ಬೆಂಗಳೂರು: ಕೆಲ ತಿಂಗಳ ಹಿಂದಷ್ಟೇ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ವಿದ್ಯುತ್ ದರ ( Electricity Tariff ) ಹೆಚ್ಚಳ ಮಾಡಲಾಗಿತ್ತು. ಇದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದಂತ ಜನತೆಗೆ ಮತ್ತಷ್ಟು ಹೊರೆ ಬಿದ್ದಂತೆ ಆಗಿತ್ತು. ಈ ಬೆನ್ನಲ್ಲೇ ನ್ಯೂಇಯರ್ ಗೆ ವಿದ್ಯುತ್ ದರ ಕಡಿತಕ್ಕೆ ರಾಜ್ಯ ಸರ್ಕಾರ ಮುಂದಾಗಿ ಎನ್ನಲಾಗಿದೆ. ಈ ಮೂಲಕ ಹೊಸ ವರ್ಷಕ್ಕೆ ವಿದ್ಯುತ್ ದರ ಇಳಿಕೆಯ ( Power tariff slashed ) ಗುಡ್ ನ್ಯೂಸ್ ದೊರೆಯಲಿದೆ ಎಂದು ಹೇಳಲಾಗುತ್ತಿದೆ.
BREAKING NEWS: ಬಿಜೆಪಿಗೆ ರೌಡಿ ಶೀಟ್ ಸೇರ್ಪಡೆ ವಿವಾದದ ಬೆನ್ನಲ್ಲೇ, ಆನೇಕಲ್ ಪುರಸಭೆಗೆ ರೌಡಿಶೀಟರ್ ನಾಮನಿರ್ದೇಶನ
ಈ ಬಗ್ಗೆ ಇಂಧನ ಇಲಾಖೆಯ ಸಚಿವ ವಿ.ಸುನೀಲ್ ಕುಮಾರ್ ( Minister V Sunil Kumar ), ವಿದ್ಯುತ್ ದರ ಕಡಿತ ಪ್ರಸ್ತಾವನೆ ಸಿದ್ಧಪಡಿಸುವಂತೆ ಇಲಾಖೆಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಸಚಿವರ ಸೂಚನೆಯ ಮೇರೆಗೆ ಇಂಧನ ಇಲಾಖೆಯಿಂದ ವಿದ್ಯುತ್ ದರ ಇಳಿಕೆಯ ಪ್ರಸ್ತಾವನೆಯನ್ನು ಎಲ್ಲಾ ಎಸ್ಕಾಂಗಳು ಸಿದ್ಧಪಡಿಸಿ ಕೆ ಇ ಆರ್ ಸಿಗೆ ಸಲ್ಲಿಸಿವೆ ಎಂದು ಹೇಳಲಾಗುತ್ತಿದೆ.
ಸಲ್ಲಿಕೆಯಾಗಿರುವಂತ ಪ್ರಸ್ತಾವನೆಯಲ್ಲಿ ವಿದ್ಯುತ್ ಬಳಕೆದಾರರ ಶುಲ್ಕ ಕಡಿತ ಮಾಡಲು ತೀರ್ಮಾನಿಸಲಾಗಿದೆ ಎನ್ನಲಾಗುತ್ತಿದೆ. ಗೃಹ ಬಳಕೆ ಸೇರಿದಂತೆ ಎಲ್ಲಾ ರೀತಿಯ ಗ್ರಾಹಕರಿಗೆ ಇದರಿಂದ ಅನುಕೂಲ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
Vastu Tips for Wealth: ನೀವು ಸಹ ಈ ಮಾರ್ಗಗಳನ್ನು ಅನುಸರಿಸಿ ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳಿ!
ಅಂದಹಾಗೇ ಪ್ರತಿ ಯೂನಿಟ್ ಗೆ 70 ಪೈಸೆಯಿಂದ 2 ರೂವರೆಗೆ ಶುಲ್ಕ ಇಳಿಕೆ ಆಗಲಿದೆ ಎನ್ನಲಾಗಿದೆ. ಈ ಪ್ರಸ್ತಾವನೆಯನ್ನು ಎಲ್ಲಾ ಎಸ್ಕಾಂಗಳಿಂದ ಕೆ ಇ ಆರ್ ಸಿಗೆ ಸಲ್ಲಿಸಿರುವ ನಿರ್ಧಾರವನ್ನು ಕೈಗೊಂಡಿವೆ ಎನ್ನಲಾಗಿದೆ. ಈ ಮೂಲಕ ಗೃಹ ಬಳಕೆ, ಹೆಚ್ ಟಿ, ಕೈಗಾರಿಕೆ, ವಾಣಿಜ್ಯ ಹಾಗೂ ಎಲ್ ಟಿ ಗ್ರಾಹಕರ ವಿದ್ಯುತ್ ದರ ಇಳಿಕೆ ಆಗಲಿದೆ ಎನ್ನಲಾಗಿದೆ.