ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಶೀಘ್ರವೇ ರಾಜ್ಯ ಸರ್ಕಾರವು ರೈತರ ಬ್ಯಾಂಕ್ ಖಾತೆಗೆ ಡೀಸೆಲ್ ಸಬ್ಸಿಡಿಯನ್ನು ಜಮಾ ಮಾಡಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಘೋಷಣೆ ಮಾಡಿದ್ದಾರೆ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಶೀಘ್ರವೇ ರೈತರ ಬ್ಯಾಂಕ್ ಖಾತೆಗೆ ಡೀಸೆಲ್ ಸಬ್ಸಿಡಿಯನ್ನು ಜಮಾ ಮಾಡಲಿದ್ದು, ಈ ಸಹಾಯಧನ ಪಡೆಯಲು ರೈತರು ಅರ್ಜಿ ಸಲ್ಲಿಸಬೇಕಿಲ್ಲ. ತನ್ನ ಬಳಿ ಇರುವ ಕಿಸಾನ್ ಸಮ್ಮಾನ್ ನಿಧಿ ದತ್ತಾಂಶ ಆಧರಿಸಿ ಸರ್ಕಾರವೇ ನೇರವಾಗಿ ರೈತರ ಖಾತೆಗೆ ಹಣ ಜಮಾ ಮಾಡಲಿದೆ ಎಂದು ತಿಳಿಸಿದ್ದಾರೆ.
BIG NEWS : ಭಾರತದಲ್ಲಿ 69% ಕುಟುಂಬಗಳು ʻಆರ್ಥಿಕ ಅಭದ್ರತೆʼಯೊಂದಿಗೆ ಹೋರಾಡುತ್ತಿವೆ: ಸಮೀಕ್ಷೆ
ರೈತರಿಗೆ ಪ್ರತಿ ಎಕರೆಗೆ 250 ರೂ. ನಂತೆ ಗರಿಷ್ಟ 5 ಎಕರೆಗೆ ಡೀಸೆಲ್ ಸಹಾಯಧನ ನೀಡಲು ಸರ್ಕಾರ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಕಿಸಾನ್ ನಿಧಿ ಯೋಜನೆಯಡಿ ರೈತರಿಗೆ ನೀಡುತ್ತಿರುವ ಪ್ರೋತ್ಸಾಹಧನಕ್ಕಾಗಿ ರಾಜ್ಯದ 53 ಲಕ್ಷ ರೈತರಿಂದ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ. ಜಮೀನು ಪಹಣಿ, ಆಧಾರ್ ಜೋಡಣೆಯೂ ಆಗಿದೆ. ಇದರ ಆಧಾರದ ಮೇಲೆಯೇ 5 ಎಕರೆವರೆಗೆ ಜೀನ ಹೊಂದಿರುವ ರೈತರಿಗೆ ಡೀಸೆಲ್ ಸಬ್ಸಿಡಿ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
BIGG NEWS : ಮನೆ ಕಟ್ಟೋರಿಗೆ ಬಿಗ್ ಶಾಕ್ : ಶೀಘ್ರವೇ ಸಿಮೆಂಟ್ ದರ 30 ರೂ. ಏರಿಕೆ!