ಬೆಂಗಳೂರು: ನಗರದ ಹೊರ ವಲಯದಲ್ಲಿರುವಂತ ರಿಂಗ್ ರಸ್ತೆಗೆ ಪುನೀತ್ ರಾಜ್ ಕುಮಾರ್ ( Puneeth Rajkumar ) ಅವರ ಹೆಸರನ್ನು ಇಡೋದಕ್ಕೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ. ಈ ಮೂಲಕ ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ.
ಉದ್ಯೋಗಾಂಕ್ಷಿಗಳೇ ಗಮನಿಸಿ : ನ. 4 ರಂದು ಚಿತ್ರದುರ್ಗದಲ್ಲಿ ‘ಉದ್ಯೋಗ ಮೇಳ’ ಆಯೋಜನೆ
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದಂತ ಕಂದಾಯ ಸಚಿವ ಆರ್ ಅಶೋಕ್ ( Revenue Minister R Ashok ) ಅವರು, ಬೆಂಗಳೂರಿನ ರಿಂಗ್ ರಸ್ತೆಗೆ ( Bengaluru Ring Road ) ಪುನೀತ್ ರಾಜ್ ಕುಮಾರ್ ಹೆಸರು ಇಡೋದಕ್ಕೆ ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿದರು.
ದೀಪಾವಳಿಗೆ ಪತ್ರಕರ್ತರಿಗೆ ಗಿಫ್ಟ್ ಕೊಡೋದು ಕಾಮನ್, ಅದರಲ್ಲಿ ಹಣ ಇಟ್ಟಿರೋದು ಸಿಎಂಗೆ ಗೊತ್ತಿಲ್ಲ – ಸಚಿವ ಆರ್ ಅಶೋಕ್
ನಿನ್ನೆ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡುವಂತ ಕಾರ್ಯಕ್ರಮ ತುಂಬಾ ಚೆನ್ನಾಗಿ ನಡೆಯಿತು. ಮಳೆಯ ನಡುವೆಯೂ ಕಾರ್ಯಕ್ರಮ ಚೆನ್ನಾಗಿ ನಡೆಯಿತು ಎಂಬುದಾಗಿ ತಿಳಿಸಿದರು.
BIG BREAKING NEWS: ‘ರಾಜ್ಯ ಸರ್ಕಾರ’ದಿಂದ ‘ಆಡಳಿತ ಯಂತ್ರ’ಕ್ಕೆ ಚುರುಕು: ‘9 ಐಎಎಸ್ ಅಧಿಕಾರಿ’ಗಳಿಗೆ ಹುದ್ದೆ ಹಂಚಿಕೆ
ಇದೇ ವೇಳೆ ಪತ್ರಕರ್ತರಿಗೆ ದೀಪಾವಳಿ ಹಬ್ಬದ ಉಡುಗೋರೆಯಾಗಿ ಸಿಎಂ ಕಚೇರಿಯಿಂದ ಗಿಫ್ಟ್ ಜೊತೆಗೆ ಹಣ ಹಂಚಿಕೆ ಬಗ್ಗೆ ಪ್ರತಿಕ್ರಿಯಿಸಿದಂತ ಅವರು, ದೀಪಾವಳಿಗೆ ಸಿಎಂ ಕಚೇರಿಯಿಂದ ಗಿಫ್ಟ್ ಕೊಡುವುದು ಕಾಮನ್ ಆಗಿದೆ. ಆದ್ರೇ ಅದರಲ್ಲಿ ಹಣ ಇಟ್ಟಿರುವಂತ ವಿಷಯ ಸಿಎಂಗೆ ಗೊತ್ತಿಲ್ಲ. ಅದನ್ನು ಈಗಾಗಲೇ ಅವರೇ ಹೇಳಿದ್ದಾರೆ ಎಂದರು.