ಬೆಂಗಳೂರು: ಫಿಟ್‌ನೆಸ್ ಕಾಪಾಡಿಕೊಳ್ಳಬೇಕು, ಡಯಟ್ ಮಾಡಬೇಕು ಅನ್ನೋ ಕಾರಣಕ್ಕೆ ಎಷ್ಟೋ ಜನರು ತಮ್ಮ ಇಷ್ಟದ ಬಿರಿಯಾನಿ, ಬರ್ಗರ್ ತಿನ್ನುವುದನ್ನು ಬಿಡುತ್ತಾರೆ. ಆದರೆ ಇನ್ನು ಮುಂದೆ ಹಾಗೆ ಮಾಡಬೇಕಾಗಿಲ್ಲ. ಇದಕ್ಕೆ ಕಾರಣ, ಭಾರತದ ಪ್ರಮುಖ ಆನ್‌ಲೈನ್ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ಸ್ವಿಗ್ಗಿ.
ಹೌದು, ಸ್ವಿಗ್ಗಿ ಬೆಂಗಳೂರಿನಲ್ಲಿ ವಿಶೇಷ ‘ಈಟ್‌ರೈಟ್ ಎಕ್ಸ್‌ಕ್ಲೂಸಿವ್ಸ್’ ಅನ್ನು ಆರಂಭಿಸಿದೆ. ಇದರಲ್ಲಿ ನಗರದ ದಿಗ್ಗಜ ಹೋಟೆಲ್ ಬ್ರ್ಯಾಂಡ್‌ಗಳಾದ ಟ್ರಫಲ್ಸ್, ಎ2ಬಿ (ಅಡ್ಯಾರ್ ಆನಂದ ಭವನ್), ಬಿರಿಯಾನಿ ಬ್ಲೂಸ್, ದಿ ಬೌಲ್ ಕಂಪನಿ, ಪಾಟ್‌ಫುಲ್ ಸೇರಿದಂತೆ ಹಲವು ಸಂಸ್ಥೆಗಳ ಜೊತೆ ಸ್ವಿಗ್ಗಿ ಕೈಜೋಡಿಸಿದೆ. ಇವು ಹೆಚ್ಚಿನ ಪ್ರೋಟೀನ್ ಮತ್ತು ಕಡಿಮೆ ಕ್ಯಾಲೋರಿ ಇರುವ ರುಚಿಕರ ಖಾದ್ಯಗಳನ್ನು ತಯಾರಿಸಿದ್ದು, ಇವುಗಳನ್ನು ಆ್ಯಪ್‌ನಲ್ಲಿ ಪರಿಚಯಿಸಲಾಗಿದೆ.
ಬರ್ಗರ್, ಬಿರಿಯಾನಿ ಇನ್ಮುಂದೆ ‘ಹೆಲ್ತಿ’ & ‘ಟೇಸ್ಟಿ’!
ಹೋಟೆಲ್‌ಗಳು ಕಳೆದ 10-12 ವಾರಗಳಿಂದ ನಿರಂತರವಾಗಿ ಶ್ರಮಿಸಿ, ತಮ್ಮ ಜನಪ್ರಿಯ ಖಾದ್ಯಗಳ ರುಚಿ ಕೆಡದಂತೆ, ಅವುಗಳನ್ನು ಆರೋಗ್ಯಕರವಾಗಿ ವಿನ್ಯಾಸಗೊಳಿಸಿವೆ. ಇದರ ಅಡಿಯಲ್ಲಿ ಗ್ರಾಹಕರಿಗೆ ಹಲವು ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಒಂದಿಷ್ಟು ತಿನಿಸುಗಳ ವಿವರ ಇಲ್ಲಿದೆ.
ಬರ್ಗರ್ ಪ್ರಿಯರಿಗೆ ಟ್ರಫಲ್ಸ್ ಟ್ರೀಟ್: ಬ್ರೆಡ್ ಬನ್ ಬದಲಿಗೆ ಲೆಟಸ್ ಎಲೆಗಳನ್ನು ಬಳಸಿ ಮಾಡಿದ ಹೊಸ ಶೈಲಿಯ ಬರ್ಗರ್‌ಗಳನ್ನು ಟ್ರಫಲ್ಸ್ ಪರಿಚಯಿಸಿದೆ. ಇದರಲ್ಲಿ ತಂದೂರಿ ಪನೀರ್ (22 ಗ್ರಾಂ ಪ್ರೋಟೀನ್), ಟೆಕ್ಸ್ ಮೆಕ್ಸ್ (24 ಗ್ರಾಂ ಪ್ರೋಟೀನ್), ಚಿಕನ್ ಸ್ಟೀಕ್ ಬರ್ಗರ್ (24 ಗ್ರಾಂ ಪ್ರೋಟೀನ್), ಮತ್ತು ಸ್ಲೋ-ಪುಲ್ಡ್ ಚಿಕನ್ ಸಲಾಡ್ (41 ಗ್ರಾಂ ಪ್ರೋಟೀನ್) ಲಭ್ಯವಿವೆ.
ಸೌತ್ ಇಂಡಿಯನ್ ಬ್ರೇಕ್‌ಫಾಸ್ಟ್: ಜನಪ್ರಿಯ ‘ಎ2ಬಿ’ ಹೋಟೆಲ್ ಸಿರಿಧಾನ್ಯಗಳ ದೋಸೆ, ವೆಜ್ ಪಾಯಾ ಇಡ್ಲಿ ಮತ್ತು ಡಬಲ್ ಪನೀರ್ ಉತ್ತಪ್ಪಂ ಪರಿಚಯಿಸಿದ್ದರೆ, ‘ಮಿಲ್ಲೆಟ್ ಎಕ್ಸ್‌ಪ್ರೆಸ್’ ರಾಗಿ ತುಪ್ಪ ಕರಂ ಇಡ್ಲಿ ಹಾಗೂ ರಾಗಿ ಇಡ್ಲಿ ಜೊತೆ ಎಗ್/ಪನೀರ್ ಬುರ್ಜಿಯನ್ನು ನೀಡುತ್ತಿದೆ. ಇದರಲ್ಲಿ 12 ರಿಂದ 25 ಗ್ರಾಂ ಪ್ರೋಟೀನ್ ಸಿಗಲಿದೆ.
ಬಿರಿಯಾನಿ ಲವರ್ಸ್‌ಗೆ ಭರ್ಜರಿ ಪ್ರೋಟೀನ್: ‘ಆಂಧ್ರ ಗನ್ ಪೌಡರ್’ ಬರೋಬ್ಬರಿ 70 ಗ್ರಾಂಗೂ ಹೆಚ್ಚು ಪ್ರೋಟೀನ್ ಇರುವ ಚಿಕನ್ ಮತ್ತು ಎಗ್ ಬಿರಿಯಾನಿ ನೀಡುತ್ತಿದೆ. ಇತ್ತ ‘ಬಿರಿಯಾನಿ ಬ್ಲೂಸ್’ 50 ಗ್ರಾಂ ಪ್ರೋಟೀನ್ ಇರುವ ಚಿಕನ್ ಮತ್ತು ಪನೀರ್ ಬಿರಿಯಾನಿ ಪರಿಚಯಿಸಿದ್ದರೆ, ‘ಪಾಟ್‌ಫುಲ್’ 65 ಗ್ರಾಂ ಪ್ರೋಟೀನ್ ಒಳಗೊಂಡ ಚಿಕನ್ ತಂದೂರಿಯನ್ನು ಮಣ್ಣಿನ ಮಡಕೆಯಲ್ಲಿ ನೀಡುತ್ತಿದೆ.
ಕೀಟೋ ಮತ್ತು ಬೌಲ್ ಮೀಲ್ಸ್: ಕಾರ್ಬ್ಸ್ ಕಡಿಮೆ ತಿನ್ನುವವರಿಗಾಗಿ ‘ಲೋ! ಫುಡ್ಸ್’ 44 ಗ್ರಾಂ ಪ್ರೋಟೀನ್ ಇರುವ ಕ್ರೀಮಿ ಚಿಕನ್ ಸ್ಟೀಕ್ ನೀಡುತ್ತಿದೆ. ಇದರ ಜೊತೆಗೆ ‘ದಿ ಬೌಲ್ ಕಂಪನಿ’, ‘ಹೋಮ್ಲಿ’ ಮತ್ತು ‘ಟ್ರುತ್ ಬೌಲ್’ ಹೋಟೆಲ್‌ಗಳು ರಾಜ್ಮಾ ಮೀಲ್, ಕೋಸ್ಟಲ್ ಫಿಶ್ ಕರಿ, ಮಟರ್ ಪನೀರ್ ಸೇರಿದಂತೆ ಪೌಷ್ಟಿಕಾಂಶಭರಿತ ಬೌಲ್ ಊಟವನ್ನು ಪರಿಚಯಿಸಿವೆ. ‘ಕ್ಯಾಟರ್ಸ್‌ಪಾಯಿಂಟ್’ ಮತ್ತು ‘ಸಲಾಡ್ಸ್‌ಪಾಯಿಂಟ್’ನಲ್ಲಿ 60 ಗ್ರಾಂಗೂ ಅಧಿಕ ಪ್ರೋಟೀನ್ ಇರುವ ಸಲಾಡ್‌ಗಳು ಲಭ್ಯ ಇವೆ.
ಆರ್ಡರ್ ಮಾಡುವುದು ಹೇಗೆ?
ಗ್ರಾಹಕರು ತಮ್ಮ ಸ್ವಿಗ್ಗಿ ಆ್ಯಪ್ ತೆರೆದು, ಅದರಲ್ಲಿ ‘ಈಟ್ ರೈಟ್ʼ (EatRight) ವಿಭಾಗದ ಅಡಿಯಲ್ಲಿರುವ ‘EatRight Exclusives’ ಮೇಲೆ ಕ್ಲಿಕ್ ಮಾಡಿದರೆ, ಈ ಎಲ್ಲಾ ಆರೋಗ್ಯಕರ ಖಾದ್ಯಗಳನ್ನು ಆರ್ಡರ್ ಮಾಡಬಹುದು.
ಈ ಹೊಸ ಲಾಂಚ್ ಬಗ್ಗೆ ಮತ್ತಷ್ಟು ವಿವರಗಳನ್ನು ಹಂಚಿಕೊಂಡಿರುವ ಸ್ವಿಗ್ಗಿಯ ಫುಡ್ ಸ್ಟ್ರಾಟಜಿ ವಿಭಾಗದ ಉಪಾಧ್ಯಕ್ಷ ದೀಪಕ್ ಮಲೂ, “ಜನರು ಏನನ್ನು ತಿನ್ನಲು ಇಷ್ಟಪಡುತ್ತಾರೆ ಮತ್ತು ಆರೋಗ್ಯದ ದೃಷ್ಟಿಯಿಂದ ಏನನ್ನು ತಿನ್ನಬೇಕು ಎನ್ನುವುದರ ನಡುವೆ ದೊಡ್ಡ ಅಂತರವಿದೆ. ನಮ್ಮ ನೆಚ್ಚಿನ ಹಲವು ತಿನಿಸುಗಳನ್ನು ಡಯಟ್ ಕಾರಣಕ್ಕೆ ದೂರ ಇಡುತ್ತೇವೆ. ಆದರೆ, ಆರೋಗ್ಯಕರ ಊಟ ಎಂದರೆ ಅದು ಬೋರಿಂಗ್ ಆಗಿರಬೇಕಿಲ್ಲ. ನಿಮ್ಮಿಷ್ಟದ ತಿನಿಸನ್ನೇ ನೀವು ಹೆಲ್ತಿಯಾಗಿ ತಿನ್ನಬಹುದು ಎಂಬುದನ್ನು ಸಾಬೀತುಪಡಿಸಲು ನಾವು ಈ ಹೆಜ್ಜೆ ಇಟ್ಟಿದ್ದೇವೆ. ಖ್ಯಾತ ಬ್ರ್ಯಾಂಡ್‌ಗಳು ತಮ್ಮ ತಿನಿಸುಗಳಲ್ಲಿ ಪ್ರೋಟೀನ್ ಹೆಚ್ಚಿಸಿ, ರಿಫೈನ್ಡ್ ಪದಾರ್ಥಗಳನ್ನು ಕಡಿಮೆ ಮಾಡಿ ಈ ಮೆನು ಸಿದ್ಧಪಡಿಸಿವೆ,” ಎಂದಿದ್ದಾರೆ.
ಜನವರಿ 2026ರಲ್ಲಿ ಸ್ವಿಗ್ಗಿ ‘ಈಟ್‌ರೈಟ್’ ಆರಂಭಿಸಿದ್ದು, ಇದರ ಅಡಿಯಲ್ಲಿ ಆರೋಗ್ಯಕರ ಆಹಾರವನ್ನು ಜನರಿಗೆ ಸುಲಭವಾಗಿ ತಲುಪಿಸುವ ಗುರಿಯನ್ನು ಹಾಕಿಕೊಂಡಿದೆ. ಸದ್ಯ ದೇಶದ 50ಕ್ಕೂ ಹೆಚ್ಚು ನಗರಗಳಲ್ಲಿ ಈ ಸೇವೆ ಲಭ್ಯವಿದ್ದು, ಬರೋಬ್ಬರಿ 30 ಲಕ್ಷಕ್ಕೂ ಅಧಿಕ ಆರೋಗ್ಯಕರ ತಿನಿಸುಗಳನ್ನು ಹೊಂದಿದೆ. ಪ್ರತಿ ತಿಂಗಳು 50 ಲಕ್ಷಕ್ಕೂ ಹೆಚ್ಚು ಬಳಕೆದಾರರು ಇದರ ಲಾಭ ಪಡೆಯುತ್ತಿದ್ದು, ಬೆಂಗಳೂರಿನಲ್ಲಿ ನಡೆಯುವ ಪ್ರತಿ 6 ಆರ್ಡರ್‌ಗಳಲ್ಲಿ 1 ‘ಈಟ್‌ರೈಟ್’ ಆರ್ಡರ್ ಆಗಿರುವುದು ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಹೊನ್ನಾವರ ಪೊಲೀಸರ ಭರ್ಜರಿ ಕಾರ್ಯಾಚರಣೆ: ಇಬ್ಬರು ಅರೆಸ್ಟ್, ₹17 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ವಶ
ಹೊನ್ನಾವರ ಪೊಲೀಸರ ಭರ್ಜರಿ ಕಾರ್ಯಾಚರಣೆ: ಇಬ್ಬರು ಅರೆಸ್ಟ್, ₹17 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ವಶ








