ಬೆಂಗಳೂರು: ಎಂಬಿಬಿಎಸ್ ವ್ಯಾಸಂಗದ ( MBBS Course ) ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್ ಅನ್ನು ಕೇಂದ್ರ ಸರ್ಕಾರ ( Union Government ) ನೀಡಿದೆ. ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ 50 ವೈದ್ಯಕೀಯ ಸೀಟುಗಳನ್ನು ( Medical Seat ) ಹಚ್ಚಿಸಿ ಆದೇಶಿಸಿದೆ.
ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯದ ಜನತೆಯ ಆಶೋತ್ತರಗಳಿಗೆ ಸ್ಪಂದನೆ – ಪ್ರಧಾನಿ ನರೇಂದ್ರ ಮೋದಿ
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ ಸುಧಾಕರ್ ( Minister Dr K Sudhakar ) ಅವರು, ಬಳ್ಳಾರಿಯ ವಿಮ್ಸ್ ನಲ್ಲಿ MBBS ಸೀಟುಗಳನ್ನು ಹೆಚ್ಚಿಸಲು ರಾಜ್ಯ ಸರ್ಕಾರ ( Karnataka Government ) ಸಲ್ಲಿಸಿದ್ದ ಮನವಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಅನುಮತಿ ನೀಡಿದ್ದು ಇದೇ ಶೈಕ್ಷಣಿಕ ಸಾಲಿನಿಂದ 50 ಹೆಚ್ಚುವರಿ ಸೀಟುಗಳು ಲಭ್ಯವಾಗಲಿದೆ. ಕಳೆದ 3 ವರ್ಷಗಳಲ್ಲಿ ಬಿಜೆಪಿ ಸರ್ಕಾರ ( BJP Karnataka ) 4 ಹೊಸ ಮೆಡಿಕಲ್ ಕಾಲೇಜು ಹಾಗೂ 750 ಎಂಬಿಬಿಎಸ್ ಸೀಟುಗಳನ್ನು ( MBBS Seat ) ಸೃಷ್ಟಿಸಿದೆ ಎಂದು ತಿಳಿಸಿದ್ದಾರೆ.
ಬಳ್ಳಾರಿಯ ವಿಮ್ಸ್ ನಲ್ಲಿ MBBS ಸೀಟುಗಳನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಅನುಮತಿ ನೀಡಿದ್ದು ಇದೇ ಶೈಕ್ಷಣಿಕ ಸಾಲಿನಿಂದ 50 ಹೆಚ್ಚುವರಿ ಸೀಟುಗಳು ಲಭ್ಯವಾಗಲಿದೆ.
ಕಳೆದ 3 ವರ್ಷಗಳಲ್ಲಿ @BJP4Karnataka ಸರ್ಕಾರ 4 ಹೊಸ ಮೆಡಿಕಲ್ ಕಾಲೇಜು ಹಾಗೂ 750 ಎಂಬಿಬಿಎಸ್ ಸೀಟುಗಳನ್ನು ಸೃಷ್ಟಿಸಿದೆ. pic.twitter.com/JHWRWSr8PX
— Dr Sudhakar K (@mla_sudhakar) September 2, 2022