ನವದೆಹಲಿ : ಭಾರತೀಯ ಕಂಪನಿಗಳು 2023ರಲ್ಲಿ ಸರಾಸರಿ ಶೇಕಡಾ 10ರಷ್ಟು ವೇತನ ಹೆಚ್ಚಳಕ್ಕೆ ಸಾಕ್ಷಿಯಾಗುವ ನಿರೀಕ್ಷೆಯಿದೆ ಎಂದು ಜಾಗತಿಕ ಸಲಹಾ ಸಂಸ್ಥೆ ಡಬ್ಲ್ಯೂಟಿಡಬ್ಲ್ಯೂನ ವರದಿ ಹೇಳಿದೆ. ಬಿಗಿಯಾದ ಕಾರ್ಮಿಕ ಮಾರುಕಟ್ಟೆಯ ಮುಂದುವರಿಕೆ ಮತ್ತು ಹೆಚ್ಚುತ್ತಿರುವ ಹಣದುಬ್ಬರ ಕಳವಳಗಳೇ ಇದಕ್ಕೆ ಕಾರಣವಾಗಿದೆ ಎನ್ನಲಾಗ್ತಿದೆ.
ಇನ್ನು ವಿಲ್ಲೀಸ್ ಟವರ್ಸ್ ವ್ಯಾಟ್ಸನ್ ಅವರ ಸ್ಯಾಲರಿ ಬಜೆಟ್ ಯೋಜನಾ ವರದಿ ಪ್ರಕಾರ, 2022-23ರಲ್ಲಿ ಭಾರತದ ಕಂಪನಿಗಳು ಒಟ್ಟಾರೆ ಶೇ.10ರಷ್ಟು ಜಿಗಿತವನ್ನ ಯೋಜಿಸುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತದಲ್ಲಿ ಅರ್ಧಕ್ಕಿಂತ ಹೆಚ್ಚು ಉದ್ಯೋಗದಾತರು (58 ಪ್ರತಿಶತ) ಪ್ರಸಕ್ತ ಹಣಕಾಸು ವರ್ಷದಲ್ಲಿ ಹೆಚ್ಚಿನ ವೇತನ ಹೆಚ್ಚಳಕ್ಕಾಗಿ ಬಜೆಟ್ ಮಂಡಿಸಿದ್ದಾರೆ. ಆದ್ರೆ, ಅವರಲ್ಲಿ ಕಾಲುಭಾಗ (24.4 ಪ್ರತಿಶತ) ಬಜೆಟ್ʼನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಹಣಕಾಸು ಸೇವೆಗಳು, ಬ್ಯಾಂಕಿಂಗ್, ತಂತ್ರಜ್ಞಾನ, ಮಾಧ್ಯಮ ಮತ್ತು ಗೇಮಿಂಗ್ ಕಂಪನಿಗಳು ಅತ್ಯಧಿಕ ಇನ್ಕ್ರಿಮೆಂಟ್ಗಳನ್ನು ನೀಡುವ ನಿರೀಕ್ಷೆಯೊಂದಿಗೆ ಸರಾಸರಿ ಜಿಗಿತವು ಶೇಕಡಾ 9.8 ರಷ್ಟು ಏರಿಕೆಯಾಗಬಹುದು. 2021-22 ಕ್ಕೆ ಹೋಲಿಸಿದರೆ ಕೇವಲ 5.4 ಪ್ರತಿಶತದಷ್ಟು ಮಾತ್ರ ಬಜೆಟ್ ಅನ್ನು ಕಡಿಮೆ ಮಾಡಲಾಗಿದೆ, ಮತ್ತು ಭಾರತದಲ್ಲಿ ಶೇಕಡಾ 10 ರಷ್ಟು ವೇತನ ಹೆಚ್ಚಳವು ಏಷ್ಯಾ-ಪೆಸಿಫಿಕ್ (ಎಪಿಎಸಿ) ಪ್ರದೇಶದಲ್ಲಿ ಅತ್ಯಧಿಕವಾಗಿದೆ.
ಅಂದ್ಹಾಗೆ, ಮುಂದಿನ ವರ್ಷ ಚೀನಾ ಶೇ.6, ಹಾಂಗ್ ಕಾಂಗ್ ಶೇ.4 ಮತ್ತು ಸಿಂಗಾಪುರ ಶೇ.4ರಷ್ಟು ವೇತನ ಏರಿಕೆ ಕಾಣಲಿದೆ.