ಬೆಂಗಳೂರು: ನಮ್ಮ ಮೆಟ್ರೋ ( Namma Metro ) ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ಬಿಎಂಟಿಸಿಯಿಂದ ( BMTC ) ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಿಂದ ಕಬ್ಬನ್ ಪಾರ್ಕ್ ( Cubbon Park ) ಮೆಟ್ರೋ ನಿಲ್ದಾಣಕ್ಕೆ ನೂತನ ಮೆಟ್ರೋ ಫೀಡರ್ ಮಾರ್ಗವನ್ನು ಪರಿಚಯಿಸುತ್ತಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಬಿಎಂಟಿಸಿಯು, ಮೆಟ್ರೋ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಮೆಟ್ರೋ ಫೀಡರ್ ಮಾರ್ಗ ಸಂಖ್ಯೆ ಎಂ ಎಫ್ -8 ಅನ್ನು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಿಂದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಕ್ಕೆ ಕನ್ನಿಂಗ್ ಹ್ಯಾಂ ರಸ್ತೆ, ಜೈನ್ ಆಸ್ಪತ್ರೆ, ಸರ್ದಾರ್ ಪಟೇಲ್ ಭವನ, ಗಣೇಶ ದೇವಸ್ಥಾನ, ಮೌಂಟ್ ಕಾರ್ಮೆಲ್ ಕಾಲೇಜು, ಕಲ್ಪನಾ ಸರ್ಕಲ್, ಸೇಂಟ್ ಆನ್ಸ್, ಆಲಿ ಆಸ್ಕರ್ ರಸ್ತೆ ಮಾರ್ಗವಾಗಿ 2 ಸಾರಿಗೆಗಳನ್ನು ಪರಿಚಯಿಸುತ್ತಿರಾದೋಗಿ ತಿಳಿಸಿದೆ.
ಇನ್ನೂ ಈ ಮಾರ್ಗದಲ್ಲಿ ಬಿಎಂಟಿಸಿ ಬಸ್ ಸಂಚಾರವು ಬೆಳಿಗ್ಗೆ 6.20ರಿಂದ ಆರಂಭಗೊಂಡು, ಸಂಜೆ 8.45ರವರೆಗೆ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಿಂದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಕ್ಕೆ ಸಂಚರಿಸಲಿದೆ. ಈ ಮಾರ್ಗದ ನಮ್ಮ ಮೆಟ್ರೋ ಪ್ರಯಾಣಿಕರು, ಬಿಎಂಟಿಸಿ ಬಸ್ ( BMTC Bus ) ಸಂಚಾರದ ವ್ಯವಸ್ಥೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕೋರಿದೆ.