ಬೆಂಗಳೂರು: ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಂಶುಪಾಲರಿಗೆ ಅನುಪಾತ ಗಳಿಕೆ ರಜೆ ಸೌಲಭ್ಯವನ್ನು, ನಗಧೀಕರಣ ಸೌಲಭ್ಯವನ್ನು ನೀಡಲು ಕಾಲೇಜು ಶಿಕ್ಷಣ ಇಲಾಖೆ ಅನುಮತಿಸಿದೆ.
BIGG NEWS : ಇಂದು ಸಂಜೆ ಸಿಎಂ ಬೊಮ್ಮಾಯಿ ದೆಹಲಿಗೆ : ಸಚಿವ ಸಂಪುಟ ವಿಸ್ತರಣೆಗೆ ಸಿಗುತ್ತಾ ಗ್ರೀನ್ ಸಿಗ್ನಲ್?
ಈ ಕುರಿತಂತೆ ಕಾಲೇಜು ಶಿಕ್ಷಣ ಇಲಾಖೆಯ ಹೆಚ್ಚುವರಿ ನಿರ್ದೇಶಕರು ಆದೇಶ ಹೊರಡಿಸಿದ್ದು, ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಆಡಳಿತ ಮಂಡಳಿಗಳು ನೇಮಕ ಮಾಡಿಕೊಂಡಿರುವ ಪ್ರಭಾರ ಪ್ರಾಂಶುಪಾಲರುಗಳಿಗೆ ಇಲಾಖೆ, ಸರ್ಕಾರದಿಂದ ಅನುಮೋದನೆ ನೀಡುತ್ತಿಲ್ಲವಾದ್ದರಿಂದ ಹಾಗೂ ಯಾವುದೇ ಹೆಚ್ಚುವರಿ ಆರ್ಥಿಕ ಸೌಲಭ್ಯಗಳನ್ನು ನೀಡದೇ ಇರುವುದರಿಂದ ಅವರುಗಳಿಗೆ ಅನುಪಾತ ಗಳಿಕೆ ರಜೆಯ ಸೌಲಭ್ಯ ಮತ್ತು ಅದರ ನಗದೀಕರಣ ಸೌಲಭ್ಯವನ್ನು ಸಂಬಂಧಪಟ್ಟ ಆಡಳಿತ ಮಂಡಳಿಯು ಭರಿಸಲು ತಿಳಿಸಿರುವಂತೆ ಪತ್ರದಲ್ಲಿ ನಿರ್ದೇಶಿಲಲಾಗಿದೆ ಎಂದಿದ್ದಾರೆ.
ದಿನಾಂಕ 08-08-2022ರಂದು ಅನುದಾನಿತ ಪದವಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಂಶುಪಾಲರು ಮತ್ತು ಪ್ರಭಾರ ಪ್ರಾಂಶುಪಾಲರುಗಳಿಗೆ ಅನುಪಾತ ಗಳಿಕೆ ರಜೆ ಮಂಜೂರಾತಿ ಸಂಬಂಧ ಸರ್ಕಾರಕ್ಕೆ ಮಾರ್ಗದರ್ಶನ ನೀಡುವಂತೆ ಪತ್ರ ಸಲ್ಲಿಸಲಾಗಿದೆ.
BIGG NEWS: ಮೈಶುಗರ್ ಕಾರ್ಖಾನೆಯನ್ನು ಯಾವ ರೀತಿ ಮಾಡಿದರೆಂದು ಗೊತ್ತಿದೆ: ಅಶ್ವತ್ಥ್ ನಾರಾಯಣ
ಈ ಹಿನ್ನಲೆಯಲ್ಲಿ ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಪ್ರಾಂಶುಪಾಲರ ಹುದ್ದೆ ಮಂಜೂರಾಗಿರುವುದಿಲ್ಲ. ಕಾಲೇಜು ಆಡಳಿತ ಮಂಡಳಿಯವರು ಪ್ರಭಾರಿ ಪ್ರಾಂಶುಪಾಲರಿಗೆ ಕರ್ತವ್ಯ ನಿರ್ವಹಿಸಲು ನಿಯಮಿಸಿದವರಿಗೆ ಇಲಾಖೆ, ಸರ್ಕಾರದಿಂದ ಅನುಮೋದನೆ ನೀಡದೆ ಇರುವುದರಿಂದ ಅನುದಾನಿತ ಪದವಿ ಕಾಲೇಜುಗಳ ಪ್ರಭಾರ ಪ್ರಾಂಶುಪಾಲರುಗಳಿಗೆ ಅನುಪಾತ ಗಳಿಕೆ ರಜೆ ಸೌಲಭ್ಯವನ್ನು ಮತ್ತು ಅದನ್ನು ನಗದೀಕರಣ ಸೌಲಭ್ಯವನ್ನು ಆಡಳಿತ ಮಂಡಳಿಯು ಭರಿಸಲು ಈಗಾಗಲೇ ತಿಳಿಸಲಾಗಿರುತ್ತದೆ ಎಂದು ನಿರ್ದೇಶಿಸಿದ್ದಾರೆ. ಅಲ್ಲದೇ ಇದರಂತೆ ಕ್ರಮ ವಹಿಸೋದಕ್ಕೂ ಸೂಚಿಸಿದ್ದಾರೆ.