ಬೆಂಗಳೂರು: ರಾಜ್ಯ ಸರ್ಕಾರದಿಂದ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರುಗಳಿಗೆ ಗೌರವಧನವನ್ನು ವಿತರಿಸೋದಕ್ಕೆ ಆದೇಶಿಸಲಾಗಿದೆ. ಇದಲ್ಲದೇ ಇನ್ಮುಂದೆ ರಾಷ್ಟ್ರ, ರಾಜ್ಯ ಪ್ರಶಸ್ತಿ ಪಡೆಯಲಿರುವಂತ ಸೇವಾ ನಿರತ ಶಿಕ್ಷಕರಿಗೆ ಉತ್ತೇಜನ ನಗದು ಪುರಸ್ಕಾರವನ್ನು ಹೆಚ್ಚಿಸಿಲಾಗಿದೆ. ಈ ಮೂಲಕ ಪ್ರಶಸ್ತಿ ಪುರಸ್ಕೃತ ನಿವೃತ್ತ, ಪ್ರಶಸ್ತಿ ಪಡೆಯಲಿರುವಂತ ಸೇವಾನಿರತ ಶಿಕ್ಷಕರಿಗೆ ಗುಡ್ ನ್ಯೂಸ್ ನೀಡಿದೆ.
ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆದೇಶ ಹೊರಡಿಸಲಾಗಿದ್ದು, ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರುಗಳಿಗೆ ಮಾತ್ರ ಕ್ರಮವಾಗಿ ರೂ.250 ಮತ್ತು 150 ಗೌರವ ಧನವನ್ನು ಪಾವತಿಸುವಂತೆ ತಿಳಿಸಲಾಗಿದೆ.
ಇನ್ನೂ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳೆರಡನ್ನು ಪಡೆದು ಈಗಾಗಲೇ ನಿವೃತ್ತಿ ಹೊಂದಿರುವಂತ ಶಿಕ್ಷಕರುಗಳಿಗೆ ಮಾಸಿಕ ರೂ 250 ಗೌರವಧವನ್ನು ನೀಡುವಂತೆ ಸೂಚಿಸಿದೆ.
ಇದಲ್ಲದೇ ಇನ್ಮುಂದೆ ರಾಷ್ಟ್ರ ಪ್ರಶಸ್ತಿ ಪಡೆಯುವ ಸೇವಾನಿರತ ಶಿಕ್ಷಕರಿಗೆ ಉತ್ತೇಜನ ನಗದು ಪುರಸ್ಕಾರದ ಮೊತ್ತವನ್ನು ರೂ.25,000 ದಿಂದ 50,000 ಸಾವಿರಕ್ಕೆ ಹೆಚ್ಚಿಸಲಾಗಿದೆ. ರಾಜ್ಯ ಪ್ರಶಸ್ತಿ ಪಡೆಯುವ ಸೇವಾ ನಿರತ ಶಿಕ್ಷಕರಿಗೆ ಉತ್ತೇಜನ ನಗದು ಪುರಸ್ಕಾರದ ಮೊತ್ತವನ್ನು ರೂ.10,000ದಿಂದ ರೂ.25,000ಗಳಿಗೆ ಪರಿಷ್ಕರಿಸಲಾಗಿದೆ.
‘ಭಾರತ್ ಜೋಡೋ ಯಾತ್ರೆ’ : ರಾಯಚೂರಿನಲ್ಲಿ ರಾಜ್ಯ ‘ಕೈ’ ನಾಯಕರ ಪತ್ನಿಯರ ಜೊತೆ ‘ರಾಗಾ’ ಹೆ್ಜ್ಜೆ |Bharath Jodo Yathra
ದಿನಾಂಕ 23-07-1985ರಿಂದ 12-09-2022ರ ಅವಧಿಯಲ್ಲಿ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತರಾಗಿ, ಈ ಅವಧಿಯಲ್ಲಿ ನಿವೃತ್ತರಾಗಿರುವ ಶಿಕ್ಷಕ, ಮುಖ್ಯ ಶಿಕ್ಷಕರ ಸೇವಾವಿವರಗಳು, ವಿಳಾಸ ಮತ್ತು ಅವರ ಬ್ಯಾಂಕ್ ಖಾತೆಯ ವಿವರಗಳನ್ನು ಕಳುಹಿಸುವಂತೆ ಸೂಚಿಸಲಾಗಿದೆ. ದಿನಾಂಕ 27-10-2022ರೊಳಗಾಗಿ ಸಲ್ಲಿಸುವಂತೆ ಆಯಾ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.