ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗರಿಗೆ ಸಿಹಿಸುದ್ದಿಯಾಗಿದ್ದು, ಮೆಟ್ರೋ ನಿಲ್ದಾಣದಿಂದ ಇತರ ಸ್ಥಳಗಳಿಗೆ ತೆರಳುವುದಕ್ಕಾಗಿ ʻಮೊದಲ ಬಾರಿಗೆ ಮಿನಿ ಎಲೆಕ್ಟ್ರಿಕ್ ಬಸ್ (Electric Feeder Bus) ಸೇವೆ ʼ ನೀಡಲು ಬಿಎಂಟಿಸಿ (BMTC) ಮುಂದಾಗಿದೆ.
ಕೇಂದ್ರ ಸರ್ಕಾರದ 13 ಕೋಟಿ ಅನುದಾನದಿಂದ. ಇದೀಗ ಮಿನಿ ಎಲೆಕ್ಟ್ರಿಕ್ ಕಂಡಕ್ಟರ್ ಲೇಸ್ ಬಸ್ ಸೇವೆ ನೀಡಲು ಬಿಎಂಟಿಸಿ ಮುಂದಾಗಿದೆ. ಮೆಟ್ರೋ ನಿಲ್ದಾಣದಿಂದ ಇತರ ಸ್ಥಳಗಳಿಗೆ ಹೋಗಲು ಅನುಕೂಲವಾಗುವಂತೆ 100 ಮಿನಿ ಬಸ್ ಆರಂಭ ಮಾಡಲು ಬಿಎಂಟಿಸಿ ಯೋಚಿಸಿದೆ.
ಇದು ನೋಡಕ್ಕೆ ಬಸ್ ಗಿಂತ ಚಿಕ್ಕದಾಗಿದ್ದು, ವ್ಯಾನ್ ಎಂದು ಕರೆಯಲು ಬಹುದು . ಸುಮಾರು 25 ರಿಂದ 30 ಜನ ಪ್ರಯಾಣಿಕರು ಸಂಚಾರ ಮಾಡಬಹುದಾದ ಈ ಎಲೆಕ್ಟ್ರಿಕ್ ಬಸ್ಸಾಗಿದೆ . ಇದು ಕಂಡಕ್ಟರ್ ಲೆಸ್ ಬಸ್ ಆಗಿರಲಿದ್ದು, ಸ್ಮಾರ್ಟ್ ಕಾರ್ಡ್ (Smart Card) ಅಥವಾ ಆನ್ಲೈನ್ (Online) ಮೂಲಕ ಟಿಕೇಟ್ ಖರೀದಿಸಿ ಸಂಚಾರ ಮಾಡಬಹುದು. ಮುಂದಿನ ಆರರಿಂದ ಏಳು ತಿಂಗಳಲ್ಲಿ ಈ ಮಿನಿ ಎಲೆಕ್ಟ್ರಿಕ್ ಬಸ್ಗಳು ಬೆಂಗಳೂರಿಗರ ಸೇವೆಗೆ ಸಿಗಲಿದೆ.