ರಾಮನಗರ: ಪೌರಾಡಳಿತ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವಂತ 10,600 ಹೊರಗುತ್ತಿಗೆ ನೌಕರರಿಗೆ ಶೀಘ್ರವೇ ನೇರ ವೇತನ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ ಎಂಬುದಾಗಿ ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜು ಭರವಸೆ ನೀಡಿದ್ದಾರೆ.
‘ಚೆಕ್ ಬೌನ್ಸ್ ಕೇಸ್’ನಲ್ಲಿ ‘ಶಾಸಕ ಕೆ.ವೈ ನಂಜೇಗೌಡ’ಗೆ 49.65 ಲಕ್ಷ ದಂಡ
ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ಪೌರಾಡಳಿತ ಇಲಾಖೆಯಲ್ಲಿ ಒಟ್ಟು 38 ಸಾವಿರ ಕಾರ್ಮಿಕರಿದ್ದು, ಮುಂದೆ ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗೆ ಪೌರಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು ಎಂದರು.
ಖಾತೆ ಮಾಡಿಕೊಡಲು 20 ಲಕ್ಷ ಲಂಚ: ನಗರಸಭೆ ಅಧ್ಯಕ್ಷೆ ಪತಿ, ಇಬ್ಬರು ಸದಸ್ಯರು ಲೋಕಾಯುಕ್ತ ಬಲೆಗೆ
ರಾಜ್ಯ ಸರ್ಕಾರ ಈಗಾಗಲೇ 11,600 ಪೌರ ಕಾರ್ಮಿಕರನ್ನು ಕಾಯಂಗೊಳಿಸಲಾಗಿದೆ. ಈ ಬಳಿಕ ಶೀಘ್ರವೇ ಇಲಾಖೆಯಲ್ಲಿನ ಹೊರ ಗುತ್ತಿಗೆ ನೌಕರರಿಗೆ ನೇರ ವೇತನ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತೆ ಎಂದು ತಿಳಿಸಿದರು.