ದೆಹಲಿ : ಸೆ.23ರಂದು (ಇಂದು) ‘ರಾಷ್ಟ್ರೀಯ ಸಿನಿಮಾ ದಿನ‘ ಆಚರಣೆ ಹಿನ್ನೆಲೆ, ಇಂದು ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾ ಪ್ರಿಯರಿಗಾಗಿ 75 ರೂಪಾಯಿಗೆ ಟಿಕೆಟ್ ಮಾರಾಟ ಮಾಡಲು ಎಂಎಐ ನಿರ್ಧರಿಸಿದೆ.
‘ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ’ ವತಿಯಿಂದ ಈ ಭರ್ಜರಿ ಆಫರ್ ಅನ್ನು ಪ್ರೇಕ್ಷಕರಿಗೆ ನೀಡಲಾಗುತ್ತಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.
Cinemas recording sold out shows in advance on ‘National Cinema Day’#NationalCinemaDay2022 #September23 pic.twitter.com/PB8v6Xu5D0
— Multiplex Association Of India (@MAofIndia) September 22, 2022
ಇದರಲ್ಲಿ ಪಿವಿಆರ್, ಐನಾಕ್ಸ್, ಸಿನಿಪೊಲಿಸ್ ಸೇರಿದಂತೆ ಹಲವು ಮಲ್ಟಿಪ್ಲೆಕ್ಸ್ ಕಂಪನಿಗಳು ಕೈ ಜೋಡಿಸಿವೆ. ದೇಶಾದ್ಯಂತ ಇರುವ ಅಂದಾಜು 4 ಸಾವಿರ ಸ್ಕ್ರೀನ್ಗಳಲ್ಲಿ ಈ ಆಫರ್ ನೀಡಲಾಗುತ್ತಿದೆ. ಈ ಸುದ್ದಿ ಕೇಳಿ ಸಿನಿಪ್ರಿಯರು ಖುಷಿಪಟ್ಟಿದ್ದಾರೆ.
ಕೊರೊನಾ ನಂತರ ಜನರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವ ಟ್ರೆಂಡ್ ಕಮ್ಮಿ ಆಗಿದೆ. ಜನರನ್ನು ಚಿತ್ರಮಂದಿರದತ್ತ ಸೆಳೆಯಲು ಈ ರೀತಿ ಆಫರ್ ನೀಡಲಾಗುತ್ತಿದೆ. ಇಂದು ಇಡೀ ದೇಶಾದ್ಯಂತ ಇರುವ ಮಲ್ಟಿಪ್ಲೆಕ್ಸ್ನಲ್ಲಿ ‘ರಾಷ್ಟ್ರೀಯ ಸಿನಿಮಾ ದಿನ’ವನ್ನು ಆಚರಿಸಲಾಗುತ್ತಿದೆ.
‘ಬ್ರಹ್ಮಾಸ್ತ್ರ’ ಮತ್ತು ಕನ್ನಡದ ‘ಮಾನ್ಸೂನ್ ರಾಗ’ ಚಿತ್ರ ಸೇರಿದಂತೆ ಹಲವು ಸಿನಿಮಾಗಳು ಮಲ್ಟಿಪ್ಲೆಕ್ಸ್ನಲ್ಲಿ ಪ್ರದರ್ಶನ ಕಾಣುತ್ತಿವೆ. ಆ ಎಲ್ಲ ಸಿನಿಮಾಗಳ ಬೆಲೆ ಇಂದು ಮಲ್ಟಿಪ್ಲೆಕ್ಸ್ಗಳಲ್ಲಿ ಕೇವಲ 75 ರೂಪಾಯಿ ನೀಡಿ ವೀಕ್ಷಿಸಬಹುದಾಗಿದೆ. ಆನ್ಲೈನ್ ಆ್ಯಪ್ಗಳ ಮೂಲಕ ಟಿಕೆಟ್ ಬುಕ್ ಮಾಡಿದರೆ ಹೆಚ್ಚುವರಿ ಶುಲ್ಕ ಆಗಲಿದೆ.
ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (MAI) ಸೆಪ್ಟೆಂಬರ್ 16 ರಂದು ಆಚರಿಸಲು ಯೋಜಿಸಲಾಗಿದ್ದ ರಾಷ್ಟ್ರೀಯ ಸಿನಿಮಾ ದಿನವನ್ನು ಸೆಪ್ಟೆಂಬರ್ 23ರಂದು ನಡೆಸಲಾಗುವುದು ಎಂದು ತಿಳಿಸಿತ್ತು. ಸೆ.16ಕ್ಕೆ ರಾಷ್ಟ್ರೀಯ ಸಿನಿಮಾ ದಿನ ಆಚರಿಸಲು ಎಂಎಐ ನಿರ್ಧರಿಸಿತ್ತು. ಅಂದು ಚಲನಚಿತ್ರ ಟಿಕೆಟ್ಗಳ ಬೆಲೆ ಕೇವಲ 75 ರೂಪಾಯಿ ಇರಲಿದೆ ಎಂದು ಬಂಪರ್ ಆಫರ್ ಘೋಷಿಸಿತ್ತು. ಆದರೆ, ಇದೀಗ ಕಾರ್ಯಕ್ರಮವನ್ನು ಸೆ.23ಕ್ಕೆ ಮುಂದೂಡಲಾಗಿದ್ದು, ಈ ದಿನ ಚಲನಚಿತ್ರ ಟಿಕೆಟ್ಗಳ ಬೆಲೆ ಕೇವಲ 75 ರೂಪಾಯಿ ಇರಲಿದೆ.
ಇನ್ನೂ ತೆಲಂಗಾಣ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಈ ಆಫರ್ ಇರುವುದಿಲ್ಲ. ಇದಕ್ಕೆ ಕಾರಣ ಸಿನಿಮಾ ಟಿಕೆಟ್ಗಳ ಮೇಲೆ ಅಲ್ಲಿನ ಸರ್ಕಾರ ನಿಯಂತ್ರಣ ಹೊಂದಿರುವುದು ಇದಕ್ಕೆ ಕಾರಣವಾಗಿದೆ.