Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಭಾರತ-ಅಮೆರಿಕ ವಾಣಿಜ್ಯ ಒಪ್ಪಂದ: ಜುಲೈ ಮಧ್ಯಭಾಗದೊಳಗೆ ಮೊದಲ ಹಂತದ ಒಪ್ಪಂದಕ್ಕೆ ಸಹಿ ಸಾಧ್ಯತೆ

​ಭಾರತ-ರಷ್ಯಾ ಬಾಂಧವ್ಯ: ‘ನಮ್ಮದು ವಿಶ್ವಾಸಾರ್ಹ ಮತ್ತು ಸಹೋದರತ್ವದ ಸಂಬಂಧ’: ವ್ಲಾಡಿಮಿರ್ ಪುಟಿನ್

ರಾಜ್ಯದಲ್ಲಿ ಖಾಸಗಿ ಶಾಲೆಗಳ ನೋಂದಣಿಗೆ ಜೂನ್ 30ರ ವರೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಸರ್ಕಾರದಿಂದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : `ಶುಲ್ಕ ನಿಯಂತ್ರಣ ಪ್ರಾಧಿಕಾರ’ ರಚನೆ!
KARNATAKA

ರಾಜ್ಯ ಸರ್ಕಾರದಿಂದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : `ಶುಲ್ಕ ನಿಯಂತ್ರಣ ಪ್ರಾಧಿಕಾರ’ ರಚನೆ!

By kannadanewsnow57

ಬೆಂಗಳೂರು : ರಾಜ್ಯದಲ್ಲಿ ನರ್ಸಿಂಗ್‌ ಕಾಲೇಜುಗಳ ಶುಲ್ಕ ನಿಯಂತ್ರಣಕ್ಕೆ ಪ್ರಾಧಿಕಾರ ರಚಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣ್‌ ಪ್ರಕಾಶ್‌ ಪಾಟೀಲ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೆಂಗಳೂರಿನ ವಿಕಾಸಸೌಧದಲ್ಲಿ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಅವರು ಈ ಸೂಚನೆ ನೀಡಿದರು.

ರಾಜ್ಯದ ನರ್ಸಿಂಗ್‌ ಕಾಲೇಜುಗಳಲ್ಲಿ ಅಧಿಕ ಶುಲ್ಕ ವಸೂಲು ಮಾಡುತ್ತಿರುವ ಬಗ್ಗೆ ನಮ್ಮ ಕಚೇರಿಗೆ ಹಲವಾರು ದೂರುಗಳು ಸಲ್ಲಿಕೆಯಾಗಿವೆ. ಇದರಿಂದ ವಿದ್ಯಾರ್ಥಿಗಳ ಹಣಕಾಸಿನ ಹೊರೆಯನ್ನು ಹೊರಬೇಕಾಗಿದೆ. ಇದನ್ನ ತಪ್ಪಿಸುವ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಜಂಟಿ ಕಾರ್ಯದರ್ಶಿಗಳ ನೇತೃತ್ವದಲ್ಲಿ 5 ಜನ ಸದಸ್ಯರುಗಳ “ಶುಲ್ಕ ನಿಯಂತ್ರಣ ಪ್ರಾಧಿಕಾರವನ್ನು” ರಚಿಸಲಾಗುವುದು. ನರ್ಸಿಂಗ್‌ ಕಾಲೇಜುಗಳ ಶುಲ್ಕಗಳನ್ನ ಪರಿಶೀಲಿಸುವ ಕಾರ್ಯವನ್ನು ಈ ಪ್ರಾಧಿಕಾರಕ್ಕೆ ವಹಿಸಲಾಗಿದೆ. ಸರಕಾರ ನಿಗದಿಪಡಿಸಿರುವ ಶುಲ್ಕಕ್ಕೂ ಹೆಚ್ಚು ಶುಲ್ಕವನ್ನು ವಸೂಲು ಮಾಡುತ್ತಿರುವ ಸಂಸ್ಥೆಗಳ ಎಸೆನ್ಶಿಯಲ್‌ ಸರ್ಟಿಫಿಕೇಟ್‌ ಹಾಗೂ ಫೀಸಿಬಲಿಟಿ ಸರ್ಟಿಫಿಕೇಟ್‌ ನ್ನ ರದ್ದುಗೊಳಿಸುವಂತೆಯೂ ಅಧಿಕಾರಿಗಳಿಗೆ ಸಚಿವ ಡಾ. ಶರಣ ಪ್ರಕಾಶ್‌ ಪಾಟೀಲ್‌ ಸೂಚನೆ ನೀಡಿದರು .

ಪ್ರಸ್ತುತ ಸರಕಾರಿ ಕೋಟಾದ ಅಡಿಯಲ್ಲಿ ಭರ್ತಿಯಾಗುವ ವಿದ್ಯಾರ್ಥಿಗಳಿಗೆ 10,000. ಮ್ಯಾನೇಜ್‌ ಮೆಂಟ್‌ ಕೋಟಾದ ಅಡಿಯಲ್ಲಿ ಭರ್ತಿಯಾಗುವ ವಿದ್ಯಾರ್ಥಿಗಳಿಗೆ 1 ಲಕ್ಷ ಮತ್ತು ನಾನ್‌-ಕರ್ನಾಟಕ ವಿದ್ಯಾರ್ಥಿಗಳಿಗೆ 1.40 ಲಕ್ಷ ರೂಪಾಯಿಗಳ ಶುಲ್ಕವನ್ನು ನಿಗದಿಪಡಿಸಲಾಗಿದೆ. ರಾಜ್ಯದಲ್ಲಿ 611 ನರ್ಸಿಂಗ್‌ ಕಾಲೇಜುಗಳಿದ್ದು 35,000 ಸೀಟ್‌ ಗಳು ಲಭ್ಯವಿವೆ. ಅಲ್ಲದೇ, ಈ ಶುಲ್ಕವನ್ನು ಶೇಕಡಾ 20 ರಷ್ಟು ಹೆಚ್ಚಿಸುವಂತೆ ನರ್ಸಿಂಗ್‌ ಕಾಲೇಜುಗಳ ಆಡಳಿತ ಮಂಡಳಿಯ ಪ್ರತಿನೀಧಿಗಳು ಇತ್ತೀಚೆಗೆ ಮಾಡಿದ ಮನವಿಯನ್ನು ಸಚಿವ ಶರಣ ಪ್ರಕಾಶ್‌ ಪಾಟೀಲ್‌ ತಿರಸ್ಕರಿಸಿದ್ದಾರೆ.

ಈ ಸಮಿತಿಯು ಬಿಎಸ್ಸಿ, ನರ್ಸಿಂಗ್‌ ಹಾಗೂ ಜನರಲ್‌ ನರ್ಸಿಂಗ್‌ ಮತ್ತು ಮಿಡ್‌ವೈಪ್ರೀ (ಜಿಎನ್‌ಎಂ) ಡಿಪ್ಲಮೋ ಪ್ರೋಗ್ರಾಂ ಗಳ ಶುಲ್ಕದ ಬಗ್ಗೆಯೂ ನಿಗಾವಹಿಸಲಿದೆ.

ಹಾಗೆಯೇ, ಜಿಲ್ಲಾಧಿಕಾರಿಗಳ ಸಭೆಯನ್ನು ಆಯೋಜಿಸಿ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿರುವ ಜಿಎನ್‌ಎಂ ನರ್ಸಿಂಗ್‌ ಕಾಲೇಜುಗಳಲ್ಲಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಬೇಕು. ಒಂದು ತಿಂಗಳ ಒಳಗಾಗಿ ಸರಕಾರಕ್ಕೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಲು ವೈದ್ಯಕೀಯ ಶಿಕ್ಷಣ ಕಾರ್ಯದರ್ಶಿಗಳಾದ ಮೊಹಮ್ಮದ್‌ ಮೋಶಿನ್‌ ಅವರಿಗೆ ಸೂಚನೆ ನೀಡಿದರು.

ಬಿಎಸ್‌ಸಿ ನರ್ಸಿಂಗ್‌ ಕಾಲೇಜುಗಳಿಗೆ ಸಂಬಂಧಿಸಿದಂತೆ ಒಂದು ಪರಿಶೀಲನಾ ತಂಡವನ್ನು ರಚಿಸಿ ವರದಿ ನೀಡುವಂತೆ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಾದ ಡಾ. ಬಿ.ಎಲ್‌ ಸುಜಾತಾ ಅವರಿಗೆ ಸೂಚನೆ ನೀಡಿದರು.

ನರ್ಸಿಂಗ್‌ ಕಾಲೇಜುಗಳಲ್ಲಿ ಅಗತ್ಯ ಸೌಲಭ್ಯಗಳು, ಭೋಧಕ ಮತ್ತು ಭೋಧಕೇತರ ಸಿಬ್ಬಂದಿಗಳು, ಲ್ಯಾಬೋರೋಟರಿಗಳು, ಗ್ರಂಥಾಲಯಗಳು ಹಾಗೂ ಹೈಜೀನ್‌ ಸ್ಟಾಂರ್ಡ್‌ಡ್‌ ಇಲ್ಲದೇ ಇರುವ ಬಗ್ಗೆ ಹಲವು ದೂರುಗಳು ನಮ್ಮ ಕಚೇರಿಗೆ ಸಲ್ಲಿಕೆಯಾಗಿವೆ. ಹೆಚ್ಚು ಶುಲ್ಕವನ್ನು ತಗೆದುಕೊಳ್ಳುವುದರ ಹೊರತಾಗಿಯೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಸಂಸ್ಥೆಗಳು ವಿಫಲವಾಗಿವೆ. ಅಗತ್ಯ ಸೌಲಭ್ಯಗಳನ್ನು ಹೊಂದಿರದೇ ಇರುವ ನರ್ಸಿಂಗ್‌ ಕಾಲೇಜುಗಳ ಅನುಮತಿಯನ್ನ ಹಿಂದಕ್ಕೆ ಪಡೆಯಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.

ಒಂದು ಕಟ್ಟಡ ಒಂದು ಸಂಸ್ಥೆ ನಿಯಮ:
ನರ್ಸಿಂಗ್‌ ಕಾಲೇಜುಗಳನ್ನು ನಡೆಸಲು ಅನುಮತಿ ಪಡೆದಿರುವ ಕಟ್ಟಡಗಳಲ್ಲಿ ನರ್ಸಿಂಗ್‌ ಕೋರ್ಸುಗಳನ್ನು ಮಾತ್ರ ನಡೆಸಬೇಕು. ಬೇರೆ ಯಾವುದೇ ಕೋರ್ಸುಗಳನ್ನು ನಡೆಸುತ್ತಿದ್ದರೆ ಅಂತಹ ಕಾಲೇಜುಗಳ ಅನುಮತಿಯನ್ನು ಹಿಂಪಡೆಯಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ರಾಜೀವ್‌ ಗಾಂಧಿ ಯೂನಿರ್ಸಿಟಿ ಆಫ್‌ ಹೆಲ್ತ ಸೈನ್ಸ್‌ಸ್‌ ನ ಉಪ-ಕುಲಪತಿಗಳಾದ ಡಾ ರಮೇಶ್‌, ರಿಜಿಸ್ಟ್ರಾರ್‌ ಪಿ.ಆರ್‌ ಶಿವಪ್ರಸಾದ್‌, ಜಂಟಿ ಕಾರ್ಯದರ್ಶಿಗಳಾದ ವೆಂಕಟೇಶ್‌ ಮೂರ್ತಿ ಪಾಲ್ಗೊಂಡಿದ್ದರು.

Good news for nursing students: State govt to set up 'fee regulatory authority' ರಾಜ್ಯ ಸರ್ಕಾರದಿಂದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : `ಶುಲ್ಕ ನಿಯಂತ್ರಣ ಪ್ರಾಧಿಕಾರ' ರಚನೆ!
Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ ಖಾಸಗಿ ಶಾಲೆಗಳ ನೋಂದಣಿಗೆ ಜೂನ್ 30ರ ವರೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

2 Mins Read

BIG NEWS : ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : `ರೇಷನ್ ಸಮಸ್ಯೆ’ ನಿವಾರಣೆಗೆ ಬರುತ್ತಿದೆ ‘ಸ್ಮಾರ್ಟ್ ಅನ್ನವಾಣಿ’!

2 Mins Read

ರಾಜ್ಯದ ಜನರೇ ಗಮನಿಸಿ : ಜೂನ್.30ರಿಂದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಆರಂಭ.!

4 Mins Read
Recent News

​ಭಾರತ-ಅಮೆರಿಕ ವಾಣಿಜ್ಯ ಒಪ್ಪಂದ: ಜುಲೈ ಮಧ್ಯಭಾಗದೊಳಗೆ ಮೊದಲ ಹಂತದ ಒಪ್ಪಂದಕ್ಕೆ ಸಹಿ ಸಾಧ್ಯತೆ

​ಭಾರತ-ರಷ್ಯಾ ಬಾಂಧವ್ಯ: ‘ನಮ್ಮದು ವಿಶ್ವಾಸಾರ್ಹ ಮತ್ತು ಸಹೋದರತ್ವದ ಸಂಬಂಧ’: ವ್ಲಾಡಿಮಿರ್ ಪುಟಿನ್

ರಾಜ್ಯದಲ್ಲಿ ಖಾಸಗಿ ಶಾಲೆಗಳ ನೋಂದಣಿಗೆ ಜೂನ್ 30ರ ವರೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

​ಮ್ಯಾನ್ಮಾರ್‌ನಲ್ಲಿ ಭೂಕಂಪನ: ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲು | Earthquake

State News
KARNATAKA

ರಾಜ್ಯದಲ್ಲಿ ಖಾಸಗಿ ಶಾಲೆಗಳ ನೋಂದಣಿಗೆ ಜೂನ್ 30ರ ವರೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

By kannadanewsnow57 KARNATAKA 2 Mins Read

ಬೆಂಗಳೂರು: ರಾಜ್ಯದಲ್ಲಿ 2026-27ನೇ ಶೈಕ್ಷಣಿಕ ಸಾಲಿಗೆ ಹೊಸದಾಗಿ ಶಾಶ್ವತ ಅನುದಾನರಹಿತ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಪ್ರಾರಂಭಿಸಲು ಹಾಗೂ…

BIG NEWS : ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : `ರೇಷನ್ ಸಮಸ್ಯೆ’ ನಿವಾರಣೆಗೆ ಬರುತ್ತಿದೆ ‘ಸ್ಮಾರ್ಟ್ ಅನ್ನವಾಣಿ’!

ರಾಜ್ಯದ ಜನರೇ ಗಮನಿಸಿ : ಜೂನ್.30ರಿಂದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಆರಂಭ.!

ಇಂದು ಮಧ್ಯಾಹ್ನ 12 ಗಂಟೆಗೆ ಕರ್ನಾಟಕ `UG-CET’ ಪರೀಕ್ಷೆಯ ಫಲಿತಾಂಶ ಪ್ರಕಟ : ಈ ರೀತಿ ರಿಸಲ್ಟ್ ಚೆಕ್ ಮಾಡಿ |UG-CET Result 2026

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.