ನವದೆಹಲಿ : ಪಿಂಚಣಿದಾರರು ಯಾವುದೇ ತೊಂದರೆಯಿಲ್ಲದೇ ಪ್ರತಿ ತಿಂಗಳು ಹಣ ಪಡೆಯಲು ಜೀವನ ಪ್ರಮಾಣಪತ್ರವನ್ನ ಸಲ್ಲಿಸಬೇಕು. ಇಪಿಎಫ್ಒ ನೀಡಿದ ಗಡುವು ನವೆಂಬರ್ 30, 2022 ಆಗಿದ್ದು, ಪ್ರಾಮಾಣಪತ್ರ ಸಲ್ಲಿಸಿದರೆ ಮಾತ್ರ ಪಿಂಚಣಿ ಬರುತ್ತದೆ. ಆದ್ರೆ, ಸಧ್ಯ ಖಾಸಗಿ ವಲಯದಿಂದ ನಿವೃತ್ತರಾದವರಿಗೆ ಸಲ್ಲಿಸುವ ಪ್ರಮಾಣಪತ್ರ ಸಲ್ಲಿಸುವ ದಿನಾಂಕದಲ್ಲಿ ವ್ಯತ್ಯಾಸವಿದೆ.
ಪಿಂಚಣಿ ಪಡೆಯುವ ಖಾಸಗಿ ವಲಯದ ಉದ್ಯೋಗಿಗಳಿಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ ಸಿಹಿಸುದ್ದಿ ನೀಡಿದೆ. ಅವರು ನೌಕರರ ಪಿಂಚಣಿ ಯೋಜನೆ, 1995ರ ಅಡಿಯಲ್ಲಿ 2021 ಡಿಸೆಂಬರ್’ನಲ್ಲಿ ಅಥವಾ ನಂತ್ರ ಜೀವನ ಪ್ರಮಾಣಪತ್ರವನ್ನ ಸಲ್ಲಿಸಿದ್ದರೇ, ಅವ್ರು ಮತ್ತೆ ಸಲ್ಲಿಸುವ ಆಗತ್ಯವಿಲ್ಲ. ಯಾಕಂದ್ರೆ ಅದು ಒಂದು ವರ್ಷದವರೆಗೆ ಮಾನ್ಯವಾಗಿರುತ್ತೆ. ಅಂದ್ರೆ ಅದರ ಜೀವನ ಮಟ್ಟವು 12 ತಿಂಗಳು ಆಗಿರುತ್ತೆ. ಅಂದ್ರೆ ವರ್ಷದಲ್ಲಿ ಒಮ್ಮೆ ಯಾವಾಗ ಬೇಕಾದ್ರು ಜೀವನ ಪ್ರಮಾಣಪತ್ರ ಸಲ್ಲಿಸಬೋದು.
ಈ ಕುರಿತು ಟ್ವೀಟ್ ಮಾಡಿದ ಇಪಿಎಫ್ಒ, “ಜೀವನ ಪ್ರಮಾಣಪತ್ರವು 12 ತಿಂಗಳವರೆಗೆ ಮಾನ್ಯವಾಗಿರುತ್ತದೆ. ಇನ್ಮುಂದೆ ಇಪಿಎಸ್ ಪಿಂಚಣಿದಾರರು ಯಾವುದೇ ಸಮಯದಲ್ಲಿ ಜೀವನ ಪ್ರಮಾಣಪತ್ರವನ್ನು ಸಲ್ಲಿಸಲು ಸಾಧ್ಯವಾಗುತ್ತದೆ. ಇದನ್ನ ಸಾಮಾನ್ಯ ಸೇವಾ ಕೇಂದ್ರ, ಐಪಿಪಿಬಿ, ಅಂಚೆ ಕಚೇರಿ, ಪೋಸ್ಟ್ಮ್ಯಾನ್, ಉಮಂಗ್ ಅಪ್ಲಿಕೇಶನ್ ಇತ್ಯಾದಿಗಳ ಮೂಲಕ ಸಲ್ಲಿಸಬಹುದು. ಆದ್ದರಿಂದ ಜೀವನ ಪ್ರಮಾಣಪತ್ರವನ್ನ ಸಲ್ಲಿಸುವ ಬಗ್ಗೆ ಚಿಂತಿಸುವ ಅಗತ್ಯವಿಲ್ಲ” ಎಂದಿದೆ.