Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಆಸೆಗಳು ಈಡೇರಲು ಪ್ರತಿದಿನ 30 ಸೆಕೆಂಡ್ ಈ ಚಿತ್ರ ವೀಕ್ಷಿಸಿ

BIG NEWS : ಕೊಟ್ಟ ಸಾಲ ಮರಳಿ ಬರದಿದ್ದಕ್ಕೆ, ಕಾಲೇಜು ಶುಲ್ಕ ಕಟ್ಟಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆ!

SHOCKING : ಮೈಸೂರಲ್ಲಿ ಹೃದಯವಿದ್ರಾವಕ ಘಟನೆ : ಇಬ್ಬರು ಮಕ್ಕಳನ್ನು ನೇಣು ಬಿಗಿದು ಕೊಂದು, ತಾಯಿ ಆತ್ಮಹತ್ಯೆಗೆ ಯತ್ನ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗೂಗಲ್ ಪೇ, ಫೋನ್ ಪೇ ಗ್ರಾಹಕರಿಗೆ ಗುಡ್ ನ್ಯೂಸ್ : ಇಂಟರ್ನೆಟ್ ಇಲ್ಲದಿದ್ದರೂ ಕ್ಷಣಾರ್ಧದಲ್ಲಿ ಹಣ ವರ್ಗಾವಣೆ!
KARNATAKA

ಗೂಗಲ್ ಪೇ, ಫೋನ್ ಪೇ ಗ್ರಾಹಕರಿಗೆ ಗುಡ್ ನ್ಯೂಸ್ : ಇಂಟರ್ನೆಟ್ ಇಲ್ಲದಿದ್ದರೂ ಕ್ಷಣಾರ್ಧದಲ್ಲಿ ಹಣ ವರ್ಗಾವಣೆ!

By kannadanewsnow57

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಜೀವನದಲ್ಲೂ ಯುಪಿಐ (UPI) ಅತ್ಯಗತ್ಯ ಭಾಗವಾಗಿ ಮಾರ್ಪಟ್ಟಿದೆ. ಕಿರಾಣಿ ಅಂಗಡಿಯಲ್ಲಿ ಒಂದು ರೂಪಾಯಿಯ ಚಾಕಲೇಟ್ ಕೊಳ್ಳುವುದರಿಂದ ಹಿಡಿದು, ಶೋರೂಮ್‌ಗಳಲ್ಲಿ ಕಾರು, ಬಂಗಾರದಂತಹ ದುಬಾರಿ ವಸ್ತುಗಳನ್ನು ಖರೀದಿಸುವವರೆಗೆ ಗೂಗಲ್ ಪೇ (Google Pay), ಫೋನ್ ಪೇ (PhonePe), ಪೇಟಿಎಂ (Paytm) ಆಪ್‌ಗಳ ಮೂಲಕ ಪ್ರತಿದಿನ ಕೋಟ್ಯಂತರ ವಹಿವಾಟುಗಳು ನಡೆಯುತ್ತಿವೆ.

ಆದರೆ, ತುರ್ತು ಸಂದರ್ಭಗಳಲ್ಲಿ ಇಂಟರ್ನೆಟ್ ಕೈಕೊಟ್ಟಾಗ ಅಥವಾ ನೆಟ್‌ವರ್ಕ್ ಸಮಸ್ಯೆ ಎದುರಾದಾಗ ಗ್ರಾಹಕರು ತೀವ್ರ ತೊಂದರೆ ಅನುಭವಿಸುತ್ತಾರೆ. ಇದೇ ಸಮಸ್ಯೆಗೆ ಪರಿಹಾರವಾಗಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ನೆಟ್ ಇಲ್ಲದೆಯೇ ಹಣ ಕಳುಹಿಸುವ ಅದ್ಭುತ ಸೌಲಭ್ಯವನ್ನು ಜಾರಿಗೆ ತಂದಿದೆ. ಇಂಟರ್ನೆಟ್ ಇಲ್ಲದೆ ಸುಲಭವಾಗಿ ಹಣ ವರ್ಗಾವಣೆ ಮಾಡುವುದು ಹೇಗೆ ಎಂಬ ವಿವರ ಇಲ್ಲಿದೆ.

ಇಂಟರ್ನೆಟ್ ಇಲ್ಲದೆ UPI ಬಳಸಲು ಏನೇನು ಬೇಕು?

ವಿಶೇಷವಾಗಿ ಇಂಟರ್ನೆಟ್ ಸೌಲಭ್ಯ ಸರಿಯಾಗಿ ಇಲ್ಲದ ಗ್ರಾಮೀಣ ಪ್ರದೇಶಗಳು, ಗುಡ್ಡಗಾಡು ಪ್ರದೇಶಗಳ ಜನರಿಗಾಗಿ ಎನ್‌ಪಿಸಿಐ ಈ ಸೇವೆಯನ್ನು ವಿನ್ಯಾಸಗೊಳಿಸಿದೆ. ಆದರೆ, ಈ ಸೇವೆಯನ್ನು ಬಳಸುವ ಮುನ್ನ ನಿಮ್ಮ ಮೊಬೈಲ್‌ನಲ್ಲಿ ಈ ಕೆಳಗಿನ ವಿಷಯಗಳನ್ನು ಪರಿಶೀಲಿಸಿಕೊಳ್ಳಿ:

ನಿಮ್ಮ ಮೊಬೈಲ್ ಸಂಖ್ಯೆಯು ಕಡ್ಡಾಯವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು.

ನೀವು ಈಗಾಗಲೇ ಆ ಸಂಖ್ಯೆಯಲ್ಲಿ UPI ಸೇವೆಯನ್ನು ಸಕ್ರಿಯಗೊಳಿಸಿರಬೇಕು (Activate).

ಇಂಟರ್ನೆಟ್ ಡೇಟಾ ಇಲ್ಲದಿದ್ದರೂ ಪರವಾಗಿಲ್ಲ, ಆದರೆ ಮೊಬೈಲ್ ಸಿಗ್ನಲ್ (ನೆಟ್‌ವರ್ಕ್) ಇರಬೇಕು.

ನಿಮ್ಮ ಮೊಬೈಲ್‌ನಲ್ಲಿ ಸಾಮಾನ್ಯ ಕರೆಗಳು (Normal Calls) ಮತ್ತು ಎಸ್‌ಎಂಎಸ್ (SMS) ಸೌಲಭ್ಯ ಕೆಲಸ ಮಾಡುತ್ತಿರಬೇಕು.

ನೆಟ್ ಇಲ್ಲದೆ ಹಣ ಕಳುಹಿಸುವ ಹಂತಗಳು (Step-by-Step Process)
ನಿಮ್ಮ ಬಳಿ ಇಂಟರ್ನೆಟ್ ಕನೆಕ್ಷನ್ ಇಲ್ಲದಿದ್ದರೆ, ನಿಮ್ಮ ಸಾಮಾನ್ಯ ಮೊಬೈಲ್ ಕೀಪ್ಯಾಡ್ ಮೂಲಕವೇ ಈ ಕೆಳಗಿನಂತೆ ಸರಳವಾಗಿ ಹಣ ವರ್ಗಾವಣೆ ಮಾಡಬಹುದು:

ಹಂತ 1: ಮೊದಲು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ *99# ಗೆ ಡಯಲ್ ಮಾಡಿ. (ಈ ಸೇವೆ ಭಾರತದ ಬಹುತೇಕ ಎಲ್ಲಾ ಪ್ರಮುಖ ಬ್ಯಾಂಕುಗಳಿಗೆ ಅನ್ವಯಿಸುತ್ತದೆ). ಡಯಲ್ ಮಾಡಿದ ತಕ್ಷಣ ನಿಮ್ಮ ಮೊಬೈಲ್ ಸ್ಕ್ರೀನ್ ಮೇಲೆ ಯುಪಿಐ ಸೇವೆಗಳಿಗೆ ಸಂಬಂಧಿಸಿದ ಪಾಪ್-ಅಪ್ ಮೆನು ಕಾಣಿಸಿಕೊಳ್ಳುತ್ತದೆ.

ಹಂತ 2: ನಿಮ್ಮ ಸ್ಕ್ರೀನ್ ಮೇಲೆ ಹಣ ಕಳುಹಿಸಿ (Send Money), ಹಣಕ್ಕಾಗಿ ವಿನಂತಿಸಿ (Request Money), ಬ್ಯಾಲೆನ್ಸ್ ಚೆಕ್ (Check Balance), ಮೈ ಪ್ರೊಫೈಲ್ (My Profile) ನಂತಹ ಹಲವು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ‘ಹಣ ಕಳುಹಿಸಿ’ (Send Money) ಆಯ್ಕೆಯ ಮುಂದಿರುವ ಸಂಖ್ಯೆಯನ್ನು ಟೈಪ್ ಮಾಡಿ ಸಬ್ಮಿಟ್ ಮಾಡಿ.

ಹಂತ 3: ಈಗ ಹಣ ಕಳುಹಿಸಲು ನಿಮಗೆ UPI ID, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ (Account Number) ಮತ್ತು ಐಎಫ್‌ಎಸ್‌ಸಿ (IFSC) ಕೋಡ್‌ನಂತಹ ಆಯ್ಕೆಗಳು ಸಿಗುತ್ತವೆ. ಅದರಲ್ಲಿ ನಿಮಗೆ ಬೇಕಾದ ಒಂದು ಆಯ್ಕೆಯನ್ನು ಆರಿಸಿಕೊಳ್ಳಿ.

ಹಂತ 4: ನೀವು ಯಾರಿಗೆ ಹಣ ಕಳುಹಿಸಬೇಕೋ ಅವರ ಸರಿಯಾದ ವಿವರಗಳನ್ನು ನಮೂದಿಸಬೇಕು. ಆ ಬಳಿಕ ನೀವು ಕಳುಹಿಸಬೇಕಾದ ಮೊತ್ತವನ್ನು (Amount) ನಮೂದಿಸಿ.

ಹಂತ 5: ಕೊನೆಯದಾಗಿ ನಿಮ್ಮ ರಹಸ್ಯ UPI PIN ಸಂಖ್ಯೆಯನ್ನು ನಮೂದಿಸಿ ಕನ್ಫರ್ಮ್ ಮಾಡಿ. ಅಷ್ಟೇ, ಕ್ಷಣಾರ್ಧದಲ್ಲಿ ನಿಮ್ಮ ಹಣ ಅವತಲಿ ವ್ಯಕ್ತಿಯ ಖಾತೆ ಸೇರುತ್ತದೆ. ಹಣ ಯಶಸ್ವಿಯಾಗಿ ವರ್ಗಾವಣೆಯಾದ ಬಗ್ಗೆ ಸ್ಕ್ರೀನ್ ಮೇಲೆ ಸಂದೇಶ ಬರುವುದರ ಜೊತೆಗೆ ಮೊಬೈಲ್‌ಗೆ ಸಾಮಾನ್ಯ ಎಸ್‌ಎಂಎಸ್ ಕೂಡ ಬರುತ್ತದೆ.
ಗ್ರಾಹಕರು ಗಮನಿಸಬೇಕಾದ ಪ್ರಮುಖ ವಿಷಯಗಳು:

ಟೆಲಿಕಾಂ ಶುಲ್ಕಗಳು: ಈ ಆಫ್‌ಲೈನ್ ಸೇವೆಯನ್ನು ಬಳಸಿದ್ದಕ್ಕಾಗಿ ಕೆಲವು ಟೆಲಿಕಾಂ ಕಂಪನಿಗಳು ಸಾಮಾನ್ಯ ಎಸ್‌ಎಂಎಸ್ ಅಥವಾ ಕರೆ ಶುಲ್ಕವನ್ನು ವಿಧಿಸುವ ಸಾಧ್ಯತೆ ಇರುತ್ತದೆ.

ಎಚ್ಚರಿಕೆ ಅಗತ್ಯ: ಆನ್‌ಲೈನ್ ಆಪ್‌ಗಳಂತೆ ಇದರಲ್ಲಿ ಹಣ ಸ್ವೀಕರಿಸುವವರ ಹೆಸರು ಮುಂಚಿತವಾಗಿ ಡಿಸ್‌ಪ್ಲೇ ಆಗದಿರಬಹುದು. ಹಾಗಾಗಿ, ತಪ್ಪು ವಿವರಗಳನ್ನು ನಮೂದಿಸಿದರೆ ಹಣ ಬೇರೆ ಖಾತೆಗೆ ಹೋಗುವ ಅಪಾಯವಿರುತ್ತದೆ. ಸಂಖ್ಯೆಗಳನ್ನು ನಮೂದಿಸುವಾಗ ಎಚ್ಚರವಿರಲಿ.
ಆಪ್‌ ಗಳಲ್ಲಿ ಬಳಸುವಂತೆಯೇ ಈ ವಿಧಾನದಲ್ಲೂ ನಿಮ್ಮ ಯುಪಿಐ ಪಿನ್ (UPI PIN) ವಿವರಗಳನ್ನು ಯಾರಿಗೂ ತಿಳಿಸದೆ ರಹಸ್ಯವಾಗಿಡುವುದು ಅತ್ಯಂತ ಮುಖ್ಯವಾಗಿದೆ.

Good news for Google Pay and PhonePe customers: Instant money transfer even without internet!
Share. Facebook Twitter LinkedIn WhatsApp Email

Related Posts

ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಆಸೆಗಳು ಈಡೇರಲು ಪ್ರತಿದಿನ 30 ಸೆಕೆಂಡ್ ಈ ಚಿತ್ರ ವೀಕ್ಷಿಸಿ

3 Mins Read

BIG NEWS : ಕೊಟ್ಟ ಸಾಲ ಮರಳಿ ಬರದಿದ್ದಕ್ಕೆ, ಕಾಲೇಜು ಶುಲ್ಕ ಕಟ್ಟಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆ!

2 Mins Read

SHOCKING : ಮೈಸೂರಲ್ಲಿ ಹೃದಯವಿದ್ರಾವಕ ಘಟನೆ : ಇಬ್ಬರು ಮಕ್ಕಳನ್ನು ನೇಣು ಬಿಗಿದು ಕೊಂದು, ತಾಯಿ ಆತ್ಮಹತ್ಯೆಗೆ ಯತ್ನ!

2 Mins Read
Recent News

ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಆಸೆಗಳು ಈಡೇರಲು ಪ್ರತಿದಿನ 30 ಸೆಕೆಂಡ್ ಈ ಚಿತ್ರ ವೀಕ್ಷಿಸಿ

BIG NEWS : ಕೊಟ್ಟ ಸಾಲ ಮರಳಿ ಬರದಿದ್ದಕ್ಕೆ, ಕಾಲೇಜು ಶುಲ್ಕ ಕಟ್ಟಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆ!

SHOCKING : ಮೈಸೂರಲ್ಲಿ ಹೃದಯವಿದ್ರಾವಕ ಘಟನೆ : ಇಬ್ಬರು ಮಕ್ಕಳನ್ನು ನೇಣು ಬಿಗಿದು ಕೊಂದು, ತಾಯಿ ಆತ್ಮಹತ್ಯೆಗೆ ಯತ್ನ!

ಬಿಡದಿ ಟೌನ್ ಶಿಪ್ ಎಂದರೆ ಲೂಟಿ ಸ್ಕೀಮ್ : ಸಿಎಂ ಡಿಕೆ ಶಿವಕುಮಾರ್ ವಿರುದ್ಧ HD ಕುಮಾರಸ್ವಾಮಿ ವಾಗ್ದಾಳಿ

State News
KARNATAKA

ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಆಸೆಗಳು ಈಡೇರಲು ಪ್ರತಿದಿನ 30 ಸೆಕೆಂಡ್ ಈ ಚಿತ್ರ ವೀಕ್ಷಿಸಿ

By ವಸಂತ ಬಿ ಈಶ್ವರಗೆರೆ KARNATAKA 3 Mins Read

ನಿಮ್ಮ ಕನಸುಗಳನ್ನು ನನಸಾಗಿಸಲು ನೀವು ಬಯಸಿದರೆ, ನಿಮಗೆ ಮೊದಲನೆಯದು ನಂಬಿಕೆ. ನಾವು ದೃಢಸಂಕಲ್ಪ ಮತ್ತು ಆತ್ಮವಿಶ್ವಾಸವನ್ನು ಹೊಂದಿದ್ದರೆ ಮಾತ್ರ ನಮ್ಮ…

BIG NEWS : ಕೊಟ್ಟ ಸಾಲ ಮರಳಿ ಬರದಿದ್ದಕ್ಕೆ, ಕಾಲೇಜು ಶುಲ್ಕ ಕಟ್ಟಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆ!

SHOCKING : ಮೈಸೂರಲ್ಲಿ ಹೃದಯವಿದ್ರಾವಕ ಘಟನೆ : ಇಬ್ಬರು ಮಕ್ಕಳನ್ನು ನೇಣು ಬಿಗಿದು ಕೊಂದು, ತಾಯಿ ಆತ್ಮಹತ್ಯೆಗೆ ಯತ್ನ!

ಬಿಡದಿ ಟೌನ್ ಶಿಪ್ ಎಂದರೆ ಲೂಟಿ ಸ್ಕೀಮ್ : ಸಿಎಂ ಡಿಕೆ ಶಿವಕುಮಾರ್ ವಿರುದ್ಧ HD ಕುಮಾರಸ್ವಾಮಿ ವಾಗ್ದಾಳಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.