ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಸರ್ಕಾರಿ ನೌಕರರ ( Government Employees ) ಜೀವ ವಿಮಾ ಪಾಲಿಸಿಗಳ ( life insurance policy ) ಮೇಲೆ ಸಾಲ ಮಂಜೂರಾತಿ ಮತ್ತು ಎಲ್ಲಾ ಬಗೆಯ ಹಕ್ಕು ಪ್ರಕರಣಗಳನ್ನು ಆನ್ ಲೈನ್ ಮೂಲಕ ಇತ್ಯರ್ಥದ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಈ ಮೂಲಕ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದೆ.
ಈ ಬಗ್ಗೆ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ನಿರ್ದೇಶಕರು ಅಧಿಕೃತ ಆದೇಶ ಹೊರಡಿಸಿದ್ದು, ಇಲಾಖೆಯ ಗಣಕೀಕರಣ ಕಾರ್ಯ ಪ್ರಗತಿಯಲ್ಲಿದೆ. ಎಲ್ಲಾ ಬಗೆಯ ಹಕ್ಕು ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಸಾಫ್ಟ್ ವೇರ್ ನ ಅಭಿವೃದ್ಧಿಕಾರ್ಯ ಮುಗಿದಿದೆ. ಅಲ್ಲದೇ ಈ ಸಾಫ್ಟ್ ವೇರ್ ಬಳಕೆ ಬಗ್ಗೆ ತರಬೇತಿ ಕೂಡ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಮಂಡ್ಯ ವಿವಿಗೆ ಇಡೀ ಜಿಲ್ಲೆ ವ್ಯಾಪ್ತಿ – ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ
ಇನ್ನೂ ಜೀವ ವಿಮಾ ಪಾಲಿಸಿಗಳ ಮೇಲೆ ಸಾಲ ಮಂಜೂರಾತಿ ಮತ್ತು ಎಲ್ಲಾ ಬಗೆಯ ಹಕ್ಕು ಪ್ರಕರಣಗಳನ್ನು ಕಡ್ಡಾಯವಾಗಿ ಆನ್ ಲೈನ್ ಮೂಲಕ ಇತ್ಯರ್ಥಗೊಳಿಸಲು ಪ್ರಾಯೋಗಿಕ ಪರೀಕ್ಷೆಗಾಗಿ ಬೆಂಗಳೂರು ನಗರ, ಬೆಳಗಾವಿ, ಕೊಡಗು, ಧಾರವಾಡ, ಮೈಸೂರು, ಯಾದಗಿರಿ ಮತ್ತು ಚಿಕ್ಕಮಗಳಊರು ಜಿಲ್ಲೆಯಲ್ಲಿ ಜಾರಿಗೆ ತರಲಾಗಿದೆ.
‘NEET ಪರೀಕ್ಷಾರ್ಥಿ’ಗಳಿಗೆ ಗುಡ್ ನ್ಯೂಸ್: ನಿಮ್ಮ ಅನುಕೂಲಕ್ಕಾಗಿ ಈ ‘ರೈಲು ಸಂಚಾರ’ದಲ್ಲಿ ಬದಲಾವಣೆ
ಈ ಹಿನ್ನಲೆಯಲ್ಲಿ ಇನ್ಮುಂದೆ ಜೀವ ವಿಮಾ ಕಚೇರಿಗಳಲ್ಲಿ ಸಾಲ ಮಂಜೂರಾತಿ ಮತ್ತು ಎಲ್ಲಾ ಬಗೆಯ ಪ್ರಕರಣಗಳನ್ನು ಕಡ್ಡಾಯವಾಗಿ ಆನ್ ಲೈನ್ ಮೂಲಕ ಇತ್ಯರ್ಥಪಡಿಸುವುದು. ಪ್ರಕರಣಗಳನ್ನು ಆಫ್ ಲೈನ್ ಮೂಲಕ ಇತ್ಯರ್ಥಪಡಿಸುವ ಕಾರ್ಯವನ್ನು ಕಡ್ಡಾಯವಾಗಿ ನಿಲ್ಲಿಸುವಂತೆ ಸೂಚಿಸಿದ್ದಾರೆ.