. Facebook Twitter LinkedIn WhatsApp Email

Related Posts

ಮಂಡ್ಯದಲ್ಲಿ ಜಮೀನು ಖಾತೆ ಮಾಡಿಕೊಡಲು 10 ಸಾವಿರ ಲಂಚ ಸ್ವೀಕಾರ : ಲೋಕಾಯುಕ್ತ ಬಲೆಗೆ ಬಿದ್ದ ರೆವಿನ್ಯೂ ಇನ್ಸ್‌ಪೆಕ್ಟರ್!

2 Mins Read

ರಾಜ್ಯಾದ್ಯಂತ ‘ಉಚಿತ ಬಸ್ ಪಾಸ್’ ವಿತರಣೆ ಆರಂಭ: ಇಂದು ಒಂದೇ ದಿನ 2764 ವಿದ್ಯಾರ್ಥಿಗಳಿಗೆ ಪಾಸ್ ವಿತರಣೆ

2 Mins Read

ಬಾಗಲಕೋಟೆಯಲ್ಲಿ ‘KSRTC’ ಬಸ್, ಲಾರಿ ಮಧ್ಯ ಭೀಕರ ಅಪಘಾತ : ಇಬ್ಬರು ಪ್ರಯಾಣಿಕರ ಸಾವು, ಹಲವರಿಗೆ ಗಾಯ!

1 Min Read
Recent News

ಮಂಡ್ಯದಲ್ಲಿ ಜಮೀನು ಖಾತೆ ಮಾಡಿಕೊಡಲು 10 ಸಾವಿರ ಲಂಚ ಸ್ವೀಕಾರ : ಲೋಕಾಯುಕ್ತ ಬಲೆಗೆ ಬಿದ್ದ ರೆವಿನ್ಯೂ ಇನ್ಸ್‌ಪೆಕ್ಟರ್!

ರಾಜ್ಯಾದ್ಯಂತ ‘ಉಚಿತ ಬಸ್ ಪಾಸ್’ ವಿತರಣೆ ಆರಂಭ: ಇಂದು ಒಂದೇ ದಿನ 2764 ವಿದ್ಯಾರ್ಥಿಗಳಿಗೆ ಪಾಸ್ ವಿತರಣೆ

ಫ್ರಿಡ್ಜ್‌ನಲ್ಲಿ ಎಂದಿಗೂ ಇಡಬಾರದ 7 ಹಣ್ಣುಗಳಿವು; ಯಾಕೆ ಅಂತ ಈ ಸುದ್ದಿ ಓದಿ!

BIG UPDATE : ಅಸ್ಸಾಂನಲ್ಲಿ ವಾಯುಪಡೆಯ ವಿಮಾನ ಪತನ ಕೇಸ್ : ಘಟನೆಯಲ್ಲಿ ಐವರು ಯೋಧರು ಹುತಾತ್ಮ | Watch Video

State News
KARNATAKA

ಮಂಡ್ಯದಲ್ಲಿ ಜಮೀನು ಖಾತೆ ಮಾಡಿಕೊಡಲು 10 ಸಾವಿರ ಲಂಚ ಸ್ವೀಕಾರ : ಲೋಕಾಯುಕ್ತ ಬಲೆಗೆ ಬಿದ್ದ ರೆವಿನ್ಯೂ ಇನ್ಸ್‌ಪೆಕ್ಟರ್!

By ಸುರೇಶ್‌ KARNATAKA 2 Mins Read

ಮಂಡ್ಯ: ಜಮೀನಿನ ಪೋಡಿ ಹಾಗೂ ಖಾತೆ ಮಾಡಿಕೊಡಲು ಸಾರ್ವಜನಿಕರಿಂದ ಲಂಚ ಪಡೆಯುತ್ತಿದ್ದ ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ…

ರಾಜ್ಯಾದ್ಯಂತ ‘ಉಚಿತ ಬಸ್ ಪಾಸ್’ ವಿತರಣೆ ಆರಂಭ: ಇಂದು ಒಂದೇ ದಿನ 2764 ವಿದ್ಯಾರ್ಥಿಗಳಿಗೆ ಪಾಸ್ ವಿತರಣೆ

ಬಾಗಲಕೋಟೆಯಲ್ಲಿ ‘KSRTC’ ಬಸ್, ಲಾರಿ ಮಧ್ಯ ಭೀಕರ ಅಪಘಾತ : ಇಬ್ಬರು ಪ್ರಯಾಣಿಕರ ಸಾವು, ಹಲವರಿಗೆ ಗಾಯ!

‘ಹಲೋ’ ಎಂದ ತಕ್ಷಣ ಫೋನ್ ಕಟ್ ಆಯ್ತಾ? ಎಚ್ಚರ ಇದು ಹೊಸ ಸೈಬರ್ ಸ್ಕ್ಯಾಮ್ ಆಗಿರಬಹುದು.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.