ಬೆಂಗಳೂರು: ರಾಜ್ಯದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಸಿಬ್ಬಂದಿಗಳಿಗೆ ( Outsourced employee ), ಸರ್ಕಾರ ಕನಿಷ್ಠ ವೇತನ ( Minimum Wages ) ಜಾರಿಗೊಳಿಸಿ ಆದೇಶಿಸಿದೆ.
ಈ ಕುರಿತಂತೆ ರಾಜ್ಯ ಕಾರ್ಮಿಕ ಇಲಾಖೆಯ ( Labour Department ) ಸರ್ಕಾರದ ಉಪ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಸಿಬ್ಬಂದಿಗಳನ್ನು ಭದ್ರತಾ ಏಜೆನ್ಸಿ ಮುಖಾಂತರ ನೇಮಸಿಕೊಂಡಿದ್ದಲ್ಲಿ, ದಿನಾಂಕ 28-07-2022ರಲ್ಲಿ ನಿಗದಿಪಡಿಸಿರುವ ಕನಿಷ್ಠ ವೇತನ ದರಗಳನ್ನು ಪಾವತಿಸುವಂತೆ ಸೂಚಿಸಿದ್ದಾರೆ.
BREAKING NEWS: ನಾಳೆ ದೊಡ್ಡಬಳ್ಳಾಪುರದಲ್ಲಿ ನಡೆಯಬೇಕಿದ್ದ ಜನೋತ್ಸವ ಕಾರ್ಯಕ್ರಮ ಮುಂದೂಡಿಕೆ – ಸಿಎಂ ಬೊಮ್ಮಾಯಿ
ಶೌಟಾಲಯಗಳು, ಸ್ನಾನಗೃಹಗಳು, ಒಳಚರಂಡಿಗಳನ್ನು ಶುಚಿ ಮಾಡುವ ಕೆಲಸಗಳಲ್ಲಿ ತೊಡಿರೋರಿಗೆ ಕನಿಷ್ಠ ವೇತನ ದರಗಳಂತೆ ಪಾವತಿಸುವಂತೆ ತಿಳಿಸಿದ್ದಾರೆ.
ಇದಲ್ಲದೇ ಪ್ರತಿ ವರ್ಷ ಏಪ್ರಿಲ್ ನಲ್ಲಿ ಏರಿಕಾಯಗುವ ವ್ಯತ್ಯಸ್ಥ ತುಟ್ಟಿಭತ್ಯೆ ದರಗಳನ್ನು ಸೇರಿಸಿ ಪಾವತಿಸಬೇಕು. ವಿರಾಮ ಒಳಗೊಂಡು ಒಂದು ದಿನಕ್ಕೆ ಎಂಟು ಘಂಟೆಗಳ ಕೆಲಸಕ್ಕಾಗಿ ಕನಿಷ್ಠ ವೇತನವಿದ್ದು, ಇದಕ್ಕಿಂತ ಹೆಚ್ಚು ಕೆಲಸ ಮಾಡಿದ್ರೇ, ದ್ವಿಗುಣ ದರದಲ್ಲಿ ವೇತನ ಲೆಕ್ಕಹಾಕಿ ನೀಡುವುದು ಎಂದಿದ್ದಾರೆ.
ಮಾಲೀಕರ ಭಾಗದ ಇಎಸ್ಐ, ಪಿಎಫ್ ವಂತಿಗೆ ಹಣವನ್ನು ನೌಕರರ ಭಾಗದ ಇಎಸ್ಐ, ಪಿಎಫ್ ವಂತಿಗೆಗೆ ಸೇರಿಸಿ, ಮಾಲೀಕರು ನೌಕರರ ಇಎಸ್ಐ, ಪಿಎಫ್ ಖಾತೆಗೆ ಜಮಾ ಮಾಡುವಂತೆ ತಿಳಿಸಿದ್ದಾರೆ.
ಇನ್ನೂ ಪ್ರತಿ ತಿಂಗಳು 5ನೇ ದಿನಾಂಕದೊಳಗೆ ನೌಕರರ ಬ್ಯಾಂಕ್ ಖಾತೆಗೆ ವೇತನದ ಹಣವನ್ನು ಜಮೆ ಮಾಡಬೇಕು. ಕ್ರಮಬದ್ಧವಲ್ಲದ ಯಾವುದೇ ಕಟಾವಣೆಗಳನ್ನು ಮಾಡಬಾರದು ಎಂದು ಹೇಳಿದೆ.
BIG NEWS: ಕನ್ನಡದಲ್ಲಿ ಬರೆದ ಚೆಕ್ ಅಮಾನ್ಯಗೊಳಿಸಿದ ಬ್ಯಾಂಕಿಗೆ 85 ಸಾವಿರ ರೂ. ದಂಡ ವಿಧಿಸಿದ ಗ್ರಾಹಕರ ಆಯೋಗ
ಈ ಕುರಿತಂತೆ ಪ್ರತಿಕ್ರಿಯಿಸಿರುವಂತ ರಾಜ್ಯ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ವಿಶ್ವಾರಾಧ್ಯ ಹೆಚ್ ವೈ ಅವರು, ಸರಕಾರವು ಕಾರ್ಮಿಕರ ಸಮಸ್ಯೆಗಳನ್ನು ಅರಿತು ಇಂತಹ ಆದೇಶಗಳು ಬಂದಲ್ಲಿ ನೌಕರರಿಗೆ ಆತ್ಮಸ್ಥೈರ್ಯ ತುಂಬುತ್ತದೆ. ನಮ್ಮ ಸಂಘದ ಪ್ರಮುಖ ಬೇಡಿಕೆಯಾಗಿದೆ ಹೊರಗುತ್ತಿಗೆ ನೌಕರರಿಗೆ ಸರ್ಕಾರದ ಸ್ವಾಮ್ಯದ ಸಂಸ್ಥೆ ಅಥವಾ ಸಂಘವನ್ನು ಸ್ಥಾಪಿಸುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ವರದಿ : ವಸಂತ ಬಿ ಈಶ್ವರಗೆರೆ